US Elections 2024: ಮಹಿಳಾ ವಿರೋಧಿ ಅಮೆರಿಕ? ಇತಿಹಾಸದ ಪುಟಗಳಲ್ಲಿ...

ಅಮೆರಿಕ... ಈ ಹೆಸರು ಕೇಳಿದ ತಕ್ಷಣ ಬಹುತೇಕರು ಅಂದುಕೊಳ್ಳುವುದು ಏನು ಗೊತ್ತೆ? ಶ್ರೀಮಂತ ದೇಶ, ಶಕ್ತಿಶಾಲಿ ದೇಶ, ಮಹಿಳೆಯರಿಗೆ ಗೌರವ ಕೊಡುವ ದೇಶ, ಅಮೆರಿಕದಲ್ಲಿನ ಮಹಿಳೆಯರಿಗೆ ಸಾಕಷ್ಟು ಸ್ವಾತಂತ್ರ್ಯ ಇದೆ... ಹೀಗೆ ನೂರಾರು ಪೂರ್ವಗ್ರಹ ಯೋಚನೆಗಳ ಸಂಕೋಲೆಗೆ ಮಾನವ ಸಿಲುಕುತ್ತಾನೆ. ಆದರೆ ವಾಸ್ತವದಲ್ಲಿ ಏನು ಮಣ್ಣು ಇರಲ್ಲ!

ಅದ್ರಲ್ಲೂ ಮಹಿಳೆಯರ ವಿಚಾರದಲ್ಲಿ ಅಮೆರಿಕ ಎಲ್ಲಾ ದೇಶಗಳಂತೆ ಉಳಿದುಬಿಟ್ಟಿದೆ. ಇದಕ್ಕೆ ಪ್ರಮುಖ ಸಾಕ್ಷಿ ಎನ್ನುವಂತೆ ಇಡೀ ಅಮೆರಿಕದ ಇತಿಹಾಸದಲ್ಲೇ, ಒಬ್ಬರೇ ಒಬ್ಬರು ಮಹಿಳಾ ಅಧ್ಯಕ್ಷರು ಕೂಡ ಆಯ್ಕೆ ಆಗಿಲ್ಲ! ಆದರೆ ಈ ಬಾರಿ ಕಮಲಾ ಹ್ಯಾರಿಸ್ ಆಯ್ಕೆ ಬಹುತೇಕ, ಗ್ಯಾರಂಟಿ ಬಿಡು ಗುರೂ... ಎನ್ನಲಾಗಿತ್ತು. ಆದರೂ ಕಮಲಾ ಹ್ಯಾರಿಸ್ ಗೆಲ್ಲಲೇ ಇಲ್ಲ ನೋಡಿ. ಹಾಗಾದ್ರೆ ಅಮೆರಿಕದಲ್ಲಿ ಈವರೆಗೂ ಮಹಿಳಾ ಅಧ್ಯಕ್ಷರ ಆಯ್ಕೆ ಯಾಕೆ ಆಗಿಲ್ಲ?

Discover Why There Is No A Single Women President In American History

200 ವರ್ಷಗಳ ಅಮೆರಿಕ ಇತಿಹಾಸದಲ್ಲಿ...

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಮಾದರಿ ಶುರುವಾಗಿದ್ದು ಇಂದು ಅಥವಾ ನಿನ್ನೆಯಲ್ಲ, ಸುಮಾರು 200ಕ್ಕೂ ಹೆಚ್ಚು ವರ್ಷಗಳಿಂದ ಈ ರೀತಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಮಾದರಿ ಅನುಸರಿಸಲಾಗುತ್ತದೆ. ಹೀಗಿದ್ದರೂ, 200ಕ್ಕೂ ಹೆಚ್ಚು ವರ್ಷಗಳಿಂದ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆದುಕೊಂಡು ಬರುತ್ತಿದ್ದರೂ ಒಬ್ಬರೇ ಒಬ್ಬ ಮಹಿಳಾ ಅಧ್ಯಕ್ಷರನ್ನ ಅಮೆರಿಕದ ಜನರು ಆಯ್ಕೆ ಮಾಡಿಲ್ಲ... ಅದರಲ್ಲೂ ಕಮಲಾ ಹ್ಯಾರಿಸ್ ಸೋಲು ಇದೀಗ ಬೇರೆಯದ್ದೇ ಪಾಠ ಕಲಿಸಬೇಕಿದೆ!

ಮಹಿಳಾ ವಿರೋಧಿ ಮನಸ್ಥಿತಿ ಕಾರಣ?

ಹೌದು, ಅಮೆರಿಕದಲ್ಲಿ ಸುಮಾರು 200ಕ್ಕೂ ಹೆಚ್ಚು ವರ್ಷದಿಂದ ಈ ರೀತಿಯಾಗಿ ಅಧ್ಯಕ್ಷೀಯ ಚುನಾವಣೆ ಮಾದರಿ ಮತದಾನ ನಡೆಯುತ್ತಿದೆ ಆದರೂ ಒಬ್ಬ ಮಹಿಳೆಗೂ ಅವಕಾಶ ಸಿಕ್ಕಿಲ್ಲ. ಈ ಮಾಹಿತಿಯನ್ನು ಕೆಲವರು ಅರಗಿಸಿಕೊಳ್ಳಲು ಕೂಡ ಆಗುತ್ತಿಲ್ಲ. ಯಾಕಂದ್ರೆ ಅಮೆರಿಕದ ನೀತಿ & ಹೊರಗೆ ಅಮೆರಿಕ ತನ್ನನ್ನು ತಾನು ಬಿಂಬಿಸಿಕೊಳ್ಳುವ ರೀತಿ ನೋಡಿದರೆ ಅಮೆರಿಕ ಮಹಿಳೆಯರಿಗೆ ತುಂಬಾ ಸ್ವಾತಂತ್ರ್ಯ & ಬೆಂಬಲ ನೀಡಿದೆ ಅಂತಾ ಅಂದುಕೊಳ್ಳಬೇಕು. ಆದ್ರೆ ವಾಸ್ತವದಲ್ಲಿ ಅದೆಲ್ಲಾ ಸುಳ್ಳಾಗಿ ಹೋಗುತ್ತಿದೆ.

ಮತ್ತೊಂದು ಕಡೆ ಅಮೆರಿಕದ ವಿರೋಧಿ ದೇಶಗಳು ಹೇಳುವ ಪ್ರಕಾರ, ದೊಡ್ಡಣ್ಣ ಅಂತಾನೇ ಕರೆಸಿಕೊಳ್ಳುವ ಅಮೆರಿಕದಲ್ಲಿ ಇರುವ ಮಹಿಳಾ ವಿರೋಧಿ ಮನಸ್ಥಿತಿ ಇದಕ್ಕೆ ಕಾರಣ ಆಯ್ತಾ? ಎಂಬ ಪ್ರಶ್ನೆ ಕೂಡ ಮೂಡುತ್ತಿದೆ. ಯಾಕಂದ್ರೆ ಒಂದೇ ಒಂದು ಬಾರಿ ಕೂಡ ಅಮೆರಿಕದಲ್ಲಿ ಮತದಾರರು ಮಹಿಳಾ ಅಧ್ಯಕ್ಷರಕ್ಷರಿಗೆ ಅವಕಾಶವನ್ನೇ ನೀಡಿಲ್ಲ! ಈ ಬಗ್ಗೆ ಮುಂದೆ ಕೂಡ ಇದೇ ರೀತಿಯಾಗಿ ಚರ್ಚೆಗಳು ನಡೆಯವುದು ಗ್ಯಾರಂಟಿ ಬಿಡಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+