Donald Trump: 43 ಕೋಟಿ ರೂಪಾಯಿ ಕೊಟ್ಟರೆ ಅಮೆರಿಕದ ಪೌರತ್ವ ಗ್ಯಾರಂಟಿ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏನೇನೋ ಹೊಸ ಹೊಸ ರೂಲ್ಸ್ ತರುತ್ತಿದ್ದು, ಇದು ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡುತ್ತಿದೆ. ಡೊನಾಲ್ಡ್ ಟ್ರಂಪ್ ಇಟ್ಟ ಬತ್ತಿಗೆ ಜಾಗತಿಕ ಮಟ್ಟದಲ್ಲೂ ಅಮೆರಿಕದ ಹೆಸರು ಕೆಡುತ್ತಿದೆ ಎಂಬ ಆರೋಪ ಮಾಡುತ್ತಿದ್ದಾರೆ ವಿರೋಧಿಗಳು. ಹೀಗಿದ್ದಾಗಲೇ, ಅಮೆರಿಕದ ಪೌರತ್ವ ಬೇಕಾದವರಿಗೆ ಹೊಸ ರೂಲ್ಸ್ ಹಾಕಿದ್ದಾರೆ ಡೊನಾಲ್ಡ್ ಟ್ರಂಪ್!
ಡೊನಾಲ್ಡ್ ಟ್ರಂಪ್ ಪಕ್ಕಾ ವ್ಯಾಪಾರದ ಮನೋಭಾವ ಹೊಂದಿರುವ ವ್ಯಕ್ತಿ. ಇದೇ ಕಾರಣಕ್ಕೆ ಎಲ್ಲಾ ವಿಚಾರದಲ್ಲೂ ಬ್ಯುಸಿನೆಸ್ ಬಗ್ಗೆ ಚಿಂತೆ ಮಾಡುತ್ತಾರೆ ಎಂಬ ಆರೋಪ ಕೂಡ ಇದೆ. ಹೀಗೆ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ನೂರಾರು ವಿವಾದಾತ್ಮಕ ನಿರ್ಧಾರ ಪ್ರಕಟಿಸಿದ್ದು, ಜಾಗತಿಕ ಮಟ್ಟದಲ್ಲಿ ಅಮೆರಿಕದ ಮಿತ್ರ ದೇಶಗಳು ಕೂಡ ರೊಚ್ಚಿಗೆದ್ದು ಕೂತಿವೆ. ಇಷ್ಟೆಲ್ಲಾ ಗೊಂದಲಗಳ ನಡುವೆ ಅಮೆರಿಕದ ಪೌರತ್ವ ಬೇಕು ಅಂದ್ರೆ ನೀವು ಇನ್ನುಮುಂದೆ ಬರೋಬ್ಬರಿ 43 ಕೋಟಿ ರೂಪಾಯಿ ಕೊಡಬೇಕಾದ ಅನಿವಾರ್ಯತೆ ಎದುರಾಗಲಿದೆ.

43 ಕೋಟಿ ರೂಪಾಯಿ ಡಿಮ್ಯಾಂಡ್!
ಹೌದು, ಸಾಲದ ಸುಳಿಯಲ್ಲಿ ಒದ್ದಾಡುತ್ತಿರುವ ಅಮೆರಿಕಗೆ ಹೊಸ ರೂಪ ನೀಡಲು ಟ್ರಂಪ್ & ಎಲಾನ್ ಮಸ್ಕ್ ಪ್ಲಾನ್ ಮಾಡಿದ್ದಾರೆ ಎಂಬ ಮಾತು ಇದೆ. ಸಾಲದ ನೆಪ ಹೇಳುತ್ತ ಈಗಾಗಲೇ ಸಾವಿರಾರು ಸರ್ಕಾರಿ ನೌಕರರನ್ನು ಹೊರಗೆ ಕಳುಹಿಸಿದ್ದಾರೆ ಡೊನಾಲ್ಡ್ ಟ್ರಂಪ್. ಇಷ್ಟೆಲ್ಲಾ ಒತ್ತಡದ ನಡುವೆ ಅಕ್ರಮ ವಲಸಿಗರನ್ನು ಕೂಡ ಹೊರ ಹಾಕಲಾಗಿದೆ. ಇದರ ಜೊತೆಗೆ ಇನ್ನು ಮುಂದೆ ಅಮೆರಿಕದ ಪೌರತ್ವ ಪಡೆಯಲು ಬರೋಬ್ಬರಿ 43 ಕೋಟಿ ರೂಪಾಯಿ ನೀಡಬೇಕೆಂಬ ನಿಯಮ ಹೇರಲು ಮುಂದಾಗಿದ್ದಾರೆ.
5 ಮಿಲಿಯನ್ ಅಮೆರಿಕನ್ ಡಾಲರ್!
ಡೊನಾಲ್ಡ್ ಟ್ರಂಪ್ ಇದೀಗ ಪ್ರಸ್ತಾಪ ಮಾಡಿರುವ ಹೊಸ ನಿಯಮದ ಪ್ರಕಾರ, ಜಗತ್ತಿನ ಅತಿ ಶ್ರೀಮಂತರು ಅಮೆರಿಕದ ಪೌರತ್ವ ಪಡೆಯಲು ಸಹಕಾರಿ ಆಗುವಂತೆ ವ್ಯವಸ್ಥೆ ಮಾಡಲಾಗಿದೆ. ಡೊನಾಲ್ಡ್ ಟ್ರಂಪ್ ಶ್ರೀಮಂತ ವಲಸಿಗರಿಗೆ ಗೋಲ್ಡ್ ಕಾರ್ಡ್ ಎಂಬ ಹೊಸ ಕಾನ್ಸೆಪ್ಟ್ ಮೂಲಕ ಅಮೆರಿಕದ ಪೌರತ್ವ ನೀಡಲು ಮುಂದಾಗಿದ್ದಾರೆ. ಶ್ರೀಮಂತ ವಲಸಿಗರು ಈ ಹೊಸ ಕಾರ್ಡ್‌ನ 5 ಮಿಲಿಯನ್ ಅಮೆರಿಕನ್ ಡಾಲರ್ ಕೊಟ್ಟು ಖರೀದಿಸಬೇಕು, ಅಂದ್ರೆ ಇದು ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು 43 ಕೋಟಿ ರೂಪಾಯಿ ಆಗಲಿದೆ.
ಒಟ್ನಲ್ಲಿ ಡೊನಾಲ್ಡ್ ಟ್ರಂಪ್ ಈ ರೀತಿ ಹಣ ಸಂಗ್ರಹ ಮಾಡಿ, ಅಮೆರಿಕದ ಸಾಲ ತೀರಿಸುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಆದರೆ ಈ ರೀತಿಯ ನಿಯಮಗಳ ವಿರುದ್ಧ ಭಾರಿ ಆಕ್ರೋಶ ಇದೀಗ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಗೊಂದಲ ಮೂಡಿಸಲಿದೆ ಎನ್ನುವ ಆರೋಪ ಕೂಡ ಕೇಳಿಬಂದಿದೆ. ಈಗಾಗಲೇ ಸಾಲದ ಸುಳಿಯಲ್ಲಿ ವಿಲವಿಲ ಒದ್ದಾಡುತ್ತಿರುವ ಅಮೆರಿಕಗೆ ಇನ್ನಷ್ಟು ಸಂಕಷ್ಟ ಎದುರಾದರೂ ಅಚ್ಚರಿ ಇಲ್ಲ.












Click it and Unblock the Notifications