Israel-Iran War: ಇಸ್ರೇಲ್ & ಇರಾನ್ ಯುದ್ಧ ಅಖಾಡಕ್ಕೆ ಟ್ರಂಪ್ ಎಂಟ್ರಿ: ಅಬ್ಬಬ್ಬಾ ಏನ್ ಐಡಿಯಾ ಕೊಟ್ಟಿದ್ದಾರೆ ಗುರೂ!
ಇಸ್ರೇಲ್ & ಇರಾನ್ ಯುದ್ಧದ ಬಿರುಗಾಳಿ ಕ್ಷಣ ಕ್ಷಣಕ್ಕೂ ಜೋರಾಗುತ್ತಿದ್ದು, ಯುದ್ಧದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ. ಕೆಲವು ದೇಶಗಳು ಯುದ್ಧ ಮಾಡಬೇಡಿ ಅಂತಾ ಹೇಳುತ್ತಿದ್ದರೆ, ಹಲವು ದೇಶಗಳು ಯುದ್ಧ ಬೇಕು ಎಂಬ ಮನಸ್ಥಿತಿ ಹೊಂದಿವೆ. ಈ ಹಿನ್ನೆಲೆಯಲ್ಲಿ ಇದೀಗ ಮಧ್ಯಪ್ರಾಚ್ಯ ಪೂರ್ತಿ ನಲುಗಿ ಹೋಗಿದೆ. ಇದರ ಜೊತೆಗೆ ಏನಾದರೂ ಸ್ವಲ್ಪ ಹೆಚ್ಚುಕಮ್ಮಿ ಆದರೂ ಪರಿಸ್ಥಿತಿ ಕೈಮೀರಿ ಹೋಗುವ ಸಂಭವ ಇದ್ದು, ಇದು ಮುಂದೆ 3ನೇ ಮಹಾಯುದ್ಧಕ್ಕೆ ಮುನ್ನುಡಿ ಬರೆಯಲಿದೆ. ಹೀಗಿದ್ದಾಗಲೇ ಅಮೆರಿಕದ ಡೊನಾಲ್ಡ್ ಟ್ರಂಪ್ ಏನ್ ಹೇಳಿದ್ದಾರೆ ಗೊತ್ತಾ?
ಇಸ್ರೇಲ್ & ಇರಾನ್ ಯುದ್ಧದ ಬಗ್ಗೆ ಭಾರತ ಈಗಾಗಲೇ ಗಟ್ಟಿ ನಿಲುವು ತೆಗೆದುಕೊಂಡು, ಈ ವಿಚಾರದಲ್ಲಿ ಶಾಂತಿ ಮಾತುಕತೆ ಮಾತ್ರ ಉತ್ತಮ ನಿರ್ಧಾರ ಎನ್ನುತ್ತಿದೆ. ಈ ಮೂಲಕ ಭಾರತ ಶಾಂತಿಯ ಹಾದಿ ತುಳಿಯಲು ಹೇಳುತ್ತಿದೆ. ಇಂತಹ ಸಮಯದಲ್ಲೇ ಇಸ್ರೇಲ್ ಬೆಂಬಲಿಗ ದೇಶ, ಅಮೆರಿಕ ಮಾತ್ರ ಇಬ್ಬರ ಮಧ್ಯೆ ಯುದ್ಧ ಮಾಡಿಸಲು ಸಿದ್ಧವಾಗಿ ಕೂತಂತೆ ಕಾಣುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪರಿಸ್ಥಿತಿ ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ಕೂಡ ಒಂದು ಹೇಳಿಕೆ ಬಿಸಾಕಿದ್ದು, ಇದೀಗ ಸಂಚಲನ ಸೃಷ್ಟಿಯಾಗಿದೆ. ಹಾಗಾದ್ರೆ ಡೊನಾಲ್ಡ್ ಟ್ರಂಪ್ ಹೇಳಿದ್ದೇನು? ಮುಂದೆ ಓದಿ.

ಇರಾನ್ ಪರಮಾಣು ಬಾಂಬ್...
ಹೌದು, ಡೊನಾಲ್ಡ್ ಟ್ರಂಪ್ ಇದೀಗ ಇಸ್ರೇಲ್ ಪ್ರಧಾನಿಗೆ ಮಹತ್ವದ ಸಲಹೆ ಒಂದನ್ನ ನೀಡಿ ಸುದ್ದಿಯಲ್ಲಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಇದೀಗ ಹೇಳಿರುವಂತೆ, ಇಸ್ರೇಲ್ ಈಗ ನೇರ ಇರಾನ್ ದೇಶದ ಪರಮಾಣು ಸ್ಥಾವರಗಳ ಮೇಲೆ ದಾಳಿ ಮಾಡಬೇಕು ಎಂದಿದ್ದಾರೆ. ಹೀಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು. ಇರಾನ್ ದೇಶದ ಪರಮಾಣು ಸ್ಥಾವರಗಳನ್ನು ನಾಶ ಮಾಡಿದರೆ ಮಾತ್ರ ಈ ಯುದ್ಧವನ್ನ ತಡೆಯಬಹುದು ಎಂಬುದು ಡೊನಾಲ್ಡ್ ಟ್ರಂಪ್ ಅವರ ವಾದ. ಈ ರೀತಿ ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡಿದ್ದಾರೆ. ಈಗ ಅಮೆರಿಕದಲ್ಲಿ ಚುನಾವಣೆ ನಡೆಯುತ್ತಿದ್ದು ಚುನಾವಣೆಗಾಗಿ ಪ್ರಚಾರ ನಡೆಸುತ್ತಿರುವ ಟ್ರಂಪ್ ಈ ರೀತಿ ಇರಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
3ನೇ ಮಹಾಯುದ್ಧದ ಭಯ...
ಇಸ್ರೇಲ್ & ಇರಾನ್ ನಡುವೆ ಘೋರ ಯುದ್ಧ ನಡೆದರೆ ಯಾರಿಗೂ ಲಾಭ ಆಗುವುದಿಲ್ಲ. ಯಾಕೆ ಅಂದ್ರೆ ಇಬ್ಬರ ನಡುವಿನ ಯುದ್ಧ ಮುಂದೆ 3ನೇ ಮಹಾಯುದ್ಧಕ್ಕೆ ಬದಲಾಗಲಿದೆ. ಆಗಲೇ ನೋಡಿ ಶುರುವಾಗುವುದು ಅಸಲಿ ಕಹಾನಿ, ಈಗಿನ ಪರಿಸ್ಥಿತಿಯಲ್ಲಿ 3ನೇ ಮಹಾಯುದ್ಧವನ್ನ ಶುರು ಮಾಡಿದರೆ ಮುಂದೆ ಬಯೋ ವಾರ್ & ನ್ಯೂಕ್ಲಿಯರ್ ವಾರ್ ಶುರುವಾಗಲಿದೆ. ಹೀಗಾಗಿ ಮನುಷ್ಯರು ರೋಗಗಳಿಂದ, ವಾತಾವರಣ ವಿನಾಶದಿಂದ ನಾಶವಾಗಿ ಹೋಗುತ್ತಾರೆ ಎನ್ನುವ ಭಯ ಕಾಡುತ್ತಿದೆ. ಈ ಕಾರಣಕ್ಕೆ ಇಸ್ರೇಲ್ & ಇರಾನ್ ನಡುವೆ ಯುದ್ಧ ನಿಲ್ಲಬೇಕು, ಮಾತುಕತೆ ಮೂಲಕ ಇಬ್ಬರೂ ಸಮಸ್ಯೆ ಸರಿ ಮಾಡಿಕೊಳ್ಳಬೇಕು ಎಂದು ಭಾರತ ಸಲಹೆಯನ್ನ ನೀಡುತ್ತಿದೆ.












Click it and Unblock the Notifications