Trump's Economic War: ಡೊನಾಲ್ಡ್ ಟ್ರಂಪ್ ವಿರುದ್ಧ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾದ ಬ್ರಿಕ್ಸ್ ರಾಷ್ಟ್ರಗಳು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸುಂಕ ನಿರ್ಧಾರದ ಮೂಲಕ ಇದೀಗ ಜಾಗತಿಕ ಮಟ್ಟದಲ್ಲಿ ದೊಡ್ಡ ದೊಡ್ಡ ದೇಶಗಳ ವಿರೋಧ ಕಟ್ಟಿಕೊಳ್ಳುವ ಪರಿಸ್ಥಿತಿ ಬಂದಿದೆ. ಅದರಲ್ಲೂ ಅಮೆರಿಕ ಕೈಗೊಂಡ ಈ ನಿರ್ಧಾರದಲ್ಲಿ ಭಾರತಕ್ಕೆ ಭಾರಿ ದೊಡ್ಡ ಹಿನ್ನಡೆ ಆಗುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಭಾರತದ ಆರ್ಥಿಕ ಸ್ಥಿತಿಗೆ ಪೆಟ್ಟು ನೀಡುವಂತೆ ಇದೀಗ ಡೊನಾಲ್ಡ್ ಟ್ರಂಪ್ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೂಡ ಇದೀಗ ಕೇಳಿ ಬರುತ್ತಿದೆ. ಇಂತಹ ಸಮಯದಲ್ಲೇ, ಡೊನಾಲ್ಡ್ ಟ್ರಂಪ್ ವಿರುದ್ಧ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾದ ಬ್ರಿಕ್ಸ್ ರಾಷ್ಟ್ರಗಳು?

ಬರೀ ಕಿರಿಕ್, ಬರೀ ಕಿರಿಕ್.. ಇದು ಡೊನಾಲ್ಡ್ ಟ್ರಂಪ್ ಅವರಿಗೆ ಮೊದಲಿಂದ ಬಂದ ಗುಣ ಅಂತಾ ಕಾಣುತ್ತೆ. ಡೊನಾಲ್ಡ್ ಟ್ರಂಪ್ ಮಾಡುತ್ತಿರುವ ಕಿರಿಕಿರಿ ಒಂದಾ? ಎರಡಾ? ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ರೀತಿ ಪ್ರತಿದಿನ ಒಂದಲ್ಲ ಒಂದು ಕಿರಿಕ್ ಮಾಡ್ತಾನೆ ಇದ್ದಾರೆ. ಒಂದು ಕಡೆ ಭಾರತದ ವಿರುದ್ಧ ಕೂಡ ಹೀಗೆ ಕುತಂತ್ರ ಮಾಡಲು ಬಂದು ಹೆಚ್ಚಿನ ತೆರಿಗೆ ಹಾಕುವ ಬಗ್ಗೆ ಬೆದರಿಕೆ ಹಾಕಿದ್ದಾರೆ ಟ್ರಂಪ್ ಎಂಬ ಆರೋಪ ಕೇಳಿಬಂದಿದೆ. ಇದೇ ಸಮಯದಲ್ಲಿ ಭಾರತ ಮಾತ್ರವಲ್ಲ ಬ್ರೆಜಿಲ್ ಜೊತೆ ಕೂಡ ಟ್ರಂಪ್ ಡಿಸೈನ್ ಡಿಸೈನ್ ನಾಟಕ ಶುರು ಮಾಡಿದ್ದು, ಚೀನಾ & ರಷ್ಯಾಗೆ ಕೂಡ ಡೊನಾಲ್ಡ್ ಟ್ರಂಪ್ ಕಾಟ ಕೊಡುತ್ತಿರುವ ಆರೋಪ ಕೇಳಿ ಬರುತ್ತಲೇ ಇದೆ. ಇಂತಹ ಸಮಯದಲ್ಲೇ, ಬ್ರಿಕ್ಸ್ ಒಕ್ಕೂಟ ಏನು ಮಾಡಲು ಹೊರಟಿದೆ ಗೊತ್ತಾ?

Donald Trump Faces Potential Backlash from BRICS Nations Over Tariff War

ಬ್ರೆಜಿಲ್, ರಷ್ಯಾ, ಭಾರತ, ಚೀನಾ & ದಕ್ಷಿಣ ಆಫ್ರಿಕಾ...

ಅಮೆರಿಕ ತಾನು ಒಂದು ವ್ಯಾಪಾರಿ ದೇಶ ಅನ್ನೋದನ್ನ ಮತ್ತೆ ಮತ್ತೆ ಜಗತ್ತಿಗೆ ತೋರಿಸುತ್ತ ಇದೆ ಎನ್ನಬಹುದು. ಭಾರತ & ಅಮೆರಿಕ ನಡುವೆ ಇರುವ ಶತ ಶತಮಾನಗಳ ಸಂಬಂಧಕ್ಕೆ ಇದೀಗ ಎಳ್ಳುನೀರು ಬಿಡುವ ಕಾಲ ಬಂದಂತೆ ಕಾಣುತ್ತಿದೆ. ಯಾಕಂದ್ರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡುತ್ತಿರುವ ಮಹಾ ಎಡವಟ್ಟು ನೋಡುತ್ತಿದ್ದರೆ ಜಾಗತಿಕ ಮಟ್ಟದಲ್ಲಿ ಭಾರಿ ಆಕ್ರೋಶ ಮೊಳಗುತ್ತಿದೆ. ಅಲ್ಲದೆ ಸ್ವತಃ ಅಮೆರಿಕದಲ್ಲೇ ಟ್ರಂಪ್ ವಿರುದ್ಧ ಭಾರಿ ವಿರೋಧ ಇದೀಗ ವ್ಯಕ್ತವಾಗುತ್ತಾ ಇದೆ.

ಇಡೀ ಜಗತ್ತೇ ಭಾರತದ ಜೊತೆ ಉತ್ತಮ ಸಂಬಂಧ ಬೆಳೆಸಿಕೊಳ್ಳಲು ನೋಡುತ್ತಿದ್ದರೆ ಅಮೆರಿಕ ಮಾತ್ರ ಭಾರತದ ಜೊತೆಗೆ ಕಿರಿಕ್ ತೆಗೆದು & ಭಾರತವನ್ನ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ನೋಡುತ್ತಿದೆ. ಆದರೆ ಇದು ಅಸಾಧ್ಯ ಅನ್ನೋದು ತಿಳಿದ ಡೊನಾಲ್ಡ್ ಟ್ರಂಪ್ ತೆರಿಗೆ ಹೇರಿಕೆಯ ಬೆದರಿಕೆ ಹಾಕಿದ್ದಾರೆ. ಹೀಗಿದ್ದಾಗ ಬ್ರೆಜಿಲ್, ರಷ್ಯಾ, ಭಾರತ, ಚೀನಾ & ದಕ್ಷಿಣ ಆಫ್ರಿಕಾ ದೇಶಗಳ ಒಕ್ಕೂಟ ಇದೀಗ ಮಹತ್ವದ ತೀರ್ಮಾನಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ. ಹಾಗಾದ್ರೆ ಏನದು ಬ್ರಿಕ್ಸ್ ಒಕ್ಕೂಟ ಕೈಗೊಳ್ಳಬಹುದಾದ ಮಹತ್ವದ ನಿರ್ಧಾರ? ಮುಂದೆ ಓದಿ.

ಡಾಲರ್ ಜಾಗದಲ್ಲಿ ಬ್ರಿಕ್ಸ್ ಕರೆನ್ಸಿ?

ಹೌದು, ಇದೀಗ ಓಡಾಡುತ್ತಿರುವ ಮಾಹಿತಿ ಪ್ರಕಾರ ಬ್ರಿಕ್ಸ್ ಒಕ್ಕೂಟ ಟ್ರಂಪ್ ಕೈಗೊಳ್ಳುತ್ತಿರುವ ನಿರ್ಧಾರಗಳ ವಿರುದ್ಧ ಒಂದಾಗಿ ಡಾಲರ್ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ಅರ್ಥ ಬ್ರೆಜಿಲ್, ರಷ್ಯಾ, ಭಾರತ, ಚೀನಾ & ದಕ್ಷಿಣ ಆಫ್ರಿಕಾ ದೇಶಗಳ ನಡುವೆ ವ್ಯಾಪಾರ ಹಾಗೂ ವಹಿವಾಟು ನಡೆಸಲು ಡಾಲರ್ ಬದಲು ಬ್ರಿಕ್ಸ್ ಒಕ್ಕೂಟದ ಕರೆನ್ಸಿ ಜಾರಿಗೆ ತರಲು ಚಿಂತನೆ ನಡೆದಿದೆ ಎಂಬ ಸಂಚಲನ ಸೃಷ್ಟಿಸುವ ಮಾಹಿತಿ ಹರಿದಾಡುತ್ತಿದೆ. ಡೊನಾಲ್ಡ್ ಟ್ರಂಪ್ ಮಾಡುತ್ತಿರುವ ಎಡವಟ್ಟುಗಳನ್ನು ನೋಡಿ ಇದೀಗ ಬ್ರಿಕ್ಸ್ ಒಕ್ಕೂಟ ಈ ಬಗ್ಗೆ ಗಂಭೀರ ಚಿಂತನೆ ಆರಂಭಿಸಿದ್ದು, ಶೀಘ್ರದಲ್ಲೇ ಈ ಬಗ್ಗೆ ಭಾರಿ ಮಹತ್ವದ ಹೇಳಿಕೆ ಹೊರಬೀಳುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+