ಪ್ರತಿಭಟನೆಗೆ ಬೆದರಿ ಬ್ರಿಟನ್ ಪ್ರವಾಸದಿಂದ ದೂರ ಉಳಿದ ಟ್ರಂಪ್

ಲಂಡನ್, ಜೂನ್ 22: ಇನ್ನೂ ಎರಡು ವರ್ಷಗಳ ಕಾಲ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂಗ್ಲೆಂಡಿಗೆ ಭೇಟಿ ನೀಡುವ ಸಾಧ್ಯತೆಗಳಿಲ್ಲ. ಕಾರಣ ಪ್ರತಿಭಟನೆಯ ಹೆದರಿಕೆ.

ಬುಧವಾರ ಬ್ರಿಟನ್ ರಾಣಿ ಎಲಿಜಬೆತ್ ಭಾಷಣ ಮಾಡಿದ್ದು, ಅವರ ಭಾಷಣದಲ್ಲೆಲ್ಲೂ ಟ್ರಂಪ್ ಭೇಟಿ ಉಲ್ಲೇಖವಾಗಿಲ್ಲ. ಸಾಮಾನ್ಯವಾಗಿ ದೇಶಕ್ಕೆ ಭೇಟಿ ನೀಡುವವರ ವಿವರಗಳು ರಾಣಿಯ ಭಾಷಣದಲ್ಲಿ ಸೇರಿರುತ್ತವೆ. ಆದರೆ ಟ್ರಂಪ್ ಭೇಟಿ ಭಾಷಣದಲ್ಲಿ ಉಲ್ಲೇಖವಾಗದ ಹಿನ್ನಲೆಯಲ್ಲಿ ಅವರ ಬ್ರಿಟನ್ ಬೇಟಿಯನ್ನು ಎರಡು ವರ್ಷಗಳ ಅವಧಿಗೆ ಮುಂದೂಡಲಾಗಿದೆ.

Donald Trump’s UK visit shelved for at least two years

ಲಂಡನ್ ದಾಳಿಯ ವೇಳೆ ಜನರಿಗೆ ಶಾಂತರಾಗಿರುವಂತೆ ಮನವಿ ಮಾಡಿಕೊಂಡಿದ್ದ ಲಂಡನ್ ಮೇಯರ್ ನಿಲುವನ್ನು ಟ್ರಂಪ್ ಟೀಕಿಸಿದ್ದರು. ಇದರ ಬೆನ್ನಿಗೆ ಅವರ ವಿರುದ್ಧ ಟೀಕೆ ಕೇಳಿ ಬಂದಿತ್ತು. ಜತೆಗೆ ಲಂಡನ್ನಿನಲ್ಲಿ ಉಗ್ರ ಪ್ರತಿಭಟನೆಗಳೂ ನಡೆದಿದ್ದವು.

ಈ ಹಿನ್ನಲೆಯಲ್ಲಿ ಪ್ರತಿಭಟನೆಗಳು ನಡೆದರೆ ತಾನು ದೇಶಕ್ಕೆ ಬರುವುದಿಲ್ಲ ಎಂದು ಟ್ರಂಪ್ ಬ್ರಿಟನ್ ಪ್ರಧಾನ ಮಂತ್ರಿ ಥೆರೆಸಾ ಮೇಗೆ ಫೋನ್ ಕರೆ ಮಾಡಿ ಹೇಳಿದ್ದಾರೆ ಎಂದು 'ಗಾರ್ಡಿಯನ್' ವರದಿ ಮಾಡಿದೆ.

ಈ ಹಿಂದೆ ಬ್ರಿಟನ್ ಚುನಾವಣೆಯಲ್ಲಿ ಜಯಶಾಲಿಯಾಗುತ್ತಿದ್ದಂತೆ ಪ್ರಧಾನಿ ಥೆರೆಸಾ ಮೇ ಬ್ರಿಟನಿಗೆ ಬರುವಂತೆ ಟ್ರಂಪ್ ಗೆ ಆಹ್ವಾನ ನೀಡಿದ್ದರು. ಆದರೆ ಪ್ರತಿಭಟನೆಗೆ ಬೆದರಿ ಟ್ರಂಪ್ ಲಂಡನ್ ಭೇಟಿಯಿಂದ ದೂರವೇ ಉಳಿದಿದ್ದಾರೆ.

ಆದರೆ 'ಟ್ರಂಪ್ ಆಹ್ವಾನ ಒಪ್ಪಿಕೊಂಡಿದ್ದಾರೆ. ಆದರೆ ದಿನಾಂಕ ನಿಗದಿಯಾಗದ ಹಿನ್ನಲೆಯಲ್ಲಿ ರಾಣಿಯ ಭಾಷಣದಲ್ಲಿ ಟ್ರಂಪ್ ಭೇಟಿ ಉಲ್ಲೇಖವಾಗಿಲ್ಲ ಎಂದು ಬ್ರಿಟನಿನ ಻ಧಿಕಾರಿಗಳು ಹೇಳಿದ್ದಾರೆ.

ಏನೇ ಆಗಲಿ ತಾನೇ ದೊಡ್ಡಣ್ಣ ಎಂದು ಮೆರೆಯುವ ಅಮೆರಿಕಾ ದೇಶದ ಅಧ್ಯಕ್ಷರೇ ಜನರ ಪ್ರತಿಭಟನೆ ಬೆದರಿರುವುದು ಅಚ್ಚರಿಯ ಬೆಳವಣಿಗೆಯೇ ಸರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+