ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರ ಎಚ್ಚರ... ಕೊರೊನಾ ಬಗ್ಗೆ ಉಡಾಫೆ ಮಾಡುವ ಯುವ ಜನರೇ ಇಲ್ನೋಡಿ

|
Google Oneindia Kannada News

ಇಡೀ ಜಗತ್ತಿಗೆ ಕೊರೊನಾ ಕಂಟಕ ಕಾಡುತ್ತಿದೆ. ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟುವ ವಿಚಾರದಲ್ಲಿ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ. ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಾಮಾಜಿಕ ಕಳಕಳಿಯನ್ನು ಮಾಧ್ಯಮ ಮತ್ತು ಸರ್ಕಾರಗಳು ನಾನಾ ವಿಧಗಳಲ್ಲಿ ಪ್ರದರ್ಶಿಸುತ್ತಿವೆ. ಆದರೆ, ರೋಗ ಹರಡುವ ವಿಚಾರದಲ್ಲಿ ಅನಗತ್ಯ ಭಯವನ್ನು ಹುಟ್ಟುಹಾಕಲಾಗುತ್ತಿದೆ ಎನ್ನುವ ವಾದ ಭಾರತ ಸೇರಿದಂತೆ ಇತರ ರಾಷ್ಟ್ರಗಳಲ್ಲೂ ಕೇಳಿಬರುತ್ತಿದೆ.

Recommended Video

Simple formulas to prevent corona | PC Raghu | Beatcorona | Oneindia kannada

ಕೆಲ ಯುವಜನರಂತೂ ಕೊರೊನಾ ವೈರಸ್ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ರೋಗಗ್ರಸ್ಥ ವಲಯದಲ್ಲಿ ಓಡಾಡಿದ್ದರೂ, ಕೆಲವರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಉಡಾಫೆ ತೋರುತ್ತಿದ್ದಾರೆ. ಪರಿಣಾಮವಾಗಿ ಕೊರೊನಾ ಸೋಂಕು ಸಾಂಕ್ರಾಮಿಕವಾಗಿ ಹರಡಲು ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ.

ಸೋಂಕು ಹರಡುವ ಕುರಿತು ಭಯಾನಕ ಸತ್ಯ ಹೊರಹಾಕಿದ ಕೊರೊನಾ ಪೀಡಿತ ಮಹಿಳೆ!ಸೋಂಕು ಹರಡುವ ಕುರಿತು ಭಯಾನಕ ಸತ್ಯ ಹೊರಹಾಕಿದ ಕೊರೊನಾ ಪೀಡಿತ ಮಹಿಳೆ!

ಇಂತಹ ಹೊಣೆಗೇಡಿ ಯುವಜನರಿಗೆ ಖುದ್ದು ರೋಗಗ್ರಸ್ಥ ಓರ್ವ ಯುವತಿ ವಿಡಿಯೋ ಮೂಲಕ ಸಂದೇಶ ನೀಡಿದ್ದಾಳೆ. ಕೊರೊನಾ ರೋಗ ತೀವ್ರತೆ ಹೇಗಿರುತ್ತದೆ ಎಂಬುದನ್ನು ವಿಡಿಯೋ ಮೂಲಕ ಯುವತಿ ವಿವರಿಸಿದ್ದು, ಅದು ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಯುವತಿ ಹೇಳಿರುವುದೇನು.?

''ಕೊರೊನಾ ರೋಗ ವಿಚಾರವನ್ನು ಹಗುರವಾಗಿ ತೆಗೆದುಕೊಳ್ಳುವವರು ಒಮ್ಮೆ ನನ್ನನ್ನು ನೋಡಿ. ನಾನು ಐಸಿಯು ನಲ್ಲಿದ್ದೇನೆ. ಡೈರೆಕ್ಟ್ ಆಕ್ಸಿಜನ್ ಪೈಪ್ ಇಲ್ಲದೆ ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ. ಆದರೂ, ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಕೊಂಚ ನಿರಾಳಳಾಗಿದ್ದೇನೆ. ಈಗಲೂ ಶ್ವಾಸಕೋಶದಲ್ಲಿನ ಸಮಸ್ಯೆ ಬಾಧಿಸುತ್ತಿದೆ. ಆ ನೋವನ್ನು ಹೇಳತೀರದು. ಪ್ಲೀಸ್ ಯಾರೂ ಚಾನ್ಸ್ ತೆಗೆದುಕೊಳ್ಳಬೇಡಿ. ಒಂದು ವೇಳೆ ಉಡಾಫೆ ತೋರಿದರೆ, ನಿಮಗೂ ನನ್ನ ಸ್ಥಿತಿ ಬಂದೀತು.. ಜೋಕೆ'' ಎಂದು ವಿಡಿಯೋದಲ್ಲಿ ಆಕೆ ಹೇಳಿಕೊಂಡಿದ್ದಾಳೆ.

ಜಾಗೃತಿ ಮೂಡಿಸಿದ ಅಮೇರಿಕಾದ ನಟ

ಜಾಗೃತಿ ಮೂಡಿಸಿದ ಅಮೇರಿಕಾದ ನಟ

ಯುವತಿಯ ಕಳಕಳಿಯ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಅಮೇರಿಕಾದ ನಟ ಡೇನಿಯಲ್ ನ್ಯೂಮ್ಯಾನ್ ಹಂಚಿಕೊಂಡು ಯುವಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ನಿಟ್ಟುಸಿರು ಬಿಡಿ: ಇದೇ ಮೊದಲ ಬಾರಿಗೆ ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣ ಇಲ್ಲ!ನಿಟ್ಟುಸಿರು ಬಿಡಿ: ಇದೇ ಮೊದಲ ಬಾರಿಗೆ ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣ ಇಲ್ಲ!

ಡೇನಿಯೆಲ್ ನ್ಯೂಮ್ಯಾನ್ ಹೇಳುವುದೇನು.?

ಡೇನಿಯೆಲ್ ನ್ಯೂಮ್ಯಾನ್ ಹೇಳುವುದೇನು.?

ಆ ವಿಡಿಯೋ ನ ಹಂಚಿಕೊಂಡಿರುವ ಹಾಲಿವುಡ್ ನಟ ಡೇನಿಯೆಲ್ ನ್ಯೂಮ್ಯಾನ್, ''ಯುವ ಜನರೇ.. ನೀವು ಸುರಕ್ಷತಾ ನಿಯಮಗಳನ್ನು ಪಾಲಿಸಿ ಎನ್ನುವುದು ಇದಕ್ಕೆ. ಪೋಷಕರು ಮಾತ್ರ ಅಲ್ಲ, ನೀವೂ ಕೂಡ ಕಾಳಜಿ ವಹಿಸಿ. ಮನೆಯಲ್ಲಿರಿ, ಕೈ ತೊಳೆದುಕೊಳ್ಳಿ, ನೀವು ಮತ್ತು ನಿಮ್ಮ ಕುಟುಂಬ ಸುರಕ್ಷಿತವಾಗಿರಿ'' ಎಂದು ಬರೆದುಕೊಂಡಿದ್ದಾರೆ.

ಕೊರೊನಾ ಅಂಕಿ-ಅಂಶ

ಕೊರೊನಾ ಅಂಕಿ-ಅಂಶ

ವಿಶ್ವದಾದ್ಯಂತ ಇಲ್ಲಿಯವರೆಗೂ 226,504 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 9285 ಮಂದಿ ಸಾವನ್ನಪ್ಪಿದ್ದಾರೆ. 85,955 ಮಂದಿ ಗುಣಮುಖರಾಗಿದ್ದಾರೆ. 6,896 ಮಂದಿಯ ಆರೋಗ್ಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ.

ಕೊರೊನಾ ಹೊಡೆತಕ್ಕೆ ಇಟಲಿ ಜರ್ಜರಿತ: ಒಂದೇ ದಿನ 475 ಸಾವು!ಕೊರೊನಾ ಹೊಡೆತಕ್ಕೆ ಇಟಲಿ ಜರ್ಜರಿತ: ಒಂದೇ ದಿನ 475 ಸಾವು!

English summary
American Actor Daniel Newman shares a video of a young girl with Coronavirus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X