ಪ್ರಧಾನಿ ಮೋದಿ & ಡೊನಾಲ್ಡ್ ಟ್ರಂಪ್ ಭೇಟಿ? ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮಯದಲ್ಲೇ ಸಂಚಲನ!

ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ದೊಡ್ಡಣ್ಣ ಅಮೆರಿಕಗೆ ಹೋಗಲು ಸಜ್ಜಾಗುತ್ತಿದ್ದು, ಈ ವಿಚಾರ ಕೇಳುತ್ತಿದ್ದಂತೆ ಎಲ್ಲೆಲ್ಲೂ ಸಂಚಲನ ಸೃಷ್ಟಿ ಆಗಿದೆ. ಯಾಕಂದ್ರೆ ಭಾರತ ಮತ್ತು ಅಮೆರಿಕ ಮಾತುಕತೆ ವೇಳೆ ಹಲವು ಭದ್ರತಾ ವಿಚಾರಗಳು ಚರ್ಚೆಯಾಗುವ ಸಾಧ್ಯತೆ ಇದ್ದು, ಇಂತಹ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ಹೇಳಿಕೆ ಅಮೆರಿಕದ ಚುನಾವಣಾ ಅಖಾಡದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಹಾಗಾದ್ರೆ ಪ್ರಧಾನಿ ಮೋದಿ & ಡೊನಾಲ್ಡ್ ಟ್ರಂಪ್ ಭೇಟಿ ಆಗ್ತಾರಾ? ಡೊನಾಲ್ಡ್ ಟ್ರಂಪ್ ಆ ರೀತಿ ಹೇಳಿದ್ದು ಏಕೆ? ಬನ್ನಿ ತಿಳಿಯೋಣ.

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ನವೆಂಬರ್ 5ಕ್ಕೆ ಮತದಾನ ಕೂಡ ಮುಗಿಯಲಿದೆ. ಹೀಗಿದ್ದಾಗ, ಚೀನಾಗೆ ಬಿಸಿ ಮುಟ್ಟಿಸಿ, ಭಾರತ ಸೇರಿದಂತೆ ಏಷ್ಯಾ ಸುತ್ತಲೂ ಇರುವ ದೇಶಗಳನ್ನ ಒಗ್ಗೂಡಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮುಂದೆ ಬಂದಿರುವಂತೆ ಕಾಣುತ್ತಿದೆ. ಅದರಲ್ಲೂ ಚೀನಾ ಜೊತೆಗೆ ಗಡಿ ಹಂಚಿಕೊಂಡಿರುವ ಭಾರತದ ಜೊತೆ ಇದರ ಬಗ್ಗೆ ಗಾಢವಾದ ಚರ್ಚೆ ನಡೆಸಬೇಕಿದೆ ಅಮೆರಿಕ. ಹೀಗಾಗಿಯೇ ಇದೀಗ ಮಹತ್ವದ ಶೃಂಗಸಭೆ ನಡೆಸಲು ಮುಂದಾಗಿದೆ ಅಮೆರಿಕ ಎಂಬ ಮಾತುಗಳು ಕೇಳಿಬಂದಿವೆ. 'ಕ್ವಾಡ್‌' ಶೃಂಗಸಭೆಗೆ ಪ್ರಧಾನಿ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಇದೇ ಸಮಯದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಯಲ್ಲಿ ಮಾತುಕತೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

Donald Trump May Be Meet Prime Minister Narendra Modi In America

ಶೃಂಗಸಭೆ ನಂತರ ಟ್ರಂಪ್ ಭೇಟಿ?

ಹೌದು, 'ಕ್ವಾಡ್‌' ಒಕ್ಕೂಟದ ಶೃಂಗಸಭೆಯಲ್ಲಿ ಭಾಗವಹಿಸಲು ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕದಲ್ಲೇ ಭೇಟಿ ಮಾಡುವೆ ಎಂದು ಇದೀಗ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಮೂಲಕ ಅಮೆರಿಕ ದೇಶದಲ್ಲಿ ವಾಸ ಇರುವ ಭಾರತ ಮೂಲದವರ ಮತಗಳನ್ನ ಸೆಳೆಯಲು ಈ ರೀತಿ ಡೊನಾಲ್ಡ್ ಟ್ರಂಪ್ ಐಡಿಯಾ ಮಾಡಿದ್ದಾರೆ ಎಂಬ ಮಾತು ಈಗ ಹರಿದಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 21 ರಿಂದ 23 ರವರೆಗೂ ಅಮೆರಿಕ ಭೇಟಿ ಹಮ್ಮಿಕೊಂಡಿದ್ದಾರೆ. ಮುಖ್ಯವಾಗಿ ಸೆಪ್ಟೆಂಬರ್ 21 ರಂದು ಅಮೆರಿಕ ಅಧ್ಯಕ್ಷ ಬೈಡನ್ ನಿವಾಸದಲ್ಲಿ ನಡೆಯುವ 'ಕ್ವಾಡ್‌' ಶೃಂಗಸಭೆಯಲ್ಲಿ ಪಿಎಂ ಮೋದಿ ಭಾಗವಹಿಸುವರು ಎನ್ನಲಾಗಿದ್ದು, ಶೃಂಗಸಭೆ ನಂತರ ಡೊನಾಲ್ಡ್ ಟ್ರಂಪ್ & ಪ್ರಧಾನಿ ಮೋದಿ ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

'ಕ್ವಾಡ್‌' ಸಭೆಯಲ್ಲಿ ಯಾರೆಲ್ಲಾ ಭಾಗಿ?

ಜೋ ಬೈಡನ್‌ ಆಯೋಜನೆ ಮಾಡಿರುವ 'ಕ್ವಾಡ್‌' ರಾಷ್ಟ್ರಗಳ ಶೃಂಗಸಭೆಗೆ ಭಾರತ ಸೇರಿದಂತೆ, ಆಸ್ಟ್ರೇಲಿಯಾ, ಜಪಾನ್‌ನ ಪ್ರಧಾನ ಮಂತ್ರಿಗಳು ಭಾಗವಹಿಸುವರು. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್‌ ಹಾಗೂ ಜಪಾನ್‌ನ ಪ್ರಧಾನಿ ಫ್ಯುಮಿಯೊ ಕಿಶಿಡಾ ಈ ಸಭೆಗೆ ಹಾಜರ್ ಆಗಲಿದ್ದಾರೆ. ಹಾಗೇ ಭಾರತದ ಪರ ಖುದ್ದಾಗಿ, ಪ‍್ರಧಾನಿ ನರೇಂದ್ರ ಮೋದಿ ಅವರೇ ಮುಂದಿನ ವಾರ ಅಮೆರಿಕಗೆ ತೆರಳಿ ಶೃಂಗಸಭೆಯಲ್ಲಿ ಭಾಗವಹಿಸುವರು ಎಂದು ಇದೀಗ ಮಾಹಿತಿ ಸಿಕ್ಕಿದೆ. 'ಕ್ವಾಡ್‌' ಒಕ್ಕೂಟದ ಶೃಂಗಸಭೆ ನಡೆಸಲು ಅಮೆರಿಕ ಇದೀಗ ಸಕಲ ಸಿದ್ಧತೆ ಆರಂಭ ಮಾಡಿದೆ. ಇದೇ ಸಮಯದಲ್ಲಿ ಪ್ರಧಾನಿ ಮೋದಿ & ಡೊನಾಲ್ಡ್ ಟ್ರಂಪ್ ಭೇಟಿ ಮಾಡುವರು ಎನ್ನುವ ಸುದ್ದಿ ಕೂಡ ಹಬ್ಬಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+