Donald Trump: ಟ್ರಂಪ್ ಎಂಟ್ರಿ ಕೊಡುತ್ತಿದ್ದಂತೆ ದೊಡ್ಡ ಬದಲಾವಣೆ ಗ್ಯಾರಂಟಿ!
ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಕಮಲಾ ಹ್ಯಾರಿಸ್ ಹೀನಾಯ ಸೋಲು ಕಂಡು ಡೊನಾಲ್ಡ್ ಟ್ರಂಪ್ ಗೆದ್ದು ಬೀಗಿದ್ದಾರೆ. ಚುನಾವಣೆಗೆ ಮೊದಲು ನಡೆದ ಸಮೀಕ್ಷೆಗಳು ಹೀಗೆ ಕಮಲಾ ಹ್ಯಾರಿಸ್ ಪರವಾಗಿಯೇ ಇದ್ದವು. ಆದರೆ ಚುನಾವಣೆ ಫಲಿತಾಂಶ ಬಂದಾಗ ಮಾತ್ರ ಡೊನಾಲ್ಡ್ ಟ್ರಂಪ್ ಗೆದ್ದುಬಿಟ್ಟರು. ಇಂತಹ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅವರು ಇನ್ನು ಕೆಲವೇ ದಿನಗಳಲ್ಲಿ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಟ್ರಂಪ್ ಎಂಟ್ರಿ ಕೊಡುತ್ತಿದ್ದಂತೆ ಭಾರಿ ದೊಡ್ಡ ಪ್ರಮಾಣದ ಬದಲಾವಣೆ ಗ್ಯಾರಂಟಿ?
ಡೊನಾಲ್ಡ್ ಟ್ರಂಪ್ ಈಗಾಗಲೆ ತಮ್ಮ ಚುನಾವಣೆಯ ಭರವಸೆಯಲ್ಲಿ ಹೇಳಿರುವ ಪ್ರಕಾರ ಹಲವು ಕ್ರಾಂತಿಕಾರಿ ನಿರ್ಧಾರ ಕೈಗೊಳ್ಳುವುದು ಗ್ಯಾರಂಟಿ ಎನ್ನಲಾಗಿದೆ. ಅಮೆರಿಕ ಮೊದಲು ಎಂಬ ಘೋಷವಾಖ್ಯ ಮೊಳಗಿಸಿ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾರರ ಗಮನವನ್ನು ಸೆಳೆದಿರುವ ಡೊನಾಲ್ಡ್ ಟ್ರಂಪ್ ಇದೀಗ ತಾವು ಚುನಾವಣೆಗೆ ಮೊದಲು ಕೊಟ್ಟ ಭರವಸೆಯ ಮಹಾಪೂರ ಪೂರೈಸುವ ಸಾಧ್ಯತೆ ದಟ್ಟವಾಗಿದೆ. ಹೀಗಿದ್ದಾಗಲೇ ಭಾರತ ಸೇರಿ ಬೇರೆ, ಬೇರೆ ದೇಶಗಳಿಂದ ಹೋಗಿ ಅಮೆರಿಕದಲ್ಲಿ ನೆಲೆಸಿದವರಿಗೆ....

ಬೈಡನ್ ಎಡವಟ್ಟು ಟ್ರಂಪ್ ಗೆಲುವಿಗೆ ಕಾರಣ?
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಹೇಗೆ ಇಷ್ಟು ಸುಲಭದ ಜಯ ಕಂಡುಕೊಂಡರು? ಎಂಬ ಟ್ರಿಲಿಯನ್ ಡಾಲರ್ ಪ್ರಶ್ನೆ ಎಲ್ಲರನ್ನೂ ಇದೀಗ ಕಾಡುತ್ತಲೇ ಇದೆ. ಡೆಮಾಕ್ರಟಿಕ್ ಪಕ್ಷವು ಕಳೆದ 4 ವರ್ಷಗಳಿಂದ ಜೋ ಬೈಡನ್ ಅವರ ಸಾರಥ್ಯದಲ್ಲಿ ಅಮೆರಿಕದ ಆಡಳಿತ ನಡೆಸಿದೆ. ಆದರೂ ಜೋ ಬೈಡನ್ ಅವರ ಆಡಳಿತ ವೈಖರಿ ಬಗ್ಗೆ ಭಾರಿ ಆಕ್ರೋಶ ಕೂಡ ಮೂಡಿದೆ. ಹೀಗಿದ್ದಾಗ ಕಮಲಾ ಹ್ಯಾರಿಸ್ ಸೋಲು ಜೋ ಬೈಡನ್ ವಿರುದ್ಧ ಅಲ್ಲಿನ ಅಂದ್ರೆ ಅಮೆರಿಕದ ಜನರಲ್ಲಿ ಇದ್ದ ಬೇಸರದ ಫಲ ಎಂದು ಕೂಡ ಆರೋಪ ಮಾಡಲಾಗ್ತಿದೆ.
ಟ್ರಂಪ್ ಕ್ರಾಂತಿಕಾರಿ ನಿರ್ಧಾರ ಗ್ಯಾರಂಟಿ?
ಇಂತಹ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ವಿರುದ್ಧ ಹೀನಾಯವಾಗಿ ಸೋತು ಸುಣ್ಣವಾಗಿರುವ ಕಮಲಾ ಹ್ಯಾರಿಸ್ ಅವರಿಗೆ, ಅಧ್ಯಕ್ಷ ಜೋ ಬೈಡನ್, ಬರಾಕ್ ಒಬಾಮಾ, ಬಿಲ್ ಕ್ಲಿಂಟನ್ ಸಮೇತ ಹಲವು ನಾಯಕರು ಸಾಂತ್ವನ ಹೇಳಿದ್ದಾರೆ. ಇದು ಒಂದ್ಕಡೆ ಇಟ್ಟುಕೊಂಡರೆ, ಇನ್ನು ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ವಹಿಸಿಕೊಂಡ ತಕ್ಷಣ ವೀಸಾ ನಿಯಮ ಸೇರಿದಂತೆ, ಹಲವು ವಿಚಾರದಲ್ಲಿ ಕ್ರಾಂತಿಕಾರಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಕೂಡ ಡೊನಾಲ್ಡ್ ಟ್ರಂಪ್ ಅವರ ಸರ್ಕಾರದ ನಿರ್ಧಾರಗಳು ಗಮನ ಸೆಳೆಯುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications