Donald Trump: ಡೊನಾಲ್ಡ್ ಟ್ರಂಪ್ ಹೊಸ ಇತಿಹಾಸ, ಶ್ವೇತಭವನಕ್ಕೆ ಸುಂದರಿ ಎಂಟ್ರಿ!

ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಈ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಮತ್ತೊಂದು ಕಡೆ ಈ ರೀತಿಯಾಗಿ ಡೊನಾಲ್ಡ್ ಟ್ರಂಪ್ ಅಮೆರಿಕದ ಶಕ್ತಿಭವನ ವೈಟ್ ಹೌಸ್ ಅಧಿಕಾರ ವಹಿಸಿಕೊಳ್ಳುವ ಮೊದಲು ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡುತ್ತಿದ್ದಾರೆ. ಅದರಲ್ಲೂ ತಮ್ಮ ಸರ್ಕಾರದಲ್ಲಿ ಈಗ ಕೆಲಸ ಮಾಡುವವರ ಪೈಕಿ ಭಾರಿ ನೈಪುಣ್ಯತೆ ಇರುವವರನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವ ಟ್ರಂಪ್, ಇದೀಗ ಮತ್ತೊಂದು ಇತಿಹಾಸ ಬರೆದಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಯಾರು ಏನೇ ಮಾತನಾಡಿದರೂ ಅವರನ್ನು ಅಮೆರಿಕದಲ್ಲಿ ಇರುವ ಮತದಾರರು ಮಾತ್ರ ಕೈಬಿಟ್ಟಿಲ್ಲ. ಅದರಲ್ಲೂ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಖಾಡದಲ್ಲಿ ಡೊನಾಲ್ಡ್ ಟ್ರಂಪ್ ಭರ್ಜರಿ ಗೆಲುವು ಸಾಧಿಸಿ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷ ಪಟ್ಟ ಪಡೆದಿದ್ದಾರೆ. ಇಂತಹ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ತಮ್ಮ ನಿರ್ಧಾರಗಳ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಹೀಗಿದ್ದಾಗಲೇ, ಶ್ವೇತಭವನಕ್ಕೆ ಸುಂದರಿ ಎಂಟ್ರಿ ಆಗಿದೆ!

Donald Trump Picks Youngest White House Press Secretary In The History Of USA

27 ವರ್ಷದ ಸುಂದರಿಗೆ ಪಟ್ಟ!

ಹೌದು, ಡೊನಾಲ್ಡ್ ಟ್ರಂಪ್ ಅವರು ಇದೀಗ ತಮ್ಮ ವೈಟ್‌ಹೌಸ್ ಪತ್ರಿಕಾ ಸಂಪರ್ಕ ಅಧಿಕಾರಿ ಪಟ್ಟಕ್ಕೆ 27 ವರ್ಷದ ಸುಂದರಿಗೆ ಸ್ಥಾನ ನೀಡಿದ್ದಾರೆ. 27 ವರ್ಷ ವಯಸ್ಸಿನ ಲೀವಿಟ್ ಅವರು ಡೊನಾಲ್ಡ್ ಟ್ರಂಪ್ ಸರ್ಕಾರದಲ್ಲಿ, ಶ್ವೇತಭವನ ಪತ್ರಿಕಾ ಸಂಪರ್ಕದ ಹೊಣೆಯನ್ನ ಹೊತ್ತು ಮುನ್ನಡೆಸಲಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನ ಪತ್ರಿಕಾ ಸಂಪರ್ಕ ಅಧಿಕಾರಿ ಆಯ್ಕೆ ಆಗಿದ್ದು ಅಮೆರಿಕದ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗಿದೆ. ಈ ಮೂಲಕ ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬರುವ ಮೊದಲೇ ಹಲವು ಕ್ರಾಂತಿಕಾರಿ ನಿಯಮಗಳ ಮೂಲಕ ಹೆಸರು ಮಾಡುತ್ತಿದ್ದಾರೆ & ಗಮನ ಕೂಡ ಸೆಳೆಯುತ್ತಿದ್ದಾರೆ. ಮತ್ತೊಂದು ಕಡೆ, ಡೊನಾಲ್ಡ್ ಟ್ರಂಪ್ ಅವರ ಕ್ರಾಂತಿಕಾರಿ ನಿರ್ಧಾರಗಳಿಗೆ ನೆರವಾಗಿ ನಿಲ್ಲಲು ದೊಡ್ಡ ಪಡೆಯೇ ಈಗ ಎಲ್ಲಾ ಸನ್ನದ್ಧ ಮಾಡಿಕೊಂಡು ಮುಂದೆ ನುಗ್ಗುತ್ತಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಟ್ರಂಪ್ ಅವರ ಆಡಳಿತ ಇನ್ನಷ್ಟು ಸದ್ದು ಮಾಡುವ ನಿರೀಕ್ಷೆ ಇದೆ.

ಭಾರತ ಮೂಲದವರಿಗೆ ಮೊದಲ ಆದ್ಯತೆ!

ಅಮೆರಿಕದಲ್ಲಿ ಹೋಗಿ ನೆಲೆಸಿರುವ ವಿದೇಶಗರ ಪೈಕಿ ನಮ್ಮ ಭಾರತ ಮೂಲದ ಪ್ರಜೆಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ಹೀಗಾಗಿ ಭಾರತ ಮೂಲದವರಿಗೆ ಸಪೋರ್ಟ್ ಮಾಡುತ್ತಿರುವ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಅಮೆರಿಕ ಸರ್ಕಾರದಲ್ಲಿ ಉತ್ತಮ ಸ್ಥಾನಗಳನ್ನ ಭಾರತ ಮೂಲದವರಿಗೆ ನೀಡುತ್ತಿದ್ದಾರೆ. ಹೀಗಾಗಿ ಭಾರತೀಯರು ಕೂಡ ಡೊನಾಲ್ಡ್ ಟ್ರಂಪ್ ಬೆನ್ನಿಗೆ ನಿಲ್ಲುತ್ತಿದ್ದು, ಅಮೆರಿಕದಲ್ಲಿ ಭಾರಿ ಗಮನ ಸೆಳೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+