ಪರಮಾಣು ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆ ಮಾಡಿದ ಪಾಕಿಸ್ತಾನ?

ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿರುವ ವೇಳೆ, ಪಾಕಿಸ್ತಾನ ಇಂದು ಮತ್ತೊಂದು ಮಿಸೈಲ್ ಪರೀಕ್ಷೆಯನ್ನ ಯಶಸ್ವಿಯಾಗಿ ನೆರವೇರಿಸಿದೆ. ಈ ಮೂಲಕ ಗಡಿಯ ಭಾಗದಲ್ಲಿ ಪರಿಸ್ಥಿತಿ ಇನ್ನಷ್ಟು ಸೂಕ್ಷ್ಮವಾಗಿದೆ. ಅದರಲ್ಲೂ ಆರ್ಥಿಕವಾಗಿ ಬೀದಿಗೆ ಬಿದ್ದರೂ ಪಾಕಿಸ್ತಾನದ ಶಸ್ತ್ರಾಸ್ತ್ರಗಳ ಶೋಕಿ ಇನ್ನೂ ಮುಗಿದಿಲ್ಲ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ.

ಹೌದು, ಇಂದು ಪಾಕಿಸ್ತಾನ ಪರಮಾಣು ಸಾಮರ್ಥ್ಯದ ಕ್ಷಿಪಣಿ ಪ್ರಯೋಗವನ್ನು ನಡೆಸಿದ್ದು ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಪಾಕಿಸ್ತಾನದ ಸೇನೆ ತನ್ನ ಪ್ರಕಟಣೆಯಲ್ಲಿ ಮಾಹಿತಿಯನ್ನ ನೀಡಿದೆ. ಕಳೆದ ವಾರ 'ಅಬಬೀಲ್' (Ababeel) ಕ್ಷಿಪಣಿಯ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತ್ತು ಪಾಕಿಸ್ತಾನಿ ಸೇನೆ. 'ಅಬಬೀಲ್' ಕ್ಷಿಪಣಿ ಹಲವು ಅಟ್ಯಾಕ್ ಒಟ್ಟಿಗೆ ಸಂಘಟಿಸುವ ಶಕ್ತಿ ಹೊಂದಿತ್ತು. ಈಗ ಮತ್ತೊಂದು ಕ್ಷಿಪಣಿ ಪ್ರಯೋಗ ನಡೆಸಿರುವ ಪಾಕಿಸ್ತಾನ ಸೇನೆಯು, ಏನೋ ಸ್ಕೆಚ್ ಹಾಕಿರುವಂತೆ ಕಾಣುತ್ತಿದೆ. ಹಾಗಾದ್ರೆ ಪಾಕಿಸ್ತಾನದ ಹೊಸ ಕ್ಷಿಪಣಿ ಕೆಪಾಸಿಟಿ ಎಷ್ಟು ಕಿಲೋ ಮೀಟರ್?

Discover how the Pakistan army is tested another missile

1,300ರಿಂದ 1,500 ಕಿ.ಮೀ. ಸಾಮರ್ಥ್ಯದ ಮಿಸೈಲ್?

ಪಾಕಿಸ್ತಾನ ಮತ್ತೊಂದು ಖಂಡಾಂತರ ಕ್ಷಿಪಣಿ ಪ್ರಯೋಗ ಮಾಡಿರುವುದು ಸಹಜವಾಗಿ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಅಲ್ಲದೆ ತನ್ನ ಕ್ಷಿಪಣಿ ಪರೀಕ್ಷೆಯು ಸಕ್ಸಸ್ ಆಗಿದೆ ಅಂತಾ ಹೇಳ್ತಿದೆ ಪಾಕ್. ಈ ಮಧ್ಯೆ ಪಾಕಿಸ್ತಾನದ ಹೊಸ ಪರಮಾಣು ಸಾಮರ್ಥ್ಯದ ಕ್ಷಿಪಣಿಯು, ಸುಮಾರು 1300ರಿಂದ 1500 ಕಿಮೀ ದೂರ ಹಾರುತ್ತದೆ ಅಂತಾ ಹೇಳಲಾಗಿದೆ. ಹೀಗೆ ಖಂಡಾಂತರ ಕ್ಷಿಪಣಿ ಪ್ರಯೋಗ ನಡೆಸಿರುವ ಪಾಕಿಸ್ತಾನ, ಏನೋ ಸ್ಕೆಚ್ ಹಾಕಿದಂತೆ ಕಾಣ್ತಿದೆ. ಕ್ಷಿಪಣಿಯ ಪರಿಕ್ಷಾರ್ಥ ಪ್ರಯೋಗದ ವೇಳೆ, ಪಾಕಿಸ್ತಾನದ ಸೇನೆಯ ಎಎಸ್‌ಎಫ್‌ಸಿ ತುಕಡಿ ಕಮಾಂಡರ್, ಹಿರಿಯ ಅಧಿಕಾರಿಗಳು, ವಿಜ್ಞಾನಿಗಳು, ಎಂಜಿನಿಯರ್‌ಗಳು ಇದ್ದರು ಎನ್ನಲಾಗಿದೆ.

ಚೀನಾದ 3 ಕಂಪನಿಗಳ ವಿರುದ್ಧ ನಿರ್ಬಂಧ

ಮತ್ತೊಂದು ಕಡೆ ಪಾಕಿಸ್ತಾನಿ ಕ್ಷಿಪಣಿ ಕಾರ್ಯಕ್ರಮಕ್ಕೆ ಅಗತ್ಯ ಇದ್ದ ಪರಿಕರಗಳನ್ನ ಪೂರೈಸಿದ ಆರೋಪ ಹೊರಿಸಿ, ಚೀನಾದ 3 ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಈ ಎಲ್ಲ ಮಹತ್ವದ ಬೆಳವಣಿಗೆ ಬೆನ್ನಲ್ಲೇ ಪಾಕಿಸ್ತಾನ ಸೇನೆ ಹೊಸ ಕ್ಷಿಪಣಿ ಪ್ರಯೋಗ ಮಾಡಿದೆ. ಇದು ಸಹಜವಾಗಿ ಪರಿಸ್ಥಿತಿಯನ್ನ ಮತ್ತಷ್ಟು ಸೂಕ್ಷ್ಮಗೊಳಿಸಿದೆ. ಇನ್ನೊಂದು ಕಡೆ ದೇಶದ ಜನಕ್ಕೆ ಗೋಧಿ ಹಿಟ್ಟು ಕೊಡಲು ಆಗದೇ ಇದ್ದರೂ ಕ್ಷಿಪಣಿಗಳನ್ನ ಪರೀಕ್ಷೆ ಮಾಡುತ್ತಿದೆ ಎಂದು ಈ ಬಗ್ಗೆ ಸೋಷಿಯಲ್ ಮೀಡಿಯಾ ಮಂದಿ ಆಕ್ರೋಶ ಹೊರಹಾಕುತ್ತಿದ್ದಾರೆ.

Discover how the Pakistan army is tested another missile

ಕೈಗೆ ಸಿಗದ ಹಣದುಬ್ಬರ ಅದರ ಜೊತೆಯಲ್ಲೇ ಹಣಕಾಸಿನ ಅಸಮತೋಲನ. ಇಷ್ಟು ಸಾಲದು ಎಂಬಂತೆ ಮೈತುಂಬಾ ಸಾಲ ಮಾಡಿಕೊಂಡಿರುವ ಪಾಕಿಸ್ತಾನ ನರಳುತ್ತಿದೆ. ಈಗಾಗಲೇ ಹಲವು ಸರ್ಕಾರಿ ಆಸ್ತಿಗಳನ್ನ ಕೂಡ ಪಾಕಿಸ್ತಾನ ಮಾರಾಟ ಮಾಡಿದೆ. ತುರ್ತು ನಿಧಿಯನ್ನ ಸಂಗ್ರಹಿಸಲು ಕಳೆದ ವರ್ಷ ಹೊಸ ಕಾನೂನು ಜಾರಿಗೆ ತಂದಿರುವ ಪಾಕ್ ನೆಲದ ರಾಜಕಾರಣಿಗಳು, ದೇಶವನ್ನೇ ಮಾರುತ್ತಿದ್ದಾರೆ ಎಂಬ ಆರೋಪ ಇದೆ. ಈ ಎಲ್ಲಾ ಆರೋಪಗಳ ನಡುವೆ ಹೊಸ ಮಿಸೈಲ್ ಪ್ರಯೋಗ ಮಾಡಿದೆ ಪಾಕ್ ಸೇನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+