ವೃದ್ಧೆ ಕಣ್ಣಿಂದ 23 ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ತೆಗೆದ ವೈದ್ಯರು

ಇತ್ತೀಚೆಗೆ ಮಹಿಳೆಯೊಬ್ಬರು ವೈದ್ಯರನ್ನು ಭೇಟಿ ಮಾಡಿದಾಗ ವೈದ್ಯರು 23 ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಆಕೆಯ ಕಣ್ಣಿನಿಂದ ತೆಗೆದಿರುವ ಅಘಾತಕಾರಿ ವಿಡಿಯೋ ವೈರಲ್ ಆಗಿದೆ. ಅನಾಮಧೇಯ ಮಹಿಳೆ ಸತತವಾಗಿ 23 ರಾತ್ರಿಗಳವರೆಗೆ ಪ್ರತಿ ರಾತ್ರಿ ಮಲಗುವ ಮೊದಲು ತನ್ನ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ತೆಗೆದುಹಾಕಲು 'ಮರೆತಿದ್ದಾಳೆ'. ಮರುದಿನ ಹೊಸ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಹಾಕಿಕೊಂಡಿದ್ದಾಳೆ. ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ತೆಗೆಯಲು ಮರೆತಿದ್ದರಿಂದ 23 ಲೆನ್ಸಗಳು ಕಣ್ಣಲ್ಲೇ ಉಳಿದುಕೊಂಡಿದ್ದವು.

ಆ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ತೆಗೆದುಹಾಕುವ ಪ್ರಕ್ರಿಯೆಯ ವಿಡಿಯೋ ವೈರಲ್ ಆಗಿದೆ. ವಿಡಿಯೊವನ್ನು ಕ್ಯಾಲಿಫೋರ್ನಿಯಾದ ಡಾ ಕಟೆರಿನಾ ಕುರ್ತೀವಾ ಎಂಬ ವೈದ್ಯರು ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಸೆಪ್ಟೆಂಬರ್ 13 ರಂದು ಪೋಸ್ಟ್ ಮಾಡಿದ್ದಾರೆ. ಮಹಿಳೆಯ ಕಣ್ಣಿನಿಂದ ಎಲ್ಲಾ 23 ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ತೆಗೆದುಹಾಕುವುದನ್ನು ವಿಡಿಯೊ ತೋರಿಸುತ್ತದೆ.

"ಯಾರಾದರೂ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಹಾಕಿಕೊಳ್ಳುತ್ತಿದ್ದರೆ ಈ ವಿಡಿಯೋವನ್ನು ನೋಡಿ. ನನ್ನ ಕ್ಲಿನಿಕ್‌ನಿಂದ ತೆಗೆದ ನೈಜದ ವಿಡಿಯೊ ಇದಾಗಿದೆ. ನಿಮ್ಮ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಹಾಕಿಕೊಂಡು ಮಲಗಬೇಡಿ" ಎಂದು ವಿಡಿಯೊ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

"ಈ ವೃದ್ಧ ಮಹಿಳೆ ರಾತ್ರಿ ಕಾಂಟ್ಯಾಕ್ಟ್ ಲೆನ್ಸ್ ತೆಗೆಯಲು ಮರೆತು ಪ್ರತಿದಿನ ಬೆಳಗ್ಗೆ ಹೊಸದನ್ನು ಹಾಕುತ್ತಲೇ ಇರುವ ಅಪರೂಪದ ಸಂದರ್ಭ ಇದು. ಸತತ 23 ದಿನಗಳು!!! ನನ್ನ ಕ್ಲಿನಿಕ್‌ನಲ್ಲಿ ನಿನ್ನೆ ಕಾಂಟ್ಯಾಕ್ಟ್ ಲೆನ್ಸ್ ಬಳೆಸುವ ಜನರ ಕಣ್ಣೀನ ಪರೀಕ್ಷೆ ವೇಳೆ ನನಗೆ ಇವರು ಸಿಕ್ಕಿರು" ಎಂದು ಕುರ್ತೀವಾ ಬರೆದಿದ್ದಾರೆ.

Doctor removes 23 contact lenses from old womans eye

ಆನ್‌ಲೈನ್‌ನಲ್ಲಿ ವಿಡಿಯೋ ಹಂಚಿಕೊಂಡ ನಂತರ, ವಿಡಿಯೊ 2.9 ಮಿಲಿಯನ್ ವೀಕ್ಷಣೆಗಳನ್ನು ಮತ್ತು 81,000 ಕ್ಕೂ ಹೆಚ್ಚು ಲೈಕ್ಸನ್ನು ಪಡೆದುಕೊಂಡಿದೆ. ಪೋಸ್ಟ್‌ನ ಕಾಮೆಂಟ್ ಪ್ರದೇಶದಲ್ಲಿ ಹಲವಾರು ಬಳಕೆದಾರರು ಆಘಾತಕಾರಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

"ಮಹಿಳೆಯ ಬಗ್ಗೆ ಕಾಳಜಿ ವಹಿಸಿ," ಒಬ್ಬ ಬಳಕೆದಾರನು ಬರೆದನು. ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ, "ನಾನು ಈ ಮಹಿಳೆಗೆ ಕನ್ನಡಕವನ್ನು ಶಿಫಾರಸು ಮಾಡುತ್ತೇನೆ, ಅವಳಿಗೆ ಹೆಚ್ಚಿನ ದೃಷ್ಟಿಯಿಲ್ಲ" ಎಂದು ತಿಳಿಯುತ್ತದೆ ಎಂದು ಬರೆದಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ಕಾರ್ಯವಿಧಾನದ ಚಿತ್ರಗಳನ್ನು ಹಂಚಿಕೊಳ್ಳುವಾಗ, ವೈದ್ಯರು ಮತ್ತಷ್ಟು ಬರೆದಿದ್ದಾರೆ, "ನಾನು ಎಲ್ಲಾ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಎಚ್ಚರಿಕೆಯಿಂದ ಬೇರ್ಪಡಿಸಿದ್ದೇನೆ ಮತ್ತು ಒಟ್ಟು 23 ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಹೊರತೆಗೆದಿದ್ದೇನೆ. ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಪ್ರತ್ಯೇಕಿಸಲು ನಾನು ಆಭರಣಕಾರರ ಫೋರ್ಸ್ಪ್ಸ್ ಅನ್ನು ಬಳಸಬೇಕಾಗಿತ್ತು. ಒಂದು ತಿಂಗಳ ಕಾಲ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಕೆ ಮಾಡಬೇಡಿ'' ಎಂದು ಸೂಚಿಸಿರುವುದಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+