Narendra Modi China Visit: ಭಾರತದ ಜೊತೆಗೆ ಮಾತುಕತೆ ಚಿಂತನೆ ನಡೆಸಿದ ಡೊನಾಲ್ಡ್ ಟ್ರಂಪ್?
ಪ್ರಧಾನಿ ಮೋದಿ ಅವರ ಚೀನಾ ಭೇಟಿ ನಂತರ ಅಮೆರಿಕ ಇದೀಗ ತೆಪ್ಪಗಾಗಿದೆ, ತಮ್ಮ ಬುಡಕ್ಕೆ ಬೆಂಕಿಯೇ ಬಿದ್ದಂತೆ ಡೊನಾಲ್ಡ್ ಟ್ರಂಪ್ ಆಡಳಿತ ಇದೀಗ ವಿಲವಿಲ ಒದ್ದಾಡುತ್ತಿದೆ. ಯಾಕಂದ್ರೆ ಭಾರತ ಇಷ್ಟು ದಿನ ಅಮೆರಿಕದ ಆಪ್ತ ದೇಶವಾಗಿತ್ತು, ಆದರೆ ಇದೇ ಡೊನಾಲ್ಡ್ ಟ್ರಂಪ್ ಮಾಡಿಕೊಂಡ ಎಡವಟ್ಟಿನ ಪರಿಣಾಮ ಇದೀಗ ಅಮೆರಿಕ ಬಿಟ್ಟು ಚೀನಾ ಜೊತೆಯಲ್ಲಿ ಮತ್ತೆ ದೋಸ್ತಿ ಮಾಡಿಕೊಳ್ಳಲು ಮುಂದಾಗಿದೆ. ಇದನ್ನ ಕಂಡು ಸ್ವತಃ ಅಮೆರಿಕ ಅಧ್ಯಕ್ಷ ಟ್ರಂಪ್ ಎದೆಯಲ್ಲಿ ನಡುಕ ಶುರುವಾಯ್ತಾ?
ಹೌದು, ಭಾರತದ ಪ್ರಧಾನಿ ಮೋದಿ ಅವರು ಇದೀಗ ಚೀನಾ ನೆಲಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಭಾರತ & ಚೀನಾ ನಡುವೆ ಕಳೆದ ಕೆಲವು ವರ್ಷಗಳಿಂದ ಸಂಬಂಧ ಹಳಸಿತ್ತು. ಇದೇ ಕಾರಣಕ್ಕೆ ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಮಾತುಕತೆಗೆ ಒಂದಷ್ಟು ಹಿನ್ನಡೆಯೂ ಆಗಿತ್ತು. ಆದರೆ ಇದೀಗ ಬರೋಬ್ಬರಿ 7 ವರ್ಷಗಳ ನಂತರ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಚೀನಾಗೆ ಎಂಟ್ರಿ ಕೊಟ್ಟು, ಆ ಮೂಲಕ ಅಮೆರಿಕದ ವಿಚಿತ್ರವಾದ ತೆರಿಗೆ ನೀತಿಗಳ ವಿರುದ್ಧ ಈ ಮೊದಲೇ ಆಕ್ರೋಶ ಹೊರ ಹಾಕುತ್ತಿದ್ದ ಚೀನಾ ಜೊತೆಗೆ ಸಂಬಂಧ ಬೆಸೆದಿದ್ದಾರೆ. ಆದರೆ ಇದನ್ನ ಕಂಡು ಸ್ವತಃ ಅಮೆರಿಕಗೆ ಬೆವರು ಬಂದಿದೆ!

ಶತ್ರುಗಳ ನಡುವೆ ಸ್ನೇಹ ಸಂಬಂಧ!
ಅಮೆರಿಕ ತಾನೇ ಎಲ್ಲಾ, ತನ್ನದೇ ಎಲ್ಲಾ ಅಂತಾ ದೊಡ್ಡ ಆಟ ಆಡುತ್ತಿತ್ತು ಆದರೆ ಈಗ ಸೈಲೆಂಟ್ ಆಗಿದೆ. ಅಕ್ಕಪಕ್ಕದಲ್ಲೇ ಇದ್ದರೂ ಚೀನಾ & ಭಾರತದ ನಡುವೆ ದೊಡ್ಡ ಶತ್ರುತ್ವ ಬೆಳೆದು ಹೋಗಿತ್ತು. ಹೀಗಾಗಿಯೇ ಎರಡೂ ದೇಶಗಳು ಪದೇ ಪದೇ ಗಡಿ ಭಾಗದಲ್ಲಿ ಕಿತ್ತಾಡುವ ಘಟನೆಗಳು ನಡೆದಿದ್ದವು. ಆದರೆ ಅಮೆರಿಕದ ಆಟಕ್ಕೆ ತಕ್ಕಪಾಠ ಕಲಿಸಲು ಮುಂದಾಗಿರುವ ಚೀನಾ & ಭಾರತ ಮತ್ತೊಂದು ಶಾಕ್ ಕೊಟ್ಟಿವೆ. ಡೊನಾಲ್ಡ್ ಟ್ರಂಪ್ ಪ್ರಯೋಗ ಮಾಡಿರುವ ತೆರಿಗೆ ಅಸ್ತ್ರಕ್ಕೆ ವಿರುದ್ಧವಾಗಿ ಭಾರತ ಕೂಡ ಹೊಸ ಅಸ್ತ್ರ ಪ್ರಯೋಗವನ್ನ ಮಾಡುತ್ತಿದೆ. ಚೀನಾ ಜೊತೆಗೆ ಕೈಜೋಡಿಸುವ ಮೂಲಕ ತನ್ನ ಶಕ್ತಿ ಏನು ಅನ್ನೋದನ್ನ ತೋರಿಸೋದಕ್ಕೆ ವೇದಿಕೆ ರೆಡಿ ಮಾಡಿಕೊಂಡಿದೆ.












Click it and Unblock the Notifications