ಸಂಸತ್ ವಿಸರ್ಜಿಸಿದ ಪಾಕಿಸ್ತಾನದಲ್ಲಿ ಹಂಗಾಮಿ ಪ್ರಧಾನಿಗಾಗಿ ಪರದಾಟ!

ಇಸ್ಲಾಮಾಬಾದ್: ಪಾಕಿಸ್ತಾನ ಎಲ್ಲಾ ವಿಚಾರದಲ್ಲೂ ನಗೆಪಾಟಲಿಗೆ ಈಡಾಗುತ್ತದೆ. ಇದೀಗ ಅವಧಿಗೆ ಮೊದಲೇ ಸಂಸತ್ ವಿಸರ್ಜನೆ ಮಾಡಿರುವ ಪಾಕ್ ಸರ್ಕಾರ, ಹಂಗಾಮಿ ಪ್ರಧಾನಿ ಆಯ್ಕೆಗೆ ಪರದಾಡುವ ಪರಿಸ್ಥಿತಿ ಬಂದಿದೆ. ಒಂದು ಕಡೆ ಪಾಕಿಸ್ತಾನದ ಮಾಜಿ ಪ್ರಧಾನಿ ಈಗ ಜೈಲು ಸೇರಿರುವ ವೇಳೆ, ಇನ್ನೊಬ್ಬ ಮಾಜಿ ಪ್ರಧಾನಿ ಹಂಗಾಮಿ ಪ್ರಧಾನಿ ಹುಡುಕಾಟಕ್ಕೆ ಪರದಾಡುತ್ತಿದ್ದಾರೆ.

ಹೌದು, ಪಾಕ್ 'ನ್ಯಾಷನಲ್‌ ಅಸೆಂಬ್ಲಿ'ಯನ್ನ ಅಧ್ಯಕ್ಷ ಆರೀಫ್‌ ಅಲವಿ ನಿನ್ನೆ ಅಧಿಕೃತವಾಗಿ ವಿಸರ್ಜಿಸಿದ್ದಾರೆ. ಇದೀಗ ಹಂಗಾಮಿ ಪ್ರಧಾನಿ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು, ವಿರೋಧ ಪಕ್ಷದ ನಾಯಕ, ಪಿಟಿಐನ ರಾಜಾ ರಿಯಾಜ್‌ ಜೊತೆಗೆ ಶೆಹಬಾಜ್‌ ಷರೀಫ್‌ ಹಂಗಾಮಿ ಪ್ರಧಾನಿ ಆಯ್ಕೆಗಾಗಿ ಮಾತುಕತೆ ನಡೆಸಿದ್ದಾರೆ. ಆದರೆ ಇನ್ನೂ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಹಂಗಾಮಿ ಪ್ರಧಾನಿ ಆಯ್ಕೆಗೆ ಪ್ರಧಾನಿ & ವಿರೋಧ ಪಕ್ಷಗಳ ನಾಯಕರಿಗೆ ಒಟ್ಟಾರೆ 3 ದಿನ ಟೈಂ ಇರುತ್ತದೆ. ಅಲ್ಲಿವರೆಗೂ ಶೆಹಬಾಜ್‌ ಷರೀಫ್‌ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ. ಆದರೆ ಹಂಗಾಮಿ ಪ್ರಧಾನಿ ಆಯ್ಕೆಯೇ ದೊಡ್ಡ ತಲೆನೋವಾಗಿದೆ.

Discover what is next step in Pakistan after parliament dissolved

ದಿಢೀರ್ ಸಂಸತ್ ವಿಸರ್ಜನೆ ಏಕೆ?

ನಿನ್ನೆ ತಡರಾತ್ರಿ ಪಾಕಿಸ್ತಾನದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಪಾಕ್ ಪ್ರಧಾನಿ ಶೆಹಬಾಜ್‌ ಷರೀಫ್‌ ಸಂಸತ್‌ ವಿಸರ್ಜನೆಗೆ ಅಧಿಸೂಚನೆ ಕಳುಹಿಸಿದ್ರು. ಹೀಗಾಗಿ ಪಾಕ್‌ ಸಂಸತ್ ವಿಸರ್ಜನೆ ಮಾಡಿದ್ದು, 90 ದಿನದ ಒಳಗಾಗಿ ಚುನಾವಣೆ ನಡೆವ ನಿರೀಕ್ಷೆ ಇದೆ. ಆಗಸ್ಟ್‌ 12ಕ್ಕೆ ಪಾಕಿಸ್ತಾನದ ಹಾಲಿ ಸರ್ಕಾರದ ಅವಧಿ ಮುಗಿಯುತ್ತಿದ್ದು, ಕೆಲ ದಿನಗಳ ಹಿಂದಷ್ಟೇ ಸಂಸತ್ ವಿಸರ್ಜನೆ ಬಗ್ಗೆ ಪಾಕಿಸ್ತಾನ ಪ್ರಧಾನಿ ಮಹತ್ವದ ಮಾತುಕತೆ ನಡೆಸಿದ್ದರು. ಹೀಗೆ ಮಾತುಕತೆ ನಡೆದ ಬಳಿಕ ನಿನ್ನೆ ತಡರಾತ್ರಿ ದಿಢೀರ್ ಪಾಕಿಸ್ತಾನದ ಅಧ್ಯಕ್ಷ ಆರೀಫ್ ಅಲವಿಗೆ, ಸಂಸತ್ ವಿಸರ್ಜನೆಗಾಗಿ ಶಿಫಾರಸು ಕಳುಹಿಸಿದ್ದರು. ಹೀಗಾಗಿ ಈಗ ಹಂಗಾಮಿ ಪ್ರಧಾನಿ ಹುಡುಕಾಟಕ್ಕೆ ಸರ್ಕಸ್ ನಡೆಯುತ್ತಿದೆ.

ಪಾಕಿಸ್ತಾನದ ಹಂಗಾಮಿ ಪ್ರಧಾನಿ ಆಯ್ಕೆ ಹೇಗೆ?

ಇನ್ನು ಪಾಕ್ ಸಂವಿಧಾನದ ಪ್ರಕಾರ ಹಂಗಾಮಿ ಪ್ರಧಾನಿ ಆಯ್ಕೆಗೆ ವಿಪಕ್ಷ ನಾಯಕ ಮತ್ತು ಆಡಳಿತ ಪಕ್ಷದ ನಾಯಕರು ಒಮ್ಮತದ ನಿರ್ಧಾರಕ್ಕೆ ಬರಬೇಕು. ಇದಕ್ಕಾಗಿ ಕೇವಲ ಮೂರು ದಿನ ಸಮಯ ಇರುತ್ತದೆ. ಅಕಸ್ಮಾತ್ ಈ ಅವಧಿಯಲ್ಲಿ ಪ್ರಧಾನಿ ಹಾಗೂ ವಿರೋಧ ಪಕ್ಷಗಳ ನಾಯಕರು ಒಮ್ಮತಕ್ಕೆ ಬಾರದಿದ್ದರೆ ಸ್ಪೀಕರ್‌ ರಚಿಸುವ ಸಮಿತಿಗೆ ಹಂಗಾಮಿ ಪ್ರಧಾನಿ ಆಯ್ಕೆ ಜವಾಬ್ದಾರಿ ಸಿಗಲಿದೆ. ಅಕಸ್ಮಾತ್ ಸಮಿತಿ ಕೂಡ 3 ದಿನಗಳ ಒಳಗೆ ಹಂಗಾಮಿ ಪ್ರಧಾನಿಯನ್ನ ಆಯ್ಕೆ ಮಾಡದೇ ಹೋದರೆ, ಆ ವೇಳೆ ಪಾಕ್‌ ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡಿ ಪ್ರಧಾನಿ ಮತ್ತು ವಿಪಕ್ಷ ನಾಯಕರು ಶಿಫಾರಸು ಮಾಡುವ ಯಾರಾದರೂ ಒಬ್ಬರನ್ನ ಹಂಗಾಮಿ ಪ್ರಧಾನಿ ಪಟ್ಟಕ್ಕೆ ನೇಮಿಸುತ್ತದೆ.

Discover what is next step in Pakistan after parliament dissolved

ಪಾಕಿಸ್ತಾನದ ಮುಂದಿನ ಕಥೆ ಏನು?

ಭಾರತದ ನೆರೆ ದೇಶದಲ್ಲಿ ಈಗ ರಾಜಕೀಯ ಅಸ್ತಿರತೆ ನಡುವೆ ಮಹತ್ವದ ಬೆಳವಣಿಗೆ ನಡೆದಿದೆ. ಪಾಕಿಸ್ತಾನ ಲೋಕಸಭೆ ಸದಸ್ಯ ಬಲ 342, ಭಾರತದ ರೀತಿಯೇ ಪಾಕಿಸ್ತಾನದಲ್ಲೂ 5 ವರ್ಷಗಳ ಅಧಿಕಾರವಧಿ ಇರುತ್ತದೆ. ಅದರೆ ಈ ಅವಧಿಯು ಆಗಸ್ಟ್ 12ಕ್ಕೆ ಕೊನೆಗೊಳ್ಳಲಿದ್ದು, ಅವಧಿಗೆ ಮುನ್ನ ಅಂದ್ರೆ ಆಗಸ್ಟ್‌ 9ರಂದು ಸಂಸತ್ ವಿಸರ್ಜನೆಗೆ ಶಿಫಾರಸು ಕಳುಹಿಸಿದ್ದರು ಪಾಕ್ ಪ್ರಧಾನಿ. ಇದೀಗ ಹಂಗಾಮಿ ಪ್ರಧಾನಿ ಆಯ್ಕೆ ಮಾಡಿದರೆ ದೊಡ್ಡ ತಲೆನೋವು ತಪ್ಪಲಿದೆ, ಇಲ್ಲದೇ ಹೋದರೆ ಮತ್ತೆ ಪಾಕ್‌ನಲ್ಲಿ ಭಯ ಆವರಿಸಲಿದ್ದು, ಪ್ರತಿಭಟನೆಯ ಆತಂಕ ಇದ್ದೇ ಇದೆ.

ಇಮ್ರಾನ್ ಖಾನ್ ಚುನಾವಣೆಗೆ ಸ್ಪರ್ಧಿಸಲ್ಲ!

ಪಾಕಿಸ್ತಾನ ಈಗಾಗಲೇ ಹೊತ್ತಿ ಉರಿಯುತ್ತಿದೆ. ಅದರಲ್ಲೂ ಇಮ್ರಾನ್ ಖಾನ್ ಬಂಧನದ ಬಳಿಕ ತಿಕ್ಕಾಟ ಜೋರಾಗಿದೆ. ಸಂಸತ್‌ ವಿಸರ್ಜನೆ ಮಾಡುವ ತೀರ್ಮಾನ ಕೈಗೊಂಡು ಚುನಾವಣೆಗೆ ಸಿದ್ಧತೆ ನಡೆಸಲಾಗಿದೆ. ಸಂಸತ್‌ ವಿಸರ್ಜನೆ ಬಗ್ಗೆ ಪ್ರಧಾನಿ ಶೆಹಬಾಜ್‌ ಅಧ್ಯಕ್ಷ ಆರೀಫ್ ಅಲವಿಗೆ ಶಿಫಾರಸು ಮಾಡಿದ ಬಳಿಕ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮವಾಗಿದೆ. ಇಷ್ಟೆಲ್ಲದರ ನಡುವೆ ಪಾಕ್ ಚುನಾವಣಾ ಆಯೋಗ ಇದೀಗ ಚುನಾವಣೆ ನಡೆಸಲು ಸಿದ್ಧತೆ ಆರಂಭಿಸಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಆಂತರಿಕವಾಗಿ ಗಲಭೆ ಹಾಗೂ ಹಿಂಸಾಚಾರ ಭುಗಿಲೇಳುವ ಭಯ ಆವರಿಸಿದ್ದು, ಪಾಕಿಸ್ತಾನ ಆಂತರಿಕ ಭದ್ರತೆಗೆ ಹೆಚ್ಚಿನ ಒತ್ತು ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+