ಅರ್ಹತೆ ಇರುವವರಿಗೆ ಮಾತ್ರ ಅಮೆರಿಕಕ್ಕೆ ಪ್ರವೇಶ ಎಂದ ಟ್ರಂಪ್

ವಾಷಿಂಗ್ಟನ್, ಅಕ್ಟೋಬರ್ 14: ಅರ್ಹತೆ ಇರುವವರು ಹಾಗೂ ಅದರಿಂದ ನಮಗೆ ಸಹಾಯಕ್ಕೆ ಆಗುವವರು ಮಾತ್ರ ಬೇಕು. ಅಂಥವರು ಅಮೆರಿಕದೊಳಗೆ ಪ್ರವೇಶ ಮಾಡಬಹುದು ಮತ್ತು ಅನಧಿಕೃತವಾಗಿ ಗಡಿಯೊಳಗೆ ನುಸುಳುವವರಿಗೆ ನಾವು ಅವಕಾಶ ನೀಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಗಡಿಯ ವಿಚಾರದಲ್ಲಿ ನಾನು ಬಹಳ ಕಠಿಣ. ನಾವು ಆ ವಿಚಾರದಲ್ಲಿ ಕಟ್ಟುನಿಟ್ಟು. ನಮ್ಮ ದೇಶದೊಳಗೆ ಜನರು ಅಧಿಕೃತವಾಗಿಯೇ ಪ್ರವೇಶ ಪಡೆಯಬೇಕು. ಯಾವ ಕಾರಣಕ್ಕೂ ಅನಧಿಕೃತವಾಗಿ ಪ್ರವೇಶ ಮಾಡಲು ಬಿಡುವುದಿಲ್ಲ. ಮತ್ತು ಅವರಿಗೆ ಅರ್ಹತೆ ಇರಬೇಕು. ಆ ಕಾರಣಕ್ಕೇ ದೇಶದೊಳಗೆ ಪ್ರವೇಶ ಸಿಗಬೇಕು ಎಂದಿದ್ದಾರೆ.

ಅಕ್ರಮ ವಲಸಿಗರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ನಿರ್ಧಾರದಿಂದ ಭಾರತದಂಥ ದೇಶದ ತಾಂತ್ರಿಕ ಪರಿಣತರಿಗೆ ಅನುಕೂಲ ಆಗುತ್ತದೆ. ನನಗೆ ಬೇಕಾಗಿರುವುದು ಅರ್ಹತೆ. ಬಹಳ ಮಂದಿ ಇಲ್ಲಿಗೆ ಬರಬೇಕು ಅಂತ ಬಯಸ್ತೀನಿ. ನಮ್ಮ ದೇಶದೊಳಗೆ ಅದ್ಭುತ ಕಾರು ಕಂಪನಿಗಳು ಮತ್ತೆ ಪ್ರವೇಶಿಸುತ್ತಿವೆ. ಇದು ಕಳೆದ ಮೂವತ್ತೈದು ವರ್ಷದಿಂದ ಆಗಿರಲಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

Donald Trump explains eligibility for those who want to come to US

ನಮ್ಮ ದೇಶದೊಳಗೆ ಅಪರಾಧಿಗಳು ಬರುವುದನ್ನು ಯಾರೂ ಬಯಸುವುದಿಲ್ಲ. ನಮ್ಮ ದೇಶಕ್ಕೆ ಸಹಾಯ ಆಗದ ವ್ಯಕ್ತಿಗಳು ಸಹ ಬೇಡ. ಈ ಬಗ್ಗೆ ನಮ್ಮ ಬಳಿ ಪ್ರಬಲವಾದ ನೀತಿ ಇದೆ. ನಾನು ರಾಷ್ಟ್ರಾಧ್ಯಕ್ಷ ಆದ ನಂತರ ದೇಶ ಉತ್ತಮವಾಗಿ ಮುನ್ನಡೆಯುತ್ತಿದೆ. ಆರ್ಥಿಕವಾಗಿ ಬಹಳ ಸಬಲರಾಗಿದ್ದೇವೆ. ಚೀನಾ ಅಥವಾ ಇನ್ಯಾವುದೇ ದೇಶಕ್ಕೆ ಹೋಲಿಸಿದರೆ ಜಗತ್ತಿನಲ್ಲಿ ನಾವೇ ನೆಚ್ಚಿನ ದೇಶ ಎಂದು ಟ್ರಂಪ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+