Israel War: ಇಬ್ಬರು ಹಮಾಸ್ ಕಮಾಂಡರ್ ಜೀವ ತೆಗೆದ ಇಸ್ರೇಲ್?

ಇಸ್ರೇಲ್ & ಹಮಾಸ್ ನಡುವಿನ ಯುದ್ಧ ಘನಘೋರ ಪರಿಸ್ಥಿತಿ ತಲುಪಿದ್ದು, ಒಬ್ಬರ ಮೇಲೆ ಮತ್ತೊಬ್ಬರು ಮಾರಣಾಂತಿಕ ದಾಳಿ ನಡೆಸುತ್ತಿದ್ದಾರೆ. ಇದೇ ರೀತಿ ಇಸ್ರೇಲ್ ನಡೆಸಿದ ದಾಳಿ ವೇಳೆ ಹಮಾಸ್‌ನ ಇಬ್ಬರು ಕಮಾಂಡರ್‌ ಜೀವ ಹೋಗಿದೆಯಂತೆ. ಈ ಬಗ್ಗೆ ವರದಿ ಪ್ರಸಾರ ಆಗುತ್ತಿದ್ದಂತೆ ಸ್ಥಿತಿ ಮತ್ತಷ್ಟು ಸೂಕ್ಷ್ಮಗೊಂಡಿದ್ದು, ಎರಡೂ ಕಡೆ ದಾಳಿ ಮತ್ತು ಪ್ರತಿದಾಳಿ ತೀವ್ರಗೊಂಡಿದೆ.

ತನ್ನ ಮೇಲೆ ದಾಳಿ ನಡೆಸಿದ ಹಮಾಸ್ ವಿರುದ್ಧ ಇಸ್ರೇಲ್ ವಾರದ ಹಿಂದೆ ಪ್ರತಿದಾಳಿಯನ್ನ ಆರಂಭಿಸಿತ್ತು. ಹೀಗೆ ಹಮಾಸ್ ಮತ್ತು ಇಸ್ರೇಲ್ ಮಧ್ಯೆ ವಾರ್ ಶುರುವಾಗಿ ಇಂದಿಗೆ ಸರಿಯಾಗಿ ಒಂದು ವಾರ ಕಳೆದಿದೆ. ಇದೇ ವೇಳೆ ಇಸ್ರೇಲ್ ಕಡೆ 1300 ಕ್ಕೂ ಹೆಚ್ಚು ಜನ & ಪ್ಯಾಲೆಸ್ತೀನ್ ಕಡೆ 1800 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ವಾಯುದಾಳಿ ಜೊತೆ ಇಸ್ರೇಲ್ ಗಾಜಾಪಟ್ಟಿ ಮೇಲೆ ಭೂಸೇನೆಯನ್ನೂ ನುಗ್ಗಿಸುತ್ತಿದೆ. ಇದೇ ರೀತಿ ದಾಳಿ ನಡೆಸಿದಾಗ ಇಸ್ರೇಲ್ ಕೊಟ್ಟ ಏಟಿಗೆ ಹಮಾಸ್‌ನ ಇಬ್ಬರು ಕಮಾಂಡರ್‌ ಹತ್ಯೆಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇಸ್ರೇಲ್‌ ರಕ್ಷಣಾ ಪಡೆ (ಐಡಿಎಫ್‌) ಮಾಹಿತಿ ನೀಡಿದೆ.

israel-continues-operation

ಹಮಾಸ್ ಕಮಾಂಡರ್ ಹತ್ಯೆಯಾಗಿದ್ದು ಹೇಗೆ?

ಇಸ್ರೇಲ್ ತನ್ನ ಶತ್ರು ಹಮಾಸ್ ಪಡೆಗಳನ್ನ ಸರ್ವನಾಶ ಮಾಡಲು ತೊಡೆತಟ್ಟಿ ನಿಂತಿದ್ದು, ಇದೇ ಕಾರಣಕ್ಕೆ ತನ್ನ ಉಗ್ರಾಣದಲ್ಲಿ ಇಟ್ಟಿರುವ ಎಲ್ಲಾ ಹತ್ಯಾರಗಳನ್ನು ಹೊರ ತೆಗೆದಿದೆ. ಹೀಗಾಗಿ ಯುದ್ಧ ಮತ್ತಷ್ಟು ಭೀಕರವಾಗಿದೆ. ಅಲ್ಲದೆ ಅಮೆರಿಕ ಕೂಡ ಮತ್ತಷ್ಟು ಅಸ್ತ್ರಗಳ ಬಂಡಾರವನ್ನೇ ನೀಡುತ್ತಿದೆ. ಇದೇ ರೀತಿ ನಡೆದ ಡ್ರೋನ್‌ ದಾಳಿಯಲ್ಲಿ ನುಖ್ಬಾ ಕಮಾಂಡೊ ಘಟಕದ ಕಂಪನಿ ಕಮಾಂಡರ್‌ ಅಲಿ ಕ್ವಾದಿ ಜೀವ ಬಿಟ್ಟಿದ್ದು ಗೊತ್ತಾಗಿದೆ. 2005ರಲ್ಲಿಇಸ್ರೇಲ್‌ ಅಲಿ ಕ್ವಾದಿಯನ್ನ ಬಂಧಿಸಿ, 2011ರಲ್ಲಿ ಗಾಜಾ ಪಟ್ಟಿಗೆ ಗಡಿಪಾರು ಮಾಡಿತ್ತು.

ಓಡಿ ಹೋಗುತ್ತಿರುವ ಪ್ರಜೆಗಳು

ಅಲಿ ಕ್ವಾದಿ ಜೊತೆಯಲ್ಲಿ ನಿನ್ನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ನ ವೈಮಾನಿಕ ಕಾರ್ಯಾಚರಣೆ ವಿಭಾಗ ಮುಖ್ಯಸ್ಥ ಮುರಾದ್‌ ಅಲ್‌ ಮುರಾದ್‌ ಕೂಡ ಮೃತಪಟ್ಟಿರುವ ಬಗ್ಗೆ ತಿಳಿದುಬಂದಿದೆ. ಈಗ ಇಡೀ ಗಾಜಾಪಟ್ಟಿ ನಗರವನ್ನೇ ಸರ್ವನಾಶ ಮಾಡುತ್ತಿದೆ ಇಸ್ರೇಲ್ ಸೇನೆ. ಇದೇ ಸಮಯದಲ್ಲಿ ಗಾಜಾಪಟ್ಟಿ ಜನರಿಗೆ ಊರು ಬಿಟ್ಟು ಹೋಗಿ ಅಂತಾ ಇಸ್ರೇಲ್ ಸೇನೆ ಖಡಕ್ ಎಚ್ಚರಿಕೆ ನೀಡಿದೆ. ಈಗಾಗಲೇ ಸಾವಿರಾರು ಅಮಾಯಕರು ಬಲಿಯಾದ ಹಿನ್ನೆಲೆ ಜನರು ತಮ್ಮ ಮತ್ತು ತಮ್ಮ ಕುಟುಂಬದ ಜೀವ ಉಳಿಸಿಕೊಳ್ಳಲು ಗಾಜಾಪಟ್ಟಿ ಬಿಟ್ಟು ಹೋಗುತ್ತಿದ್ದಾರೆ. ಇದೇ ಸಮಯದಲ್ಲಿ ಹಮಾಸ್ ಕಮಾಂಡರ್‌ಗಳನ್ನ ಇಸ್ರೇಲ್ ಬಲಿ ಹಾಕುತ್ತಿದೆ.

israel-continues-operation

5000ಕ್ಕೂ ಹೆಚ್ಚು ರಾಕೆಟ್‌ ಅಟ್ಯಾಕ್

ಉಗ್ರರು & ಬಡತನ ನಡುವೆ ನರಳುತ್ತಿದ್ದ ಗಾಜಾಪಟ್ಟಿ ಸಾಮಾನ್ಯ ಜನ ಈಗ ಇಸ್ರೇಲ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಾಲು ಸಾಲು ದಾಳಿ ನಂತರ ಸಾವಿರಾರು ಜನ ಮೃತಪಟ್ಟಿದ್ದು ಪುಟ್ಟಪುಟ್ಟ ಮಕ್ಕಳು ಕೂಡ ಗಾಯಗೊಂಡು ಗಾಜಾಪಟ್ಟಿಯ ಬೀದಿಗಳಲ್ಲಿ ನರಳುತ್ತಿದ್ದಾರೆ. ಕಳೆದ ಶನಿವಾರ ಹಮಾಸ್, ಇಸ್ರೇಲ್‌ ಮೇಲೆ ಒಂದೇ ಬಾರಿ 5000ಕ್ಕೂ ಹೆಚ್ಚು ರಾಕೆಟ್‌ ಉಡಾಯಿಸಿತ್ತು. ಜೊತೆಗೆ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ & ಬಾಂಬ್‌ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ದರು. ರೊಚ್ಚಿಗೆದ್ದ ಇಸ್ರೇಲ್ ಕೂಡ ಹಮಾಸ್ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಇಬ್ಬರ ಮಧ್ಯೆ ರಣಕಾಳಗ ನಡೆಯುತ್ತಿದ್ದು, ಸಾವಿರಾರು ಜನ ಬಲಿಯಾಗಿದ್ದಾರೆ.

ಹೀಗೆ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ನಡೆದು, ಗಾಜಾಪಟ್ಟಿ ಧೂಳ್ ಧೂಳ್ ಆಗಿದೆ. ಅದ್ರಲ್ಲೂ ಇಸ್ರೇಲ್ ಹಾಕುತ್ತಿರುವ ಭೀಕರ ಬಾಂಬ್‌ಗಳ ಅಬ್ಬರಕ್ಕೆ ಸಂಪೂರ್ಣವಾಗಿ ಗಾಜಾಪಟ್ಟಿಯ ಕಟ್ಟಡಗಳು ನೆಲಕ್ಕೆ ಉರುಳುತ್ತಿವೆ. ಹೀಗಾಗಿ ಜನರು ಎಲ್ಲವನ್ನೂ ಬಿಟ್ಟು, ಬೇರೆ ಊರುಗಳಿಗೆ ವಲಸೆ ಹೊರಟಿದ್ದಾರೆ. ಇತ್ತ ಇಸ್ರೇಲ್ ತನ್ನ ಭೂಸೇನೆ ಮೂಲಕ ಗಾಜಾ ಮೇಲೆ ದಾಳಿ ಮಾಡಲು ಮುನ್ನುಗ್ಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+