Viral: ರೋಬೋಟ್‌ಗಳಿಗೆ ತರಬೇತಿ ನೀಡಲು ತಲೆಗೆ ಕ್ಯಾಮೆರಾ ಕಟ್ಟಿಕೊಂಡ ಭಾರತೀಯ ಕಾರ್ಮಿಕರು: ಮನುಷ್ಯರನ್ನೇ ರಿಪ್ಲೇಸ್ ಮಾಡಲಿದೆಯಾ AI?

ನವದೆಹಲಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ರೊಬೊಟಿಕ್ಸ್ ಕ್ಷೇತ್ರವು ದಿನದಿಂದ ದಿನಕ್ಕೆ ಹೊಸ ಮೈಲಿಗಲ್ಲುಗಳನ್ನು ತಲುಪುತ್ತಿದೆ. ಆದರೆ, ಈ ಯಂತ್ರಗಳಿಗೆ ಮನುಷ್ಯರಂತೆ ಕೆಲಸ ಮಾಡಲು ಕಲಿಸುವುದು ಎಷ್ಟು ಕಷ್ಟ ಮತ್ತು ದುಬಾರಿ ಎಂಬುದನ್ನು ಇತ್ತೀಚಿನ ಒಂದು ವಿದ್ಯಮಾನ ಜಗತ್ತಿಗೆ ಪರಿಚಯಿಸಿದೆ. ಹೌದು, ಭಾರತದ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಇದೀಗ ತಮ್ಮ ತಲೆಗೆ ಕ್ಯಾಮೆರಾಗಳನ್ನು (Head-mounted cameras) ಅಳವಡಿಸಿಕೊಂಡು ಕೆಲಸ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು ,ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕಾರ್ಮಿಕರ ಪ್ರತಿಯೊಂದು ಚಲನವಲನಗಳನ್ನು ಸೆರೆಹಿಡಿದು, ಆ ಡೇಟಾವನ್ನು ಭವಿಷ್ಯದ ರೊಬೊಟಿಕ್ಸ್ ಎಐ (Robotics AI) ಮಾದರಿಗಳಿಗೆ ತರಬೇತಿ ನೀಡಲು ಬಳಸಿಕೊಳ್ಳಲಾಗುತ್ತಿದೆ. ಈ ಕುರಿತಾದ ಸುದ್ದಿಯೊಂದು ಇದೀಗ ಎಲ್ಲೆಡೆ ಕೇಳಿಬರುತ್ತಿದೆ.

Indian Factory Workers

ರೋಬೋಟ್‌ಗಳಿಗೆ ಭೌತಿಕ ಡೇಟಾದ ಅಗತ್ಯವೇನು?

ಭಾಷಾ ಮಾದರಿಗಳು (Language Models - LLMs) ಅಂತರ್ಜಾಲದಲ್ಲಿರುವ ಪಠ್ಯವನ್ನು ಓದಿ ಕಲಿಯುವಂತೆ, ರೋಬೋಟ್‌ಗಳು ಕೇವಲ ಇಂಟರ್ನೆಟ್‌ನಿಂದ ದೈಹಿಕ ಕೆಲಸಗಳನ್ನು ಕಲಿಯಲು ಸಾಧ್ಯವಿಲ್ಲ. ನೈಜ ಜಗತ್ತಿನಲ್ಲಿ ಒಂದು ವಸ್ತುವನ್ನು ಕೈಗೆತ್ತಿಕೊಳ್ಳುವುದು, ಮಣಿಕಟ್ಟು ತಿರುಗಿಸುವುದು, ಬಟ್ಟೆ ಮಡಚುವುದು, ಉಪಕರಣಗಳನ್ನು ಬಳಸುವುದು ಅಥವಾ ಸಣ್ಣಪುಟ್ಟ ತಪ್ಪುಗಳಾದಾಗ ಅದನ್ನು ತಕ್ಷಣವೇ ಸರಿಪಡಿಸಿಕೊಳ್ಳುವುದು- ಇವೆಲ್ಲವನ್ನೂ ಕಲಿಯಲು ರೋಬೋಟ್‌ಗಳಿಗೆ 'ಭೌತಿಕ ಡೇಟಾ' (Embodied data) ಬೇಕಾಗುತ್ತದೆ. ನೈಜ ಜಗತ್ತಿನ ಈ ಡೇಟಾವನ್ನು ಕೃತಕವಾಗಿ ಸೃಷ್ಟಿಸುವುದು ಅತ್ಯಂತ ನಿಧಾನ, ಸಂಕೀರ್ಣ ಹಾಗೂ ದುಬಾರಿ ಪ್ರಕ್ರಿಯೆಯಾಗಿದೆ.

ಕಂಪನಿಗಳು ಕಂಡುಕೊಂಡ ಅಗ್ಗದ ಮಾರ್ಗ

ರೋಬೋಟ್‌ಗಳ ಪಡೆಯನ್ನು ಖರೀದಿಸುವುದು, ನಿರ್ವಹಿಸುವುದು ಅಥವಾ ಮನುಷ್ಯರ ಮೂಲಕವೇ ರೋಬೋಟ್‌ಗಳನ್ನು ರಿಮೋಟ್ ಕಂಟ್ರೋಲ್‌ನಲ್ಲಿ ನಿಯಂತ್ರಿಸುವುದು ಬಹಳ ದುಬಾರಿ ಪ್ರಕ್ರಿಯೆ. ಜೊತೆಗೆ, ನಿಯಂತ್ರಣವಿಲ್ಲದ ವಾತಾವರಣದಲ್ಲಿ ಇದನ್ನು ಮಾಡುವುದು ಅಪಾಯಕಾರಿ ಕೂಡ. ಹೀಗಾಗಿ, ರೊಬೊಟಿಕ್ಸ್ ಕಂಪನಿಗಳು ಭೌತಿಕ ಬುದ್ಧಿಮತ್ತೆಯನ್ನು ಕಲಿಯಲು ಅತ್ಯಂತ ಅಗ್ಗದ ಮಾರ್ಗವನ್ನು ಕಂಡುಕೊಂಡಿವೆ. ಅದೇ ಕಾರ್ಖಾನೆ ಕಾರ್ಮಿಕರ 'ಫಸ್ಟ್-ಪರ್ಸನ್ ವಿಡಿಯೋ' (POV). ಕಾರ್ಮಿಕರು ತಲೆಗೆ ಕ್ಯಾಮೆರಾ ಅಳವಡಿಸಿಕೊಂಡು ಕೆಲಸ ಮಾಡುವಾಗ, ಅವರ ಕೈಗಳ ಚಲನೆ, ಗ್ರಿಪ್, ಅಸೆಂಬ್ಲಿಂಗ್ ಹಂತಗಳು ಮತ್ತು ಕಣ್ಣು-ಕೈಗಳ ನಡುವಿನ ಸಮನ್ವಯವು ನಿಖರವಾಗಿ ರೆಕಾರ್ಡ್ ಆಗುತ್ತದೆ. ಕಾರ್ಖಾನೆಗಳು ಮತ್ತು ಗೋದಾಮುಗಳಲ್ಲಿ ಒಂದೇ ರೀತಿಯ ಕೆಲಸಗಳು ಪುನರಾವರ್ತನೆಯಾಗುವುದರಿಂದ, ರೋಬೋಟ್‌ಗಳಿಗೆ ಇಂತಹ ಜಾಗಗಳ ಡೇಟಾ ಅತಿಮುಖ್ಯವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವೇಕೆ?

ಈ ವಿದ್ಯಮಾನದ ಅತ್ಯಂತ ಆತಂಕಕಾರಿ ಮತ್ತು ವಿಪರ್ಯಾಸದ ಸಂಗತಿಯೆಂದರೆ, ಮನುಷ್ಯನ ಶ್ರಮವನ್ನು ಇಲ್ಲಿ ಎರಡು ಬಾರಿ ಬಳಸಿಕೊಳ್ಳಲಾಗುತ್ತಿದೆ. ಮೊದಲನೆಯದಾಗಿ ಕಾರ್ಮಿಕರಾಗಿ, ಎರಡನೆಯದಾಗಿ ಯಂತ್ರಗಳಿಗೆ ತರಬೇತಿ ನೀಡುವ ಡೇಟಾವಾಗಿ. ಹಾಗೆಯೇ, ಭವಿಷ್ಯದಲ್ಲಿ ಇದೇ ಯಂತ್ರಗಳು ಈ ಕಾರ್ಮಿಕರ ಉದ್ಯೋಗವನ್ನು ಕಸಿದುಕೊಳ್ಳುವ ಎಲ್ಲ ಸಾಧ್ಯತೆಗಳೂ ಇವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಆರ್ಥಿಕ ತಾರತಮ್ಯದ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವರದಿಗಳ ಪ್ರಕಾರ, ರೊಬೊಟಿಕ್ಸ್ ಕಂಪನಿಗಳು ಈ ವಿಡಿಯೋ ಫೂಟೇಜ್‌ಗಳನ್ನು ಖರೀದಿಸಲು ವರ್ಷಕ್ಕೆ 100 ಮಿಲಿಯನ್ ಡಾಲರ್‌ಗೂ (ಸುಮಾರು 830 ಕೋಟಿ ರೂ.) ಹೆಚ್ಚು ಹಣವನ್ನು ಸುರಿಯುತ್ತಿವೆ. ಆದರೆ, ದಿನವಿಡೀ ಈ ವಿಡಿಯೋಗಳನ್ನು ರೆಕಾರ್ಡ್ ಮಾಡುವ ಭಾರತೀಯ ಕಾರ್ಮಿಕರಿಗೆ ತಿಂಗಳಿಗೆ ಕೇವಲ 230 ಡಾಲರ್ (ಅಂದಾಜು 19,000 ರೂ.) ನಷ್ಟು ಅತ್ಯಲ್ಪ ವೇತನ ನೀಡಲಾಗುತ್ತಿದೆ ಎಂದು ದೂರಲಾಗಿದೆ.

ಒಟ್ಟಾರೆಯಾಗಿ, ಭೌತಿಕ ಡೇಟಾವನ್ನು ಕೃತಕವಾಗಿ ಸಂಗ್ರಹಿಸುವುದು ಮನುಷ್ಯರ ಚಲನೆಯನ್ನು ರೆಕಾರ್ಡ್ ಮಾಡುವುದಕ್ಕಿಂತ ಅಗ್ಗವಾಗುವವರೆಗೂ, ರೋಬೋಟ್‌ಗಳು ಮಾನವ ಕಾರ್ಮಿಕರನ್ನು ಸಂಪೂರ್ಣವಾಗಿ ರಿಪ್ಲೇಸ್ ಮಾಡುವ ಮುನ್ನ ಅವರ ಬಳಿಯೇ ಕೆಲಸ ಕಲಿಯುವುದು ಅನಿವಾರ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+