‘ಯುದ್ಧ ನಿಲ್ಲೋದಿಲ್ಲ, ಉಕ್ರೇನ್ ಸೋಲುವವರೆಗೆ ನಾವು ಸುಮ್ಮನಾಗಲ್ಲ!’

ರಷ್ಯಾ ಮತ್ತು ಉಕ್ರೇನ್ ನಡುವೆ ದೊಡ್ಡ ಜಗಳ ನಡೆಯುವ ಸಮಯದಲ್ಲೇ ಸಂಚಲನವೂ ಸೃಷ್ಟಿಯಾಗಿದೆ. ಈಗಾಗಲೇ ಭಾಗಶಃ ಉಕ್ರೇನ್ ನೆಲ ರಷ್ಯಾ ಸೇನೆಯ ಏಟಿಗೆ ಸಿಲುಕಿ ನಲುಗಿ ಹೋಗಿದೆ. ಹೀಗಿದ್ದಾಗ ಇಂದು ರಷ್ಯಾ ಅಧ್ಯಕ್ಷ ಪುಟಿನ್ ಮಹತ್ವದ ಹೇಳಿಕೆ ನೀಡಿದ್ದು, ಈ ಮೂಲಕ ರಣಕಹಳೆ ಮೊಳಗಿಸಿದ್ದಾರೆ. ತಮ್ಮ ಹೇಳಿಕೆಯಲ್ಲಿ ಅಮೆರಿಕದ ನಾಯಕರಿಗೆ ಕೂಡ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಹೌದು, ಉಕ್ರೇನ್ ವಿರುದ್ಧದ ಯುದ್ಧದ ಬಗ್ಗೆ ಇಂದು ಹೇಳಿಕೆ ನೀಡಿರುವ ರಷ್ಯಾ ಅಧ್ಯಕ್ಷ ಪುಟಿನ್. 'ನಮ್ಮ ಗುರಿ ಮುಟ್ಟುವ ತನಕ ಉಕ್ರೇನ್‌ನಲ್ಲಿ ಶಾಂತಿ ಇರಲ್ಲ. ಉಕ್ರೇನ್‌ ಮೇಲಿನ ಆಕ್ರಮಣದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದು ಹೇಳಿದ್ದಾರೆ. ವ್ಲಾದಿಮಿರ್ ಪುಟಿನ್ ಹೇಳಿಕೆ ಈಗ ಸಂಚಲನ ಸೃಷ್ಟಿಸಿದೆ. ಉಕ್ರೇನ್‌ ವಿರುದ್ಧ ಈ ಆಕ್ರಮಣವನ್ನು ವಿಶೇಷ ಸೇನಾ ಕಾರ್ಯಾಚರಣೆ ಎಂದು ರಷ್ಯಾ ಹೇಳುತ್ತಿದೆ. ಹಾಗೇ ಸದ್ಯ ಉಕ್ರೇನ್ ವಿರುದ್ಧ ಜೀವದ ಆಸೆ ಬಿಟ್ಟು ಹೋರಾಡುತ್ತಿರುವ ಯೋಧರ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.

 Discover How Russian President Putin Warned Ukraine Again

6.17 ಲಕ್ಷ ರಷ್ಯಾ ಸೈನಿಕರು

ಇದೇ ವೇಳೆ ಮತ್ತೊಂದು ಪ್ರಮುಖ ಮಾಹಿತಿ ನೀಡಿರುವ ರಷ್ಯಾ ಅಧ್ಯಕ್ಷ ಪುಟಿನ್ ಅವರು, ರಷ್ಯಾದ ಸೇನಾ ಪಡೆಗಳೊಂದಿಗೆ ಕೈಜೋಡಿಸಲು ಕರೆಸಿಕೊಂಡ ಸುಮಾರು 2.44 ಲಕ್ಷ ಸೈನಿಕರು ಸೇರಿ 6.17 ಲಕ್ಷ ರಷ್ಯಾ ಸೈನಿಕರು ಈಗ ಕಾರ್ಯಾಚರಣೆ ಭಾಗವಾಗಿದ್ದಾರೆ. ಇವೆರಲ್ಲ ಇದೀಗ ರಷ್ಯಾ ಪರವಾಗಿ ಉಕ್ರೇನ್ ವಿರುದ್ಧ ಹೋರಾಡುತ್ತಿದ್ದಾರೆ ಎಂದು ರಷ್ಯಾ ಅಧ್ಯಕ್ಷ ಮಹತ್ವದ ಮಾಹಿತಿ ಹೊರಹಾಕಿದ್ದಾರೆ. ಅಲ್ಲದೆ ಇದೇ ಸಮಯದಲ್ಲಿ ಮೀಸಲು ಪಡೆಯ ಬಗ್ಗೆ ಕೂಡ ಅವರು ಮಾತನಾಡಿದ್ದಾರೆ.

ಮೀಸಲು ಪಡೆ ಬಗ್ಗೆ ಪುಟಿನ್ ಹೇಳಿದ್ದೇನು?

ಇದೇ ವೇಳೆ ರಷ್ಯಾ ಅಧ್ಯಕ್ಷ ಪುಟಿನ್ ಮೀಸಲು ಪಡೆ ಬಗ್ಗೆ ಮಾತನಾಡಿ, 'ಮೀಸಲು ಪಡೆ ಒಟ್ಟುಗೂಡಿಸುವ ಅನಿವಾರ್ಯತೆ ಈಗ ಇಲ್ಲ. ದೇಶದಾದ್ಯಂತ ಪ್ರತಿದಿನವು 1,500 ಜನರನ್ನ ಸೇನೆಗೆ ನೇಮಿಸಿಕೊಳ್ಳಲಾಗ್ತಿದೆ ಎಂದಿದ್ದಾರೆ. ಅಲ್ಲದೆ 4.86 ಲಕ್ಷ ಸೈನಿಕರು ರಷ್ಯಾ ಸೇನೆ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಉಕ್ರೇನ್‌ನಲ್ಲಿ ಮಾಸ್ಕೊ ಸಾಧಿಸಲು ಹೊರಟಿರುವ ಗುರಿ ಹಲವು ಹಾಗೂ ನಾಜಿಮುಕ್ತ, ನಿಶ್ಶಸ್ತ್ರೀಕರಣ ಮತ್ತು ತಟಸ್ಥ ನಿಲುವಿನ ದೇಶವಾಗಿ ಉಕ್ರೇನ್ ದೇಶವನ್ನ ಮಾರ್ಪಾಡು ಮಾಡುವುದು ನಮ್ಮ ಉದ್ದೇಶ. ಉಕ್ರೇನ್‌ ನ್ಯಾಟೋ ಸೇರಬಾರದು' ಎನ್ನುತ್ತಾ ಪುಟಿನ್ ಮಹತ್ವದ ಹೇಳಿಕೆ ನೀಡಿದ್ದಾರೆ.

 Discover How Russian President Putin Warned Ukraine Again

ಅಲ್ಲಿ ಝೆಲೆನ್ಸ್ಕಿ & ಇಲ್ಲಿ ಪುಟಿನ್!

ಈ ಮೂಲಕ ಅಮೆರಿಕ ಸೇರಿದಂತೆ ತಮ್ಮ ವಿರೋಧಿ ದೇಶಗಳಿಗೆ ಪುಟಿನ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅಲ್ಲದೆ ತಮ್ಮ ಶತ್ರು ದೇಶ ಉಕ್ರೇನ್ ವಿರುದ್ಧ ಮತ್ತಷ್ಟು ಗಂಭೀರ ದಾಳಿಗೆ ರಷ್ಯಾ ಸಜ್ಜಾಗಿದೆ ಎಂಬುವ ಸೂಕ್ಷ್ಮ ಸೂಚನೆ ಕೂಡ ಇಲ್ಲಿ ಸಿಕ್ಕಿದೆ. ಪದೇ ಪದೆ ಅಮೆರಿಕದ ನಾಯಕರು ತಮ್ಮ ವಿರುದ್ಧ ಮಾತನಾಡುತ್ತಿದ್ದಾರೆ ಅನ್ನೋದು ರಷ್ಯಾ ಕೋಪಕ್ಕೆಲ್ಲ ಕಾರಣ ಅನ್ನೋ ಆರೋಪ ಇದೆ. ಇದರ ಜೊತೆಗೆ ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿ ಅಮೆರಿಕದ ನೆಲಕ್ಕೆ ತಲುಪಿದ ಸಮಯದಲ್ಲೇ ಈ ಬೆಳವಣಿಗೆ ನಡೆದಿದೆ.

ಒಟ್ನಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಇಂತಹ ಸಮಯದಲ್ಲೇ ಮತ್ತೊಂದು ಸ್ಫೋಟಕ ಹೇಳಿಕೆ ಹೊರಬಿದ್ದಿದೆ. ರಷ್ಯಾ ಅಧ್ಯಕ್ಷರು ನೀಡಿರುವ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ. ಪುಟಿನ್ ಮತ್ತೊಮ್ಮೆ ತಮ್ಮ ಶತ್ರುಪಡೆಯ ವಿರುದ್ಧ ಗುಡುಗಿದ್ದು, ಉಕ್ರೇನ್ ವಿರುದ್ಧ ಕಾರ್ಯಾಚರಣೆ ಮುಂದುವರಿಯೋದು ಗ್ಯಾರಂಟಿ ಅನ್ನೋದನ್ನ ಒತ್ತಿ ಒತ್ತಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+