Get Updates
Get notified of breaking news, exclusive insights, and must-see stories!

Trump vs Pope: ಯುದ್ಧ-ಶಾಂತಿ ವಿಚಾರದಲ್ಲಿ ಟ್ರಂಪ್-ಪೋಪ್ ನಡುವೆ ಉದ್ವಿಗ್ನತೆ

Trump vs Pope: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅಲ್ಲಿನ ಕ್ಯಾಥೋಲಿಕ್ ಚರ್ಚ್‌ನ ಮೊದಲ ಅಮೆರಿಕನ್ ನಾಯಕರಾದ ಪೋಪ್ ಲಿಯೋ 14 ಅವರ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಟ್ರಂಪ್ ಅವರು ಪೋಪ್‌ರನ್ನು 'ವೀಕ್' (ದುರ್ಬಲ) ರೆಂದು ಕರೆದು ಟೀಕಿಸಿದ್ದಾರೆ. ಈ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಪೋಪ್, ಟ್ರಂಪ್ ಆಡಳಿತದಿಂದ ತಮಗೆ 'ಭಯವಿಲ್ಲ' ಎಂದಿದ್ದಾರೆಂದು ಎನ್‌ಬಿಸಿ ವರದಿ ಮಾಡಿದೆ. ಇವರಿಬ್ಬರ ವಾಕ್ಸಮರ ಜಾಗತಿಕವಾಗಿ ಹೆಚ್ಚು ಚರ್ಚೆ ಆಗುತ್ತಿದೆ.

ಶಾಂತಿಗೆ ಕರೆ ನೀಡಿದ್ದೇ ಟ್ರಂಪ್ ಕೆಂಗಣ್ಣಿಗೆ ಕಾರಣವಾಯ್ತಾ?

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್‌ನೊಂದಿಗಿನ ಯುದ್ಧಕ್ಕೆ ನಿಂತು ಸುಮಾರು ಒಂದೂವರೆ ತಿಂಗಳು ಕಳದಿವೆ. ಈ ಕುರಿತು ನೇರವಾಗಿ ಟೀಕಿಸಿರುವ ಲಿಯೋ ಅವರು, ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸುವಂತೆ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೆ ಟ್ರಂಪ್ ಅವರು ಪತ್ರಕರ್ತರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಪ್ ವಿರುದ್ಧ ತಮ್ಮ ಟೀಕೆ ಸುರಿಮಳೆ ಸುರಿಸಿದರು. ಪೋಪ್ ಅವರು ತಮ್ಮ ಕೆಲಸವನ್ನು ಉತ್ತಮವಾಗಿ ಮಾಡುತ್ತಿಲ್ಲ. ಅವರು 'ದುರ್ಬಲ'ರೆಂದು ನನಗನ್ನಿಸುತ್ತಿದೆ ಎಂದು ಯುಎಸ್ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.

Donald Trump Criticizes Pope

ಇಂತಹ ಪೋಪ್ ಬೇಕಾಗಿಲ್ಲ

ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಇರಾನ್ ನಿರ್ಧಾರ ಸರಿಯಾಗಿದೆ ಮತ್ತು ಅಮೆರಿಕಾದ ಅಪರಾಧಗಳ ಕುರಿತು ಮಾತನಾಡುವ ಪೋಪ್ ನಮಗೆ ಬೇಕಾಗಿಲ್ಲ. ಅವರ ಇಂತಹ ಹೇಳಿಕೆಗಳು ಇಷ್ಟವಾಗುವುದಿಲ್ಲ. ನಾನು ಪೋಪ್ ಲಿಯೋ ಅವರ ದೊಡ್ಡ ಅಭಿಮಾನಿಯಲ್ಲ, ಎಂದು ಟ್ರಂಪ್ ನೇರ ವಾಗ್ದಾಳಿ ನಡೆಸಿದರು. ಅಲ್ಲದೇ ಟ್ರೂತ್‌ನಲ್ಲಿ ತಾವು ಯೇಸುವಿನ ರೂಪ ತಾಳಿದವರಂತೆ ಎಐ ನಿರ್ಮಿತ ಫೋಟೋವನ್ನು ಪೋಸ್ಟ್ ಮಾಡಿ ತಿರುಗೇಟು ನೀಡಿದ್ದಾರೆ.

US-Iran Talks: ಪಾಕ್ ನೆಲದಲ್ಲಿ 21 ಗಂಟೆಗಳ ಸಂಧಾನ ಮಾತುಕತೆ ವಿಫಲ: ಹೆಚ್ಚಿದ ಯುದ್ಧ ಭೀತಿ- ಪ್ರಮುಖಾಂಶಗಳು
US-Iran Talks: ಪಾಕ್ ನೆಲದಲ್ಲಿ 21 ಗಂಟೆಗಳ ಸಂಧಾನ ಮಾತುಕತೆ ವಿಫಲ: ಹೆಚ್ಚಿದ ಯುದ್ಧ ಭೀತಿ- ಪ್ರಮುಖಾಂಶಗಳು

"ಪೋಪ್ ಹುದ್ದೆಗೆ ಯಾವುದೇ ಪಟ್ಟಿಯಲ್ಲಿ ಅವರು ಇರಲಿಲ್ಲ. ಅವರೊಬ್ಬರ ಅಮೆರಿಕನ್ನರು ಎಂಬ ಕಾರಣಕ್ಕೆ ಚರ್ಚ್‌ನಲ್ಲಿ ಇರಿಸಲಾಯಿತು. ಅವರು ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಅವರೊಂದಿಗೆ ವ್ಯವಹರಿಸಲು ಉತ್ತಮ ಮಾರ್ಗ ಎಂದು ಚರ್ಚ್ ಭಾವಿಸಿತ್ತು. ನಾನು ಶ್ವೇತಭವನದಲ್ಲಿ ಇಲ್ಲದಿದ್ದರೆ, ಲಿಯೋ ವ್ಯಾಟಿಕನ್‌ನಲ್ಲಿ ಇರುತ್ತಿರಲಿಲ್ಲ ಎಂದು ಟ್ರಂಪ್ ಗುಡುಗಿದ್ದಾರೆ.

ಟೀಕೆ ಬೆನ್ನಲ್ಲೆ ಪೋಪ್ ವಿದೇಶಿ ಪ್ರವಾಸ

ಟ್ರಂಪ್ ಅವರ ಟೀಕೆಗಳ ನಡುವೆಯೇ ಪೋಪ್ ಅವರು 11 ದಿನಗಳ ನಾಲ್ಕು ಆಫ್ರಿಕನ್ ರಾಷ್ಟ್ರಗಳ ಪ್ರವಾಸದ ಮೊದಲ ನಿಲ್ದಾಣವಾಗಿ ಅಲ್ಜೀರಿಯಾಕ್ಕೆ ಸೋಮವಾರ ತೆರಳಿದರು. ಇದಕ್ಕೂ ಮುನ್ನ ಪೋಪ್ ವಿಮಾನದಲ್ಲಿ, "ನಾನು ಟ್ರಂಪ್ ಆಡಳಿತಕ್ಕೆ ಹೆದರುವುದಿಲ್ಲ, ಅಥವಾ ಸುವಾರ್ತೆಯ ಸಂದೇಶವನ್ನು ಎತ್ತಿ ಹೇಳಲು ಹಿಂಜರಿಯುವುದಿಲ್ಲ. ಇದು ನಾವೆಲ್ಲರೂ ಮಾಡಬೇಕಾದ ಕೆಲಸ ಎಂದು ನಾನು ನಂಬುತ್ತೇನೆ ಎಂದಿದ್ದಾರೆ.

ನಾನೊಬ್ಬ ರಾಜಕಾರಣಿಯಲ್ಲ. ಟ್ರಂಪ್ ಅವರು ಅರ್ಥಮಾಡಿಕೊಳ್ಳುವ ದೃಷ್ಟಿಕೋನದ ಪ್ರಕಾರ, ನಾವು ವಿದೇಶಾಂಗ ನೀತಿಯೊಂದಿಗೆ ವ್ಯವಹರಿಸುವುದಿಲ್ಲ. ಆದರೆ ಇಂತಹ ಯುದ್ಧದ ಸಂದರ್ಭದಲ್ಲಿ, ಶಾಂತಿ ಸ್ಥಾಪನೆಗೆ ನಾವು ಕರೆ ನೀಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಸದ್ಯ ಟ್ರಂಪ್ ಹಾಗೂ ಪೋಪ್ ಅವರ ನಡುವಿನ ಈ ವಾಕ್ಸಮರ ಜಾಗತಿಕವಾಗಿ ಚರ್ಚೆ ಹುಟ್ಟು ಹಾಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+