Get Updates
Get notified of breaking news, exclusive insights, and must-see stories!

ಸಲಿಂಗಿಗಳ ಮದುವೆ ಸಕ್ರಮಗೊಳಿಸಿದ ಕ್ಯೂಬಾ; ಬೇರೆ ದೇಶಗಳಲ್ಲಿ ಹೇಗೆ ಸ್ಥಿತಿ?

ನವದೆಹಲಿ, ಸೆ. 27: ಅಮೆರಿಕದ ಬಳಿ ಇರುವ ಕ್ಯೂಬಾ ದೇಶದಲ್ಲಿ ಈಗ ಸಲಿಂಗಿಗಳ ಮದುವೆ ಕಾನೂನುಬದ್ಧಗೊಳ್ಳಲಿದೆ. ಈ ಸಂಬಂಧ ಜನಾಭಿಪ್ರಾಯ ಸಂಗ್ರಹದಲ್ಲಿ ಕ್ಯೂಬಾದ ಅತಿ ಹೆಚ್ಚು ಜನರು ಸಲಿಂಗಿ ಮದುವೆ ಸಕ್ರಮದ ಪರವಾಗಿ ಮತ ಚಲಾಯಿಸಿದ್ದಾರೆ. ಇದರೊಂದಿಗೆ ಸಲಿಂಗಿ ಮದುವೆ ಕಾನೂನುಬದ್ಧಗೊಳಿಸಿರುವ 33ನೇ ದೇಶ ಕ್ಯೂಬಾ ಆಗಿದೆ.

ಕ್ಯೂಬಾ ಸರಕಾರ ಹೊಸ ಕುಟುಂಬ ಸಂಹಿತೆಯನ್ನು ರಚಿಸಿದ್ದು, ಅದರಲ್ಲಿ ಸಲಿಂಗಿ ಮದುವೆಯ ಹೊಸ ವಿವರಣೆ ಮತ್ತು ಬಾಡಿಗೆ ತಾಯ್ತನಕ್ಕೆ ಅನುಮತಿ ಇತ್ಯಾದಿ ಸುಧಾರಣಾ ಕ್ರಮಗಳನ್ನು ಸೇರಿಸಲಾಗಿದೆ. ಕ್ಯೂಬಾದ ಜನರು ಈ ಸಂಹಿತೆ ಪರವಾಗಿ ಮತ ಹಾಕಿದ್ದಾರೆ. ಇದರೊಂದಿಗೆ ಸಲಿಂಗಿ ಮದುವೆ ಇನ್ಮುಂದೆ ಕ್ಯೂಬಾದಲ್ಲಿ ಸಿಂಧುವಾಗಲಿದೆ. ಜೊತೆಗೆ, ಬಾಡಿಗೆ ತಾಯ್ತನ ಕೂಡ ಕಾನೂನುಬದ್ಧವಾಗಲಿದೆ.

ಬೇರೊಬ್ಬ ಮಹಿಳೆಯ ಹೊಟ್ಟೆಯಲ್ಲಿ ಭ್ರೂಣ ಬೆಳೆಸಿ ಮಗು ಪಡೆಯುವುದು ಸರೋಗೆಸಿ ಅಥವಾ ಬಾಡಿಗೆ ತಾಯಿ ಕ್ರಮವಾಗಿದೆ. ಕ್ಯೂಬಾದಲ್ಲಿ ಬಾಡಿಗೆ ತಾಯಿಯ ಚಿಕಿತ್ಸಾ ವೆಚ್ಚ ಬಿಟ್ಟು ಬೇರೆ ಹಣದ ಬದಲಾವಣೆ ಆಗಬಾರದು ಎಂದು ನಿಯಮ ಮಾಡಲಾಗಿದೆ. ಅಂದರೆ ವಾಣಿಜ್ಯ ಉದ್ದೇಶದಿಂದ ಬಾಡಿಗೆ ತಾಯ್ತನಕ್ಕೆ ಅವಕಾಶ ಇಲ್ಲ.

ಭಾರತದಲ್ಲಿ ಏನಿದೆ ಕಾನೂನು?

ಭಾರತದಲ್ಲಿ ಸರೋಗಸಿ ಅಥವಾ ಬಾಡಿಗೆ ತಾಯಿ ಪದ್ಧತಿ ಕಾನೂನುಬದ್ಧವಾಗಿದೆ. ಆದರೆ, ಕ್ಯೂಬಾದಲ್ಲಿ ಜಾರಿಯಾದಂತೆ ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನಕ್ಕೆ ಅವಕಾಶ ಇಲ್ಲ. ಬಾಡಿಗೆ ತಾಯಿಯ ಹೊಟ್ಟೆಯಲ್ಲಿ ಭ್ರೂಣ ಬೆಳೆಸುವ ದಂಪತಿ ಕಾನೂನುಬದ್ಧವಾಗಿ ವಿವಾಹಿತವಾಗಿರಬೇಕು ಎಂಬ ನಿಯಯ ಇದೆ.

Cubans Vote For Same Sex Marriage; Know Which Countries Legalised It

ಇನ್ನು, ಸಲಿಂಗಿಗಳ ಮದುವೆ ವಿಚಾರದಲ್ಲಿ ಭಾರತದಲ್ಲಿ ಇನ್ನೂ ಮಾನ್ಯತೆ ಸಿಕ್ಕಿಲ್ಲ. ಆದರೆ ಸಲಿಂಗ ಕಾಮಕ್ಕೆ ಅನುಮತಿ ಇದೆ. ಸಲಿಂಗ ಕಾಮವನ್ನು ಹಿಂದೆ ಅಪರಾಧವಾಗಿ ಪರಿಗಣಿಸಲಾಗುತ್ತಿತ್ತು. 2018ರಲ್ಲಿ ಸುಪ್ರೀಂಕೋರ್ಟ್ ತೀರ್ಪು ಸಲಿಂಗಕಾಮಕ್ಕಿದ್ದ ಅಪರಾಧದ ಪಟ್ಟಿಯನ್ನು ತೊಡೆದುಹಾಕಿತು. ಆದರೆ, ಸಲಿಂಗಿಗಳ ಮದುವೆಗೆ ಅವಕಾಶ ಕೊಡುವ ಕಾನೂನು ಭಾರತದಲ್ಲಿ ಇನ್ಮುಂದೆ ಬರಬೇಕಷ್ಟೇ. ಭಾರತದ ಕಾನೂನು ಪ್ರಕಾರ ಮದುವೆ ಎಂದರೆ ಗಂಡು ಮತ್ತು ಹೆಣ್ಣಿನ ನಡುವೆ ಮಾತ್ರ.

ಬೇರೆ ದೇಶಗಳಲ್ಲಿ ಹೇಗಿದೆ?

ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗೆ ಜಗತ್ತು ಸ್ಪಂದಿಸಲಾರಂಭಿಸಿದ್ದು ಇತ್ತೀಚಿನ ವರ್ಷಗಳಲ್ಲಿ ಮಾತ್ರವೇ. ಸಲಿಂಗಿಗಳ ಮದುವೆಗೆ ಮೊದಲು ಅವಕಾಶ ಕೊಟ್ಟ ದೇಶ ಎಂದರೆ ನೆದರ್‌ಲೆಂಡ್ಸ್. ಅದೂ 2001ರಲ್ಲಿ. ಅಂದರೆ ಎರಡು ದಶಕಗಳ ಹಿಂದಷ್ಟೇ ಒಂದು ದೇಶ ಸಲಿಂಗಿಗಳ ವಿವಾಹಕ್ಕೆ ಕಾನೂನು ಮಾನ್ಯತೆ ಕೊಟ್ಟಿದ್ದು.

ನೆದರ್‌ಲೆಂಡ್ಸ್ ನಂತರ ಆಸ್ಟ್ರಿಯಾ, ಬೆಲ್ಜಿಯಂ, ಬ್ರಿಟನ್, ಡೆನ್ಮಾರ್ಕ್, ಫಿನ್‌ಲೆಂಡ್, ಫ್ರಾನ್ಸ್, ಜರ್ಮನಿ, ಐಸ್‌ಲೆಂಡ್, ಐರ್‌ಲೆಂಡ್, ಲುಕ್ಸೆಂಬರ್ಗ್, ಮಾಲ್ಟಾ, ನಾರ್ವೇ, ಪೋರ್ಚುಗಲ್, ಸ್ಪೇನ್, ಸ್ವೀಡನ್, ಸ್ಲೊವೇನಿಯಾ ಮತ್ತು ಸ್ವಿಟ್ಜರ್ಲ್ಯಾಂಡ್ ಈ 17 ದೇಶಗಳೂ ಕೂಡ ನಂತರದ ಕಾಲಘಟ್ಟದಲ್ಲಿ ಸಲಿಂಗಿಗಳ ಮದುವೆಯನ್ನು ಕಾನೂನುಬದ್ಧಗೊಳಿಸಿವೆ.

ಇನ್ನು, ಯೂರೋಪ್‌ನ ಇತರ ಕೆಲ ದೇಶಗಳಾದ ಚೆಕ್ ಗಣರಾಜ್ಯ, ಕ್ರೊವೇಶಿಯಾ, ಸೈಪ್ರಸ್, ಎಸ್ಟೋನಿಯಾ, ಗ್ರೀಸ್, ಹಂಗೆರಿ ಮತ್ತು ಇಟಲಿ ದೇಶಗಳಲ್ಲಿ ಸಲಿಂಗಿಗಳ ಮದುವೆಗೆ ಮಾನ್ಯತೆ ಕೊಟ್ಟಿಲ್ಲವಾದರೂ ಸಲಿಂಗಿ ಜೋಡಿಗಳಿಗೆ ಸಾಮಾಜಿಕವಾಗಿ ತೊಡಗಿಸಿಕೊಳ್ಳಲು ಅನುಮತಿ ಇದೆ. ಅಂದರೆ ಅವರು ಲಿವ್-ಇನ್ ಇತ್ಯಾದಿ ಸಂಬಂಧ ಇಟ್ಟುಕೊಳ್ಳಬಹುದು.

Cubans Vote For Same Sex Marriage; Know Which Countries Legalised It

ಟರ್ಕಿ ಇತ್ಯಾದಿ ಯೂರೋಪ್‌ನ ಪೂರ್ವ ಅಂಚಿನ ದೇಶಗಳು ಮಾತ್ರ ಇನ್ನೂ ಸಂಪ್ರದಾಯದ ಪೊರೆಯನ್ನು ಅಂಟಿಸಿಕೊಂಡಿವೆ. ರಷ್ಯಾದಲ್ಲಿ 2013ರಲ್ಲಿ ಸಲಿಂಗಕಾಮಕ್ಕೆ ಮಾನ್ಯತೆ ಕೊಡಲಾಯಿತು. ಆದರೆ, ಅಪ್ರಾಪ್ತರಲ್ಲಿ ಸಲಿಂಗಕಾಮವನ್ನು ಪ್ರಚೋದಿಸುವವರಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ. ಭಾರತದಲ್ಲಿಯಂತೆ ರಷ್ಯಾದಲ್ಲಿ ಸಲಿಂಗಕಾಮಕ್ಕೆ ಅನುಮತಿ ಇದೆಯಾದರೂ ಸಲಿಂಗಿಗಳ ಮದುವೆಗೆ ಅವಕಾಶ ಇಲ್ಲ.

ಮಹಿಳಾ ಸಲಿಂಗಿ ಜೋಡಿಗಳು ನೆರವಿನ ಸಂತಾನೋತ್ಪತ್ತಿ ಹೊಂದಲು ಬೆಲ್ಜಿಯಂ, ನೆದರ್ಲೆಂಡ್ಸ್, ಯುಕೆ, ಸ್ಪೇನ್ ಮೊದಲಾದ 15 ಐರೋಪ್ಯ ದೇಶಗಳಲ್ಲಿ ಅನುಮತಿ ಇದೆ.

ಇನ್ನು ಬಾಡಿಗೆ ತಾಯ್ತನದ ವಿಚಾರದಲ್ಲಿ ಅನೇಕ ದೇಶಗಳಲ್ಲಿ ನಿಷೇಧ ಇದೆ. ಭಾರತದಂಥ ಕೆಲವೇ ದೇಶಗಳಲ್ಲಿ ಮಾತ್ರ ಸರೋಗೆಸಿಗೆ ಅನುಮತಿ ಇರುವುದು. ಅಮೆರಿಕದ ಕೆಲ ರಾಜ್ಯಗಳಲ್ಲಿ ವಾಣಿಜ್ಯ ಉದ್ದೇಶದಿಂದಲೂ ಬಾಡಿಗೆ ತಾಯ್ತನ ಹೊಂದಲು ಅವಕಾಶ ಇದೆ.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+