ಡೊನಾಲ್ಡ್ ಟ್ರಂಪ್ ಪವರ್ ಫುಲ್ ಭಾಷಣ: ವಿಶ್ವಕ್ಕೆ ದೊಡ್ಡಣ್ಣನ ಖಡಕ್ ಸಂದೇಶ!
Donald Trump Swearing-In Ceremony: ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದು. ಮೊದಲ ಭಾಷಣವನ್ನು ಮಾಡಿದ್ದಾರೆ. ನಾನು ಅಮೆರಿಕವನ್ನು ಎಲ್ಲದರಲ್ಲೂ ಮೊದಲ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕಗೆ ಈಗ ಸುವರ್ಣ ಯುಗ ಶುರುವಾಗಿದೆ. ಇನ್ನೇನಿದ್ದರೂ ಅಮೆರಿಕ ಪ್ರಗತಿಯತ್ತ ಸಾಗಲಿದೆ. ಇಡೀ ವಿಶ್ವವೇ ನಮ್ಮ ಕಡೆ ತಿರುಗಿ ನೋಡುಂತೆ ಮಾಡಿತ್ತೇನೆ ಎಂದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಜನತೆಯನ್ನು ಉದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ ಹೇಳಿದ್ದಾರೆ. ಅಮೆರಿಕದ 47ನೇ ಅಧ್ಯಕ್ಷರಾಗಿ ಹಾಗೂ ಎರಡನೇ ಬಾರಿ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಆಯ್ಕೆಯಾಗಿದ್ದಾರೆ.
ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್ ಅವರು ಪವರ್‌ಫುಲ್ ಸ್ಪೀಚ್ ಕೊಟ್ಟಿದ್ದಾರೆ. ಅಮೆರಿಕದ ನೂತನ ಅಧ್ಯಕ್ಷರ ಪ್ರಮಾಣವಚನಕ್ಕೆ ವಿಶ್ವದ ಹಲವು ಗಣ್ಯರು ಭಾಗಿಯಾಗಿದ್ದರು. ಅಮೆರಿಕದ ಮಾಜಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ಮಾಜಿ ಅಧ್ಯಕ್ಷ ಜೋ ಬಿಡನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಳೆದ ಬಾರಿ ಅಧ್ಯಕ್ಷರ ಪ್ರಮಾಣವಚನ ಸ್ವೀಕಾರ ಸಮಾರಂಭ ಹಲವು ಕಾರಣಕ್ಕೆ ವಿವಾದ ಹಾಗೂ ಗದ್ದಲದಲ್ಲೇ ಕಳೆದು ಹೋಗಿತ್ತು. ಆದರೆ ಈ ಬಾರಿ ಅದ್ಧೂರಿಯಾಗಿ ನಡೆದಿದ್ದು. ಟ್ರಂಪ್ ಪವರ್ ಫುಲ್ ಸ್ಪೀಚ್ ಕೊಟ್ಟಿದ್ದಾರೆ.

ಹಿಂದೆಗಿಂತಲೂ ಬಲಿಷ್ಠರಾಗಲಿದ್ದೇವೆ: ನಾವು ಹಿಂದೆಂಗಿಂತಲೂ ಬಲಿಷ್ಠವಾಗಿ ಹಿಂದಿರುಗಲಿದ್ದೇವೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಅಮೆರಿಕ ಹಿಂದೆಂಗಿಂತಲೂ ಇಷ್ಟರಲ್ಲೇ ಶ್ರೇಷ್ಠ, ಬಲಶಾಲಿ ಹಾಗೂ ಅಸಾಧಾರಣ ಶಕ್ತಿಯಾಗಿ ಹೊರ ಹೊಮ್ಮಲಿದೆ ಅಂತ ಅವರು ಮೊದಲ ಭಾಷಣದಲ್ಲೇ ಘರ್ಜಿಸಿದ್ದಾರೆ.
ನಾನು ಅತ್ಯಂತ ಆತ್ಮವಿಶ್ವಾಸದಿಂದ ಹಾಗೂ ಆಶಾವಾದಿಯಾಗಿ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಹಿಂದಿರುಗಿದ್ದೇನೆ. ಇಡೀ ಪ್ರಪಂಚದ ಮೇಲೆ ಸೂರ್ಯನ ಬೆಳಕು ಬೀಳುತ್ತದೆ. ಅಂತಹದ್ದೇ ಅವಕಾಶವನ್ನು ಅಮೆರಿಕ ಸಹ ಪಡೆಯಲಿದೆ.
ಅಮೆರಿಕ ದೇಶಕ್ಕೆ ಈಗ ಇರುವ ಅವಕಾಶವನ್ನು ಹಿಂದೆಂದಿಗಿಂತಲೂ ಹೆಚ್ಚು ಉತ್ತಮವಾಗಿ ಬಳಸಿಕೊಳ್ಳುವ ಅವಕಾಶವನ್ನು ಸಿಕ್ಕಿದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳೋಣ ಎಂದಿದ್ದಾರೆ.
ಅಮೆರಿಕನ್ನರ ಕನಸು ನನಸಾಗಲಿದೆ: ಇನ್ನು ಇದೇ ಸಂದರ್ಭದಲ್ಲಿ ಅವರು ಅಮೆರಿಕನ್ನರ ಕನಸು ನನಸಾಗಲಿದೆ. ಅವರು ಹಿಂದೆಯಂತೆ ಹೆಮ್ಮೆಯನ್ನು ಪಡುವ ದಿನಗಳು ಮರಳಿ ಬರಲಿವೆ ಅಂತ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ತೆರಿಗೆ ನೀತಿ, ವಾಕ್ ಸ್ವಾತಂತ್ರ್ಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಆದಾಯ ಮೂಲ ಹಾಗೂ ವಿದೇಶಿ ವಸ್ತುಗಳಿಗೆ ವಿಧಿಸುವ ತೆರಿಗೆಯ ಬಗ್ಗೆಯೂ ಅವರು ಸುಳಿವು ಕೊಟ್ಟಿದ್ದಾರೆ. ಅಮೆರಿಕನ್ನರ ಕನಸು ಇಷ್ಟರಲ್ಲೇ ಈಡೇರಲಿದೆ. ನಾವು ಈ ಹಿಂದೆಂದಿಗಿಂತಲೂ ಅಭಿವೃದ್ಧಿ ಆಗಲಿದ್ದೇವೆ ಎಂದಿದ್ದಾರೆ. ಅಮೆರಿಕದಲ್ಲಿ ಈಗಾಗಲೇ ವಾಕ್ ಸ್ವಾತಂತ್ರ್ಯವನ್ನು ಅಮೆರಿಕದ ಸಂವಿಧಾನದ ಮೂಲಕ ರಕ್ಷಿಸಲಾಗಿದೆ. ನಾವು ಇನ್ನಷ್ಟು ಎತ್ತರಕ್ಕೆ ಈ ವಿಷಯವನ್ನು ತೆಗೆದುಕೊಂಡು ಹೋಗಲಿದ್ದೇವೆ ಎಂದಿದ್ದಾರೆ.
ವಿಶ್ವಕ್ಕೆ ಖಡಕ್ ಸಂದೇಶ: ಇನ್ನು ಡೊನಾಲ್ಡ್ ಟ್ರಂಪ್ ಅವರು ವಿಶ್ವಕ್ಕೆ ಖಡಕ್ ಸಂದೇಶ ಕೊಟ್ಟಿದ್ದಾರೆ. ಅಮೆರಿಕದ ಅವನತಿ ಮುಕ್ತಾಯವಾಗಿದ್ದು. ಇನ್ನು ಅಮೆರಿಕದ ಗೋಲ್ಡನ್ ಡೇಸ್ ಪ್ರಾರಂಭವಾಗಿದೆ ಅಂತ ಅವರು ಹೇಳಿದ್ದಾರೆ. ಅಲ್ಲದೆ ಮಧ್ಯಪ್ರಾಚ್ಯದಲ್ಲಿ ಯುದ್ಧಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದಾಗಿಯೂ ಅವರು ಹೇಳಿದ್ದಾರೆ. ಇದರ ಭಾಗವಾಗಿ ಈಗಾಗಲೇ ಇಸ್ರೇಲ್ ಹಾಗೂ ಹಮಾಸ್ ಬಂಡುಕೋರರ ನಡುವೆ ಕದನ ವಿರಾಮ ಘೋಷಣೆಯಾಗಿರುವುದನ್ನು ಅವರು ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications