US Election 2024: ಕೊನೆಯ ಕ್ಷಣದಲ್ಲಿ ಡೊನಾಲ್ಡ್ ಟ್ರಂಪ್‌ಗೆ ಸೋಲುವ ಭೀತಿ?
ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಕೊನೆಯ ಹಂತದ ಹೋರಾಟ ನಡೆಯುತ್ತಿದೆ. ಇನ್ನೇನು ಕಮಲಾ ಹ್ಯಾರಿಸ್ ಗೆದ್ದು ಬಿಡುತ್ತಾರೆ ಅನ್ನೋ ಮಾತುಗಳು ಓಡಾಡಿದ್ದಾಗ ಟ್ರಂಪ್ ಮಧ್ಯದಲ್ಲಿ ಹೊಸ ತಲ್ಲಣ ಸೃಷ್ಟಿ ಮಾಡಿದ್ದರು. ಹೀಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಹೊಸ ತಿರುವು ಸಿಕ್ಕಿದೆ ಎನ್ನುವಾಗಲೇ ಮತ್ತೊಂದು ಟರ್ನಿಂಗ್ ಪಾಯಿಂಟ್ ಎದುರಾಗಿದೆ. ಆ ಟರ್ನಿಂಗ್ ಪಾಯಿಂಟ್ ಏನಂದ್ರೆ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇದೀಗ ಸೋಲುವ ಭಯ ಕಾಡುತ್ತಿದೆ. ಹಾಗಾದ್ರೆ ಅಮೆರಿಕ ಚುನಾವಣೆ ಫಲಿತಾಂಶದ ಬಗ್ಗೆ, ಸಮೀಕ್ಷೆಗಳು ಏನು ಹೇಳುತ್ತಿವೆ?
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒಟ್ಟು ಆಸ್ತಿ ಕೇಳಿದರೆ ನಿಮ್ಮ ತಲೆ ಗಿರಗಿರ ತಿರುಗುವುದು ಗ್ಯಾರಂಟಿ. ಯಾಕಂದ್ರೆ ಟ್ರಂಪ್ ಸುಮಾರು 50 ಸಾವಿರ ಕೋಟಿ ರೂಪಾಯಿ ಒಡೆಯ. ಡೊನಾಲ್ಡ್ ಟ್ರಂಪ್ ಅವರ ಕುಟುಂಬ ಶ್ರೀಮಂತರಾಗಿದ್ದು, ಡೊನಾಲ್ಡ್ ಟ್ರಂಪ್‌ರ ತಾತನ ಕಾಲದಿಂದ ಕೂಡ ದೊಡ್ಡ ಉದ್ಯಮ ಹೊಂದಿದ್ದಾರೆ. ಇಂತಿಪ್ಪ ಡೊನಾಲ್ಡ್ ಟ್ರಂಪ್ ಅವರು 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗಲಿದ್ದಾರೆ ಎಂಬ ನಿರೀಕ್ಷೆ ಮೂಡಿದ್ದ ಸಮಯದಲ್ಲೇ, ಡೊನಾಲ್ಡ್ ಟ್ರಂಪ್ ಅಭಿಮಾನಿಗಳಿಗೆ ಆಘಾತ ಎದುರಾಗಿದೆ.

ಕಮಲಾ ಹ್ಯಾರಿಸ್ ಗೆಲುವು ಗ್ಯಾರಂಟಿ?
ಹೌದು, ಡೊನಾಲ್ಡ್ ಟ್ರಂಪ್ ಅವರು ಇದೀಗ ಕಮಲಾ ಹ್ಯಾರಿಸ್ ಅವರಿಗಿಂತ ಹಿಂದೆ ಉಳಿದು ಚುನಾವಣೆಯಲ್ಲಿ ಆಘಾತ ಎದುರಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಪಟ್ಟ ಪಡೆಯಲಿದ್ದಾರೆ ಎಂಬ ನಿರೀಕ್ಷೆಗಳು ಕೂಡ ಇದೀಗ ಹುಸಿಯಾಗುತ್ತಿದೆ. ಇದೇ ಕಾರಣ ಅಮೆರಿಕದ ಚುನಾವಣೆಗೆ ಮೊದಲು ಮೂಡಿರುವ ಈ ಗೊಂದಲ ದೊಡ್ಡ ಮಟ್ಟದ ಚರ್ಚೆಗೆ ಕೂಡ ವೇದಿಕೆ ಒದಗಿಸಿದೆ. ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಈಗ ಅಮೆರಿಕ ಅಧ್ಯಕ್ಷರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ರಾಜ್ಯಗಳಲ್ಲಿ ಭಾರಿ ಅಂತರವನ್ನ ಕಾಯ್ದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ನೂತನ ಅಧ್ಯಕ್ಷರಿಗೆ ನೂರಾರು ಸವಾಲು!
ಅಮೆರಿಕದ ಹೊಸ ಅಧ್ಯಕ್ಷರಾಗಿ ಆಯ್ಕೆ ಆಗುವವರಿಗೆ ಇದೀಗ ದೊಡ್ಡ ಸಮಸ್ಯೆಗಳು ಎದುರು ಬರುವ ಆತಂಕ ಇದೆ. ಯಾಕಂದ್ರೆ ಒಂದು ಕಡೆ ಇಸ್ರೇಲ್ ವಿರುದ್ಧ ಮಧ್ಯಪ್ರಾಚ್ಯ ಭಾಗದಲ್ಲಿ ಭೀಕರ ಯುದ್ಧಗಳು ನಡೆಯುತ್ತಿವೆ. ಇಸ್ರೇಲ್ & ಗಾಜಾ ನಡುವೆ, 2023ರ ಅಕ್ಟೋಬರ್ 7 ರಿಂದ ಯುದ್ಧ ಶುರುವಾಗಿದ್ದರೆ, ಇನ್ನೊಂದು ಕಡೆ ಇಸ್ರೇಲ್ & ಲೆಬನಾನ್ ನಡುವೆ ಕೂಡ ಕೆಲವು ದಿನಗಳ ಹಿಂದಷ್ಟೇ ತಿಕ್ಕಾಟ ಜೋರಾಗಿದೆ. ಹಾಗೇ ರಷ್ಯಾ & ಉಕ್ರೇನ್ ವಾರ್ ಕೂಡ ಜೋರಾಗಿದೆ. ನೂತನವಾಗಿ ಆಯ್ಕೆಯಾಗುವ ಅಮೆರಿಕ ಅಧ್ಯಕ್ಷರು ಇದೆಲ್ಲವನ್ನೂ ನಿಭಾಯಿಸಬೇಕಿದೆ.
ಹೀಗೆ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗುವವರಿಗೆ ಸಾಲು ಸಾಲು ಸವಾಲು ಈಗ ಎದುರಾಗಲಿವೆ. ಒಂದು ಕಡೆ ಕಮಲಾ ಹ್ಯಾರಿಸ್ ಗೆದ್ದರೂ ಬೆಟ್ಟದಷ್ಟು ಸವಾಲು ಇರಲಿದ್ದು, ಇನ್ನೊಂದು ಕಡೆ ಡೊನಾಲ್ಡ್ ಟ್ರಂಪ್ ಗೆದ್ದರೂ ಸಾಲು ಸಾಲು ಸಮಸ್ಯೆ ಎದುರಾಗಲಿದೆ. ಈ ಹಿನ್ನೆಲೆ ಮತದಾರರು ಎಲ್ಲವನ್ನ ಅಳೆದು & ತೂಗಿ ಈಗ ವೋಟ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಆದರೆ ಮತದಾರರ ಮನಸ್ಸು ಗೆಲ್ಲಲು ಕಮಲಾ & ಟ್ರಂಪ್ ಕೊನೆಯ ಹಂತದ ಹೋರಾಟಕ್ಕೆ ಸಜ್ಜಾಗಿದ್ದಾರೆ.












Click it and Unblock the Notifications