Donald Trump: ಉಕ್ರೇನ್ ಅಧ್ಯಕ್ಷನಿಗೆ ಬೈದು ಹೊರಹಾಕಿದ ಡೊನಾಲ್ಡ್ ಟ್ರಂಪ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ, ಉಕ್ರೇನ್ ವಿರುದ್ಧ ರೊಚ್ಚಿಗೆದ್ದು ಕೂತಿದ್ದಾರೆ. ಅದರಲ್ಲೂ ತಾವು ಹೇಳಿದ ಮಾತು ಕೇಳಿ ರಷ್ಯಾ ಜೊತೆಗೆ ಸಂಧಾನ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸದ ಉಕ್ರೇನ್ ಅಧ್ಯಕ್ಷನ ವಿರುದ್ಧ ಕೆಂಡವಾಗಿದ್ದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಇಂತಹ ಸಮಯದಲ್ಲೇ ಅಮೆರಿಕ ಪ್ರವಾಸ ಕೈಗೊಂಡಿದ್ದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಗೆ ಸರಿಯಾದ ಪಾಠ ಕಲಿಸಿದ್ದಾರೆ ಟ್ರಂಪ್.
ರಷ್ಯಾ ವಿರುದ್ಧ ಸತತ 3 ವರ್ಷಗಳಿಂದ ಯುದ್ಧ ಮಾಡುತ್ತಿರುವ ಉಕ್ರೇನ್ ಅನೇಕ ಸಮಸ್ಯೆ ಎದುರಿಸುತ್ತಿದೆ. ಅದರಲ್ಲೂ ಉಕ್ರೇನ್ ಇನ್ನೇನು ಸಂಪೂರ್ಣವಾಗಿ ತನ್ನ ಭೂಮಿಯನ್ನು ರಷ್ಯಾ ಸೇನೆ ವಶಕ್ಕೆ ಒಪ್ಪಿಸುವ ಹಂತಕ್ಕೆ ತಲುಪಿದೆ. ಹೀಗಿದ್ದರೂ ರಷ್ಯಾ ಜೊತೆಗೆ ಸಂಧಾನ ಮಾತುಕತೆ ನಡೆಸಿ ಯುದ್ಧಕ್ಕೆ ವಿರಾಮ ಹಾಕುವ ಕೆಲಸಕ್ಕೆ ವೊಲೊಡಿಮಿರ್ ಝೆಲೆನ್ಸ್ಕಿ ಮುಂದಾಗುತ್ತಿಲ್ಲ. ಇದು ಟ್ರಂಪ್ ಸೇರಿದಂತೆ ಜಗತ್ತಿನ ಹಲವು ದೇಶಗಳ ನಾಯಕರ ಕೋಪಕ್ಕೆ ಕಾರಣವಾಗಿದ್ದು, ದೊಡ್ಡ ಚರ್ಚೆ ನಡೆಯುವಾಗಲೇ ಉಕ್ರೇನ್ ಅಧ್ಯಕ್ಷನಿಗೆ ಅಮೆರಿಕದಲ್ಲಿ ಅವಮಾನ ಆಗಿದೆಯಾ? ಮುಂದೆ ಓದಿ.

ಟ್ರಂಪ್ & ಉಕ್ರೇನ್ ಅಧ್ಯಕ್ಷನ ಜಗಳ!
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕೃತ ಕಚೇರಿಗೆ ಭೇಟಿ ನೀಡಿದ್ದ ಸಮಯದಲ್ಲಿ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಡೊನಾಲ್ಡ್ ಟ್ರಂಪ್‌ರ ನಡುವೆ ಭಾರಿ ದೊಡ್ಡ ವಾಗ್ವಾದ ಆಗಿದೆ ಎಂದು ವರದಿಯಾಗಿದೆ. ಅದರಲ್ಲೂ ಇದೇ ವೇಳೆ ಅಮೆರಿಕದ ಉಪಾಧ್ಯಕ್ಷ ಕೂಡ ವೊಲೊಡಿಮಿರ್ ಝೆಲೆನ್ಸ್ಕಿ ವಿರುದ್ಧ ಗರಂ ಆಗಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಇಷ್ಟುದಿನ ತಣ್ಣಗೆ ಇದ್ದ ಅಮೆರಿಕ ಇದೀಗ ಉಕ್ರೇನ್ ವಿರುದ್ಧ ರೊಚ್ಚಿಗೆದ್ದಿದೆ. ಅಲ್ಲದೆ ನಾವು ಹೇಳಿದ್ದನ್ನು ಕೇಳದೇ ಇದ್ದರೆ ತೊಲಗಿ ಎನ್ನುವ ರೀತಿಯಲ್ಲೇ ಸಂದೇಶ ರವಾನೆ ಆಗಿದೆ ಉಕ್ರೇನ್‌ಗೆ.
ವೊಲೊಡಿಮಿರ್ ಝೆಲೆನ್ಸ್ಕಿ ವಿರುದ್ಧ ಆಕ್ರೋಶ?
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪದೇ ಪದೇ ವಿವಾದ ಮೈಮೇಲೆ ಎಳೆದುಕೊಂಡು ಸುದ್ದಿಯಲ್ಲಿ ಇರುತ್ತಾರೆ. ಈ ಹಿಂದೆ ಭಾರತದ ವಿರುದ್ಧ ಕೂಡ ಮಾತನಾಡಿದ್ದ ಇದೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಆ ನಂತರ ಕ್ಷಮೆ ಕೇಳಿದ್ದು ಆಗಿತ್ತು. ಇದರ ಜೊತೆಯಲ್ಲೇ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮಯದಲ್ಲಿ, ಡೊನಾಲ್ಡ್ ಟ್ರಂಪ್ ವಿರೋಧಿ ಗುಂಪಿನ ಜೊತೆಗೆ ಗುರಿತಿಸಿಕೊಂಡ ಆರೋಪ ಕೂಡ ಇತ್ತು. ಈಗ ಅದೆಲ್ಲದಕ್ಕೂ ಸರಿಯಾಗೇ ರಿವೇಂಜ್ ತೆಗೆದುಕೊಳ್ಳುತ್ತಿದ್ದಾರೆ ಟ್ರಂಪ್ ಎಂಬ ಮಾತು ಹರಿದಾಡುತ್ತಿದೆ. ಇವರ ಈ ತಿಕ್ಕಾಟದಲ್ಲಿ ಇಡೀ ಉಕ್ರೇನ್ ವಿಲವಿಲ ಒದ್ದಾಡುವ ಸ್ಥಿತಿಗೆ ತಲುಪಿದೆ.












Click it and Unblock the Notifications