ಟ್ರಂಪ್ ಬಚಾವ್, ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮೊದಲು ಬಿಗ್ ರಿಲೀಫ್!

ಅಮೆರಿಕ ಮಾಜಿ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ. 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಡೊನಾಲ್ಡ್ ಟ್ರಂಪ್ ಸಾಲು ಸಾಲು ವಿವಾದ ತಲೆ ಮೇಲೆ ಹೊತ್ತು ಕೊಂಡಿದ್ದರು. ಅದ್ರಲ್ಲೂ ಇಡೀ ಅಮೆರಿಕ ಇತಿಹಾಸದಲ್ಲೇ ಡೊನಾಲ್ಡ್ ಟ್ರಂಪ್ ಅತ್ಯಂತ ವಿವಾದಾತ್ಮಕ ಅಧ್ಯಕ್ಷ ಎನಿಸಿಕೊಂಡರು. ಈ ರೀತಿ ಡೊನಾಲ್ಡ್ ಟ್ರಂಪ್ ವಿರುದ್ಧ ಕೇಳಿಬಂದ ಆರೋಪ ಒಂದಾ? ಎರಡಾ? ಅದೇ ರೀತಿ ಲೈಂಗಿಕ ಆರೋಪಗಳು ಕೂಡ ಟ್ರಂಪ್ ವಿರುದ್ಧ ಕೇಳಿಬಂದಿತ್ತು. ಹೀಗಿದ್ದಾಗ ದಿಢೀರ್ ಟ್ರಂಪ್‌ಗೆ ಬಿಗ್ ರಿಲೀಫ್ ಸಿಕ್ಕಿದೆ!

ಆಡು ಮುಟ್ಟದ ಸೊಪ್ಪು ಇಲ್ಲ ಎಂಬ ಮಾತಿನಂತೆ, ಡೊನಾಲ್ಡ್ ಟ್ರಂಪ್ ಮಾಡಿಕೊಳ್ಳದಿರುವ ವಿವಾದಗಳೇ ಇಲ್ಲ. ಯಾಕಂದ್ರೆ ಈ ಮನುಷ್ಯ ಅಮೆರಿಕದ ಇತಿಹಾಸದಲ್ಲಿ ವಿವಾದಗಳಿಂದಲೇ ಅಜರಾಮರ ಎಂಬಂತೆ ಆಗಿದ್ದಾರೆ. ಅಮೆರಿಕದ ಅಧ್ಯಕ್ಷನಾಗಿ ಅಧಿಕಾರದಲ್ಲಿ ಇದ್ದಾಗ ಕೂಡ ಡೊನಾಲ್ಡ್ ಟ್ರಂಪ್ ವಿವಾದಗಳ ಮೂಲಕವೇ ಸದ್ದು ಮಾಡಿ ಸುದ್ದಿಯಾಗಿದ್ದರು. ಈಗ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಡೊನಾಲ್ಡ್ ಟ್ರಂಪ್ ವಿರುದ್ಧ ಲೈಂಗಿಕ ಪ್ರಕರಣಗಳು ಗಂಭೀರ ಸ್ವರೂಪ ಪಡೆದಿದ್ದವು. ಹೀಗಿದ್ದಾಗ ಡೊನಾಲ್ಡ್ ಟ್ರಂಪ್‌ಗೆ ನೆಮ್ಮದಿ ನೀಡುವ ಸುದ್ದಿ ಇದೀಗ ಅಮೆರಿಕದ ಕೋರ್ಟ್ ಕಡೆಯಿಂದ ಬಂದಿದೆ!

Discover How Donald Trump Got Big Relief Over Hush Money Case

ಅಮೆರಿಕದ ಮಾಜಿ ಅಧ್ಯಕ್ಷರು ನಿರಾಳ!

ಟ್ರಂಪ್ ಮಾಡಿದ ತಪ್ಪುಗಳು ಇದೀಗ ಅವರ ಬೆನ್ನುಹತ್ತಿ ಕಾಡುತ್ತಿದ್ದು, ಏನು ಮಾಡಬೇಕು? ಎಂಬ ಪರದಾಟದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಇದ್ದಾರೆ. ಯಾಕಂದ್ರೆ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಟ್ರಂಪ್ ತಯಾರಿ ನಡೆಸಿದ್ದಾರೆ. ಟ್ರಂಪ್ ಇದೇ ಸಮಯದಲ್ಲಿ ಒಂದು ಸಮಸ್ಯೆಗೆ ಸಿಲುಕಿ, ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣದಲ್ಲಿ ಪರದಾಡುತ್ತಿದ್ದಾರೆ. ಹೀಗಿದ್ದಾಗ ಜೈಲಿಗೆ ಕೂಡ ಹೋಗಬೇಕಾದ ಪರಿಸ್ಥಿತಿಯು ನಿರ್ಮಾಣ ಆಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇಷ್ಟೆಲ್ಲದರ ನಡುವೆ ಇದೀಗ ಟ್ರಂಪ್ ನಿರಾಳರಾಗಿದ್ದಾರೆ.

ಚುನಾವಣೆ ನಂತರ ಮತ್ತೆ ಸಮಸ್ಯೆ?

ಡೊನಾಲ್ಡ್ ಟ್ರಂಪ್ ವಿರುದ್ಧದ ಪ್ರಕರಣದ ತೀರ್ಪು ನೀಡುವುದನ್ನು ನವೆಂಬರ್ ಚುನಾವಣೆ ಬಳಿಕ ಇಟ್ಟುಕೊಳ್ಳುತ್ತೇವೆ, ಅಲ್ಲಿಯ ತನಕ ಈ ಕೇಸ್‌ನಲ್ಲಿ ಯಾವುದೇ ರೀತಿ ನಿರ್ಧಾರವನ್ನ ನಾವು ತೆಗೆದುಕೊಳ್ಳುವುದಿಲ್ಲ ಎಂದು ಇದೀಗ ಅಮೆರಿಕ ಮ್ಯಾನ್‌ಹಟನ್ ಕೋರ್ಟ್ ತಿಳಿಸಿದೆ. ಇದು ಡೊನಾಲ್ಡ್ ಟ್ರಂಪ್ ಅವರಿಗೆ ದೊಡ್ಡ ರಿಲೀಫ್ ನೀಡಿದಂತೆ ಆಗಿದ್ದು, ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ 2ನೇ ಬಾರಿಗೆ ಆಯ್ಕೆ ಆಗಬೇಕು ಎಂಬ ಕಾತುರದಲ್ಲಿ ಇದ್ದ ಡೊನಾಲ್ಡ್ ಟ್ರಂಪ್ ಈ ಮೂಲಕ ಸಿಹಿಸುದ್ದಿ ಪಡೆದಿದ್ದಾರೆ. ಮತ್ತೊಂದು ಕಡೆ 2024ರ ನವೆಂಬರ್ ಚುನಾವಣೆ ಬಳಿಕ ಡೊನಾಲ್ಡ್ ಟ್ರಂಪ್‌ಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೂಡ ಈಗ ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+