ಖಲಿಸ್ತಾನಿಗಳ ಕಿರಿಕ್.. ಭಾರತದ ಹೊರಗೆ ಮುಂದುವರಿದ ಕಿರಿಕಿರಿ!
ಭಾರತದ ವಿರುದ್ಧ ನಿಂತಿರುವ, ಖಲಿಸ್ತಾನಿ ಬೆಂಬಲಿಗರಿಗೆ ಬುದ್ಧಿ ಬರುವ ಲಕ್ಷಣ ಕಾಣ್ತಿಲ್ಲ. ಇದೇ ಕಾರಣಕ್ಕೆ ಪದೇ ಪದೆ ಭಾರತ ವಿರೋಧಿ ನಿಲುವನ್ನ ತೋರಿಸುತ್ತಿದ್ದಾರೆ ಖಲಿಸ್ತಾನಿಗಳ ಬೆಂಬಲಿಗರು. ಇದೀಗ ಮತ್ತೊಮ್ಮೆ ಇಂತಹದ್ದೇ ಘಟನೆ ನಡೆದಿದ್ದು, ಖಲಿಸ್ತಾನಿಗಳ ವರ್ತನೆ ಬಗ್ಗೆ ಜಗತ್ತಿನಾದ್ಯಂತ ಆಕ್ರೋಶ ಮೊಳಗಿದೆ. ಹಾಗಾದರೆ ಆಗಿದ್ದೇನು? ಖಲಿಸ್ತಾನಿಗಳು ಇದೀಗ ಭಾರತದ ವಿರುದ್ಧ ಕಿರಿಕ್ ಮಾಡಿದ್ದು ಎಲ್ಲಿ?
ಅಷ್ಟಕ್ಕೂ ಇಂದು ಗುರುನಾನಕ್ ಜಯಂತಿ. ಹೀಗಾಗಿ ಪ್ರಾರ್ಥನೆ ಸಲ್ಲಿಸೋಕೆ ನ್ಯೂಯಾರ್ಕ್‌ನ ಗುರುದ್ವಾರಕ್ಕೆ ತೆರಳಿದ್ದ ಅಮೆರಿಕದಲ್ಲಿ ಭಾರತದ ರಾಯಭಾರಿಯಾದ ತರಂಜಿತ್ ಸಿಂಗ್ ಸಂಧು ಅವರಿಗೆ ಖಾಲಿಸ್ತಾನಿ ಬೆಂಬಲಿಗರ ಗುಂಪು ಅಡ್ಡಿ ಮಾಡಿದೆ ಅಂತ ಆರೋಪ ಕೇಳಿಬಂದಿದೆ. ಹೀಗೆ ಮತ್ತೊಮ್ಮೆ ಖಾಲಿಸ್ತಾನ ಬೆಂಬಲಿಗರು ಭಾರತದ ಜೊತೆಗೆ ಕಿರಿಕ್‌ಗೆ ಸಿದ್ಧವಾಗಿದ್ದಾರೆ. ಹಿಕ್ಸ್‌ವಿಲ್ಲೆ ಭಾಗದಲ್ಲಿರುವ ಗುರುದ್ವಾರದಲ್ಲಿ ಈ ಘಟನೆ ನಡೆದಿದ್ದು ಖಲಿಸ್ತಾನಿಗಳ ವರ್ತನೆಗೆ ಆಕ್ರೋಶವು ವ್ಯಕ್ತವಾಗಿದೆ. ಘಟನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಖಲಿಸ್ತಾನಿಗಳ ಕಿರಿಕ್ ಶುರುವಾಗಿದ್ದೇಗೆ?
ಅಂದಹಾಗೆ ತರಂಜಿತ್ ಸಿಂಗ್ ಸಂಧು ಅವ್ರು ಗುರುದ್ವಾರಕ್ಕೆ ಭೇಟಿ ನೀಡಿದ್ದಾಗ ತಕ್ಷಣವೇ ಅಡ್ಡಿ ಮಾಡಿದ್ದಾರೆ ಖಲಿಸ್ತಾನಿ ಬೆಂಬಲಿಗರು. ಹಾಗೇ ಇದೇ ವೇಳೆ ಖಲಿಸ್ತಾನಿ ಮುಖಂಡ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಹಿಗೆ ನೋಡ ನೋಡುತ್ತಿದ್ದಂತೆ ಪರಿಸ್ಥಿತಿ ಕೂಡ ಕೈಮೀರಿ ಹೊಗಿದೆ. ತಕ್ಷಣವೇ ತರಂಜಿತ್ ಸಿಂಗ್ ಸಂಧು ಅವರು, ಸಿಖ್ ಸಮುದಾಯದ ಕೆಲ ಮುಖಂಡರ ಬೆಂಗಾವಲಿನಲ್ಲಿ ಅಲ್ಲಿಂದ ಹೊರಟಿದ್ದಾರೆ. ಹಾಗೇ ಈ ಘಟನೆ ಬಗ್ಗೆ ತರಂಜಿತ್ ಸಿಂಗ್ ಸಂಧು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಭಾರತವು ಸಿಖ್ ಸಮುದಾಯಕ್ಕೆ...
ಖಲಿಸ್ತಾನಿ ಕಿರಿಕಿರಿ ಕಾರಣಕ್ಕೆ ಈಗಾಗಲೇ ಭಾರತ & ಕೆನಡಾ ಸಂಬಂಧ ಹಾಳಾಗಿ ಹೋಗಿದ್ದು ಇಷ್ಟಾದ್ರೂ ಖಲಿಸ್ತಾನಿಗಳು ಸುಮ್ಮನಾಗಿಲ್ಲ. ಹೀಗೆ ಈಗ ಅಮೆರಿಕದಲ್ಲಿ ಕೂಡ ಖಲಿಸ್ತಾನಿಗಳ ಕಿತ್ತಾಟ ಜೋರಾಗಿದೆ. ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವ್ರು ಘಟನೆ ಬಳಿಕ ಮಾತನಾಡಿ ಅಮೆರಿಕದಲ್ಲಿ ನೆಲೆಸಿರುವ ಸಿಖ್ ಸಮುದಾಯಕ್ಕೆ ಭಾರತದ ರಾಯಭಾರಿಗಳು ಎಲ್ಲ ರೀತಿ ನೆರವು ಒದಗಿಸುತ್ತಿದ್ದಾರೆ ಎಂದಿದ್ದಾರೆ. ಇದು ಪರೋಕ್ಷವಾಗಿ ಖಲಿಸ್ತಾನಿಗಳಿಗೆ ಕುಟುಕಿದ ರೀತಿ ಇದೆ.
Privileged to join the local Sangat, including from Afghanistan, at Guru Nanak Darbar of Long Island in celebrating Gurpurab- listened to Kirtan, spoke about Guru Nanak’s everlasting message of togetherness, unity, & equality, partook langar, and sought blessings for all. pic.twitter.com/i45M2TuSdf
— Taranjit Singh Sandhu (@SandhuTaranjitS) November 27, 2023
ಕಿರಿಕ್ ಶುರುವಾಗಿದ್ದು ಹೇಗೆ ಗೊತ್ತಾ?
ಭಾರತದ ಮೋಸ್ಟ್ ವಾಟೆಂಡ್ ಉಗ್ರ & ಖಲಿಸ್ತಾನಿ ಗ್ಯಾಂಗ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನ ಈ ವರ್ಷದ ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಿದ್ರು. ಹಿಂಸಾಚಾರ & ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಹೀಗೆ ಕೊಲೆಯಾಗಿದ್ದ ನಿಜ್ಜರ್ ವಿರುದ್ಧ ಇತ್ತು. ಆದರೆ ಈ ಕೊಲೆಯನ್ನು ಭಾರತದ ಏಜೆಂಟ್‌ಗಳು ಮಾಡಿದ್ದಾರೆ ಎನ್ನುತ್ತಿದ್ದಾರೆ ಕೆನಡಾ ಪ್ರಧಾನಿ. ಸೂಕ್ತ ಸಾಕ್ಷ್ಯವೇ ಇಲ್ಲದೆ ಇಂಥ ಆರೋಪ ಸರಿಯಲ್ಲ ಎಂದು ಭಾರತ ಕೂಡ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿತ್ತು. ಕೆನಡಾ & ಭಾರತ ಸಂಬಂಧ ಈಗಾಗಲೇ ಹಳಸಿದ ಸಮಯದಲ್ಲೇ ಖಲಿಸ್ತಾನಿಗಳು ಮತ್ತಷ್ಟು ಕಿರಿಕ್ ಮಾಡ್ತಿದ್ದಾರೆ.
ಒಟ್ನಲ್ಲಿ ಎಷ್ಟೇ ಬುದ್ಧಿ ಹೇಳಿದ್ರೂ ಖಲಿಸ್ತಾನಿಗಳಿಗೆ ಬುದ್ಧಿ ಬರುವ ಲಕ್ಷಣ ಕಾಣುತ್ತಿಲ್ಲ. ಈ ಕಾರಣಕ್ಕೆ ಭಾರತ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅದ್ರಲ್ಲೂ ಭಾರತದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡಲು ಬರುವ ದೇಶಗಳಿಗೆ ಸರಿಯಾಗೇ ಉತ್ತರ ಕೊಡುತ್ತಿದೆ. ಇಷ್ಟಾದ್ರೂ ಕೆಲ ದೇಶಗಳು ಮಾತ್ರ ಬದಲಾಗುತ್ತಿಲ್ಲ. ಅದರಲ್ಲೂ ಕೆನಡಾ ಸೇರಿದಂತೆ ಕೆಲವು ದೇಶಗಳು ಇದೇ ವಿಚಾರವಾಗಿ ಕಿರಿಕ್ ಮಾಡಲು ಬಂದು ಸಂಬಂಧವನ್ನೂ ಹಾಳು ಮಾಡಿಕೊಳ್ಳುತ್ತಿವೆ ಅಂತ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಅಂತಾ ಈಗ ಕಾದು ನೋಡಬೇಕಿದೆ. ಅಲ್ಲಿಯವರೆಗೆ ಖಲಿಸ್ತಾನಿಗಳ ಇಂತಹ ವರ್ತನೆ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ.












Click it and Unblock the Notifications