Donald Trump: ಡೊನಾಲ್ಡ್ ಟ್ರಂಪ್ ಜೀವ ತೆಗೆಯಲು ಪದೇ ಪದೇ ಪ್ರಯತ್ನ ಮಾಡುತ್ತಿರುವುದು ಯಾರು?
ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೀವಕ್ಕೆ ಪದೇ ಪದೇ ಆಪತ್ತು ಎದುರಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೆಲವು ದಿನಗಳ ಹಿಂದಷ್ಟೇ ಡೊನಾಲ್ಡ್ ಟ್ರಂಪ್‌ಗೆ ತಲೆ ಮೇಲೆ ಗುರಿ ಇಟ್ಟು ಗುಂಡು ಹಾರಿಸಿದ್ದ ಒಬ್ಬ ದುಷ್ಟ. ಆದರೆ ಡೊನಾಲ್ಡ್ ಟ್ರಂಪ್ ಅವರ ಅದೃಷ್ಟ ಚನ್ನಾಗಿಯೇ ಇತ್ತು, ಹೀಗಾಗಿ ತಲೆಗೆ ತಾಗಿ ಹೋಗಬೇಕಿದ್ದ ಗುಂಡು ಕಿವಿಗೆ ಬಡಿದು ಟ್ರಂಪ್ ಜೀವ ಉಳಿದಿತ್ತು. ಹೀಗಿದ್ದಾಗಲೇ ಮತ್ತೆ ಇವತ್ತು ಅಮೆರಿಕದ ಫ್ಲೊರಿಡಾ ರಾಜ್ಯದಲ್ಲಿ ಮತ್ತೊಮ್ಮೆ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿದೆ! ಹಾಗಾದ್ರೆ ಪದೇ ಪದೇ ಈ ರೀತಿ ದಾಳಿ ಮಾಡಿಸುತ್ತಿರುವುದು ಯಾರು?
ಅಮೆರಿಕ ಚುನಾವಣೆಯಲ್ಲಿ ಪದೇ ಪದೇ ಗುಂಡಿನ ಸದ್ದು ಮೊಳಗುತ್ತಿದ್ದು, ಅಮೆರಿಕ ಜನರು ಇದನ್ನ ನೋಡಿ ನೋಡಿ ಬೇಸತ್ತಿದ್ದಾರೆ. ಅದರಲ್ಲೂ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಪದೇ ಪದೇ ಹತ್ಯೆಗೆ ಪ್ರಯತ್ನ ನಡೆಯುತ್ತಿದೆ. ಈಗಾಗಲೇ, ಬೂದಿ ಮುಚ್ಚಿದ ಕೆಂಡವಾಗಿ ಪರದಾಡುತ್ತಿರುವ ಅಮೆರಿಕದಲ್ಲಿ ಇಂದು ಕೂಡ ಭೀಕರ ಘಟನೆ ನಡೆದಿದೆ. ಈ ಮೂಲಕ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮೊದಲು ಸಂಚಲನ ಸೃಷ್ಟಿಯಾಗಿದೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಬಚಾವ್ ಆಗಿದ್ದು ಹೇಗೆ? ಡೊನಾಲ್ಡ್ ಟ್ರಂಪ್ ವಿರುದ್ಧ ಗುಂಡಿನ ದಾಳಿ ಮಾಡಿದ್ದು ಯಾರು? ಮುಂದೆ ಓದಿ.

ಜೀವ ಉಳಿಸಿಕೊಂಡಿದ್ದು ಹೇಗೆ ಟ್ರಂಪ್?
ಅಂದಹಾಗೆ ಇಂದು ಅಮೆರಿಕದ ಬೀಚ್ ಸಮೀಪವೇ, ಡೊನಾಲ್ಡ್ ಟ್ರಂಪ್ ಗಾಲ್ಫ್ ಆಡುತ್ತಿದ್ದರು. ಫ್ಲೊರಿಡಾ ರಾಜ್ಯದಲ್ಲಿ ಟ್ರಂಪ್ ಗಾಲ್ಫ್ ಆಡುವಾಗ ಗುಂಡಿನ ದಾಳಿಗೆ ಯತ್ನಿಸಲಾಗಿದೆ. ತಕ್ಷಣವೇ ಅಲರ್ಟ್ ಆದ ಗುಪ್ತಚರ ದಳದ ಸಿಬ್ಬಂದಿ, ದೂರದಿಂದಲೇ ಎಲ್ಲವನ್ನ ಗಮನಿಸಿ ಆಗಂತುಕನ ಗುರುತು ಪತ್ತೆ ಮಾಡಿದ್ದರು. ಡೊನಾಲ್ಡ್ ಟ್ರಂಪ್ ಗಾಲ್ಫ್ ಆಡುವಾಗ 400 ರಿಂದ 500 ಮೀಟರ್ ದೂರದಲ್ಲಿ ಇದ್ದ ಆಗಂತುಕ, ಕೈಯಲ್ಲಿ ಎಕೆ-47 ಗನ್ ಹಿಡಿದು ಗಾಲ್ಫ್ ಕೋರ್ಟ್‌ನಲ್ಲಿ ಟ್ರಂಪ್ ಇದ್ದ ಜಾಗದ ಕಡೆಗೆ ಬರುತ್ತಿದ್ದ. ಆದರೆ ಅದೃಷ್ಟವಶಾತ್ ಆತ ಡೊನಾಲ್ಡ್ ಟ್ರಂಪ್ ಮೇಲೆ, ಯಾವುದೇ ರೀತಿಯ ದಾಳಿ ನಡೆಸಲು ಸಾಧ್ಯವಾಗಿಲ್ಲ. ಇದೀಗ ಆತನನ್ನ ವಶಕ್ಕೆ ಪಡೆದಿದ್ದಾರೆ ಪೊಲೀಸರು.
ಕಾರ್ ಲೈಸೆನ್ಸ್ ಮೂಲಕ ಅರೆಸ್ಟ್!
ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನಿಸಿ ಅರೆಸ್ಟ್ ಆಗಿರುವ ವ್ಯಕ್ತಿಯನ್ನ ಅಮೆರಿಕದ ಪ್ಲೋರಿಡಾ ರಾಜ್ಯದ ರಿಯಾನ್ ರುತ್ ಎಂದು ಗುರುತಿಸಲಾಗಿದೆ. ಈ ವ್ಯಕ್ತಿಗೆ 58 ವರ್ಷ ವಯಸ್ಸಾಗಿದ್ದು, ಗಾಲ್ಪ್ ಕೋರ್ಟ್‌ನಲ್ಲಿ ಟ್ರಂಪ್ ಅವರು ಗಾಲ್ಪ್ ಆಡುತ್ತಿದ್ದಾಗ ರಿಯಾನ್ ರುತ್ ಎಕೆ 47 ಮೂಲಕ ಟ್ರಂಪ್ ಮೇಲೆ ಗುಂಡು ಹಾರಿಸಿದ್ದ. ಹೀಗಿದ್ದಾಗಲೇ ಟ್ರಂಪ್ ಅದೃಷ್ಟ ಚನ್ನಾಗಿದ್ದ ಕಾರಣಕ್ಕೆ, ಆ ಗುಂಡು ಡೊನಾಲ್ಡ್ ಟ್ರಂಪ್ ಅವರಿಗೆ ತಗುಲಿಲ್ಲ. ಆದರೆ ಘಟನೆ ನಂತರ ಈ ವ್ಯಕ್ತಿಯು ಎಸ್ಕೇಪ್ ಆಗುತ್ತಿದ್ದ, ಕಾರ್ ಲೈಸೆನ್ಸ್ ಮೂಲಕ ರಿಯಾನ್ ರುತ್ ಗುರುತು ಪತ್ತೆ ಮಾಡಿ ಅರೆಸ್ಟ್ ಮಾಡಲಾಗಿದೆ.












Click it and Unblock the Notifications