ಬಾಲಿವುಡ್ ನಟಿ ಕಂಗನಾ ಇಸ್ರೇಲ್ ರಾಯಭಾರಿಯನ್ನು ಭೇಟಿಯಾಗಿದ್ದು ಏಕೆ?
ನವದೆಹಲಿ: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಭೀಕರ ಕಾಳಗ ನಡೆಯುತ್ತಿದೆ. ಈ ಸಮಯದಲ್ಲಿ ಜಗತ್ತು ಎರಡು ಭಾಗವಾಗುತ್ತಿದೆ. ಅದರಲ್ಲೂ ಕೆಲವರು ಹಮಾಸ್ ಪರವಾಗಿ ನಿಂತರೆ, ಇನ್ನೂ ಕೆಲವು ದೇಶಗಳು ಇಸ್ರೇಲ್ ಪರವಾಗಿ ಧ್ವನಿ ಎತ್ತುತ್ತಿವೆ. ಇಂತಹ ಪರಿಸ್ಥಿತಿ ಎದುರಾದ ಸಮಯದಲ್ಲೇ ನಟಿ ಕಂಗನಾ ದಿಢೀರ್ ಸರ್ಪ್ರೈಸ್ ಕೊಟ್ಟಿದ್ದಾರೆ.
ಹೌದು, ನಟಿ ಕಂಗನಾ ಒಂದಲ್ಲ ಒಂದು ವಿಚಾರಕ್ಕೆ ಪದೇ ಪದೆ ಸುದ್ದಿಯಾಗುತ್ತಾರೆ. ನಟಿ ಕಂಗನಾಗೆ ಬೆಂಬಲ ನೀಡುವವರೂ ಇದ್ದಾರೆ ಹಾಗೇ ಕಂಗನಾ ಅವರ ನಡೆಯನ್ನ ವಿರೋಧ ಮಾಡುವವರು ಕೂಡ ಇದ್ದಾರೆ. ಈಗ ಮತ್ತೊಮ್ಮೆ ಕಂಗನಾ ಮುನ್ನೆಲೆಗೆ ಬಂದಿದ್ದು, ಆದ್ರೆ ಈ ಬಾರಿ ಇಸ್ರೇಲ್ ಮತ್ತು ಹಮಾಸ್ ಉಗ್ರರ ಯುದ್ಧದ ವಿಚಾರದಲ್ಲಿ ಐಕಾನ್ ಆಗಿದ್ದಾರೆ. ಹಾಗಾದರೆ ಏನದು ಕಾರಣ? ಇಬ್ಬರ ಜಗಳದಲ್ಲಿ ಕಂಗನಾ ಗಮನ ಸೆಳೆದಿದ್ದು ಏಕೆ?

ಇಸ್ರೇಲ್ ರಾಯಭಾರಿ ಜೊತೆ ಕಂಗನಾ ಚರ್ಚೆ!
ಬಾಲಿವುಡ್ ನಟಿ ಕಂಗನಾ ದೆಹಲಿಯಲ್ಲಿ ಇಂದು, ಇಸ್ರೇಲ್‌ನ ರಾಯಭಾರಿ ನಾರ್ ಗಿಲೋನ್ ಜೊತೆ ಚರ್ಚೆ ನಡೆಸಿದ್ದಾರೆ. ಅಲ್ಲದೆ ಇಸ್ರೇಲ್ ಖಂಡಿತವಾಗಿ ಯುದ್ಧದಲ್ಲಿ ಜಯ ಸಾಧಿಸಲಿದೆ ಮತ್ತು ಭಯೋತ್ಪಾದನೆ ವಿರುದ್ಧ ಗೆಲ್ಲುತ್ತೆ ಎಂದು ಕಂಗನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಅಂತಾ ಹೇಳಲಾಗಿದೆ. ಇನ್ನು ಇಸ್ರೇಲ್ -ಹಮಾಸ್ ಘರ್ಷಣೆಯ ಬಗ್ಗೆ ಇಸ್ರೇಲ್ ರಾಯಭಾರಿಯ ಜೊತೆ ಚರ್ಚೆ ನಡೆಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ ಕಂಗನಾ.
ಅಷ್ಟಕ್ಕೂ ನಟಿ ಕಂಗನಾ ಅವರು ಸದ್ಯ ಮುಂಬರುವ 'ತೇಜಸ್' ಸಿನಿಮಾ ಪ್ರಚಾರದಲ್ಲಿದ್ದು, ಇದರ ಜೊತೆಗೆ ಇಸ್ರೇಲ್ ರಾಯಭಾರಿ ಭೇಟಿ ಮಾಡಿ ಸುದ್ದಿಯಲ್ಲಿದ್ದಾರೆ. ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ಅವರನ್ನ ಭೇಟಿ ಮಾಡಿದೆ. ಇಂದು ಈ ಜಗತ್ತು, ವಿಶೇಷವಾಗಿ ಇಸ್ರೇಲ್ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ ಅಂತಾ ಕಂಗನಾ ತಿಳಿಸಿದ್ದಾರೆ. ಹಾಗೇ ಇಸ್ರೇಲ್‌ಗೆ ತಮ್ಮ ಬೆಂಬಲ ನೀಡಿ, ಹಮಾಸ್ ಉಗ್ರರ ವಿರುದ್ಧ ಗೆಲ್ಲಿ ಎಂದು ಧೈರ್ಯ ತುಂಬಿದ್ದಾರೆ.
Had a very soulful meeting with Israel’s ambassador to Bharat Shri Naor Gilon ji.
— Kangana Ranaut (@KanganaTeam) October 25, 2023
आज पूरी दुनिया, ख़ासकर इज़राइल और भारत आतंकवाद के ख़िलाफ़ अपनी जंग लड़ रहे हैं । कल जब मैं रावण दहन करने दिल्ली पहुँची, तो मुझे लगा कि इज़रायल एम्बेसी आकर उन लोगो से मिलना चाहिए जो आज के आधुनिक… pic.twitter.com/syCkDxJCze
ಇನ್ನು ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ಭೀಕರ ದಾಳಿ ನಡೆಸಿದ್ದರು. ದಿಢೀರ್ ತಮ್ಮ ಮೇಲೆ ದಾಳಿ ನಡೆದ ನಂತರ, ಇಸ್ರೇಲ್ ಕೂಡ ಮರುದಾಳಿ ಆರಂಭಿಸಿತ್ತು. ಗಾಜಾಪಟ್ಟಿ ಮೇಲೆ ಇಸ್ರೇಲ್ ಸೇನೆ ನಡೆಸುತ್ತಿರುವ ದಾಳಿ ಪರಿಣಾಮ ಈವರೆಗೆ ಒಟ್ಟು 5000ಕ್ಕೂ ಹೆಚ್ಚು ಜನ ಗಾಜಾಪಟ್ಟಿಯಲ್ಲಿ ಪ್ರಾಣ ಬಿಟ್ಟಿದ್ದಾರೆ ಎಂಬ ಆರೋಪ ಇದೆ. ಹಾಗೂ ಇಸ್ರೇಲ್ ನೆಲದಲ್ಲಿ ಕೂಡ ಸಾವು-ನೋವು ಸಂಭವಿಸಿದೆ ಈ ವೇಳೆ ಅಮೆರಿಕ ಇಸ್ರೇಲ್ ಸೇನೆ ಪರ ನಿಂತಿದೆ. ಇದು ಜಗತ್ತಿನ ಗಮನ ಸೆಳೆಯುವಾಗ ಕಂಗನಾ ಕೂಡ ಇಸ್ರೇಲ್‌ಗೆ ಧೈರ್ಯ ಹೇಳಿದ್ದಾರೆ.












Click it and Unblock the Notifications