ಚೀನಾದಲ್ಲಿ ಕೋವಿಡ್ ಎಚ್ಚರಿಕೆ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ- ಆಸ್ಪತ್ರೆಗಳು ಫುಲ್

ಬೀಜಿಂಗ್ ಡಿಸೆಂಬರ್ 20: ಚೀನಾದಲ್ಲಿ ದಟ್ಟ ಮಂಜು ಚಳಿ ಆವರಿಸುತ್ತಿದ್ದಂತೆ ಮತ್ತೆ ಕೊರೊನಾ ಅರ್ಭಟ ಹೆಚ್ಚಾಗಲು ಶುರುವಾಗಿದೆ. ಏಕಾಏಕಿ ಕೊರೊನಾ ಉಲ್ಬಣದಿಂದಾಗಿ ಅದರ ನಿರ್ವಹಣೆಗೆ ಚೀನಾ ಹೆಣಗಾಡುತ್ತಿದೆ. ವರದಿಗಳ ಪ್ರಕಾರ ಬೀಜಿಂಗ್ ಸೇರಿದಂತೆ ಚೀನಾದ ಹಲವಾರು ನಗರಗಳು ವೇಗವಾಗಿ ಹರಡುತ್ತಿರುವ ಕೊರೊನವೈರಸ್‌ನ ಓಮಿಕ್ರಾನ್ ರೂಪಾಂತರದ ಹಿಡಿತದಲ್ಲಿವೆ. ಚೈನೀಸ್ ನಗರಗಳು ಪ್ರಸ್ತುತ ಹೆಚ್ಚು ಹರಡುವ ಓಮಿಕ್ರಾನ್ ತಳಿಗಳಾದ BA.5.2 ಮತ್ತು BF.7ನಿಂದ ಹೆಚ್ಚು ಹಾನಿಗೊಳಗಾಗಿವೆ ಎಂದು ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಇದು ಕಾಡ್ಗಿಚ್ಚಿನಂತೆ ಹರಡುತ್ತಿದೆ. ಒಂದು ಅಂದಾಜಿನ ಪ್ರಕಾರ, ನಗರದ ಜನಸಂಖ್ಯೆಯ 70 ಪ್ರತಿಶತದಷ್ಟು ಜನರು ವೈರಸ್‌ ವಿರುದ್ಧ ಹೋರಾಡುತ್ತಿದ್ದಾರೆ. ಇದು ಲಕ್ಷಾಂತರ ಜನರನ್ನು ತಮ್ಮ ಮನೆಗಳಲ್ಲೇ ಇರಿಸುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ 90 ಪ್ರತಿಶತದಷ್ಟು ಜನ ಸೋಂಕಿಗೆ ಒಳಗಾಗಬಹುದು.

ಚೀನಾದಲ್ಲಿ ಈ ಹಿಂದೆ ಕೊರೊನಾ ಕಡಿಮೆ ಆದ ಬಳಿಕ ಕೋವಿಡ್ ನಿರ್ಬಂಧಗಳನ್ನು ತೆಗೆದುಹಾಕಲಾಗಿತ್ತು. ಆದರೀಗ ಚೀನಾದಾದ್ಯಂತ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಆರೋಗ್ಯ ಅರ್ಥಶಾಸ್ತ್ರಜ್ಞ, ಫೀಗಲ್-ಡಿಂಗ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ರೋಗಿಗಳಿಂದ ತುಂಬಿರುವ ಆಶ್ಪತ್ರೆಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಕೋವಿಡ್‌ನಿಂದ ಸಾವುಗಳು ಹೆಚ್ಚಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಮತ್ತೊಂದೆಡೆ ರೋಗಿಗಳ ಸಂಖ್ಯೆ ಎಷ್ಟು ಹೆಚ್ಚಾಗುತ್ತಿದೆ ಅಂದರೆ ಆರೋಗ್ಯ ಕೇಂದ್ರಗಳು ಸಾಕಾಗುತ್ತಿಲ್ಲ ಎಂದಿದ್ದಾರೆ.

ರಾಜಧಾನಿ ಬೀಜಿಂಗ್‌ನಲ್ಲಿನ ಅನೇಕ ನಿವಾಸಿಗಳು ಔಷಧವನ್ನು ಪಡೆಯಲು ಹೆಣಗಾಡುತ್ತಿದ್ದಾರೆ. ಆಸ್ಪತ್ರೆಯ ಜ್ವರ ಚಿಕಿತ್ಸಾಲಯಗಳಲ್ಲಿ ದೀರ್ಘ ಸರತಿ ಸಾಲುಗಳು ಮತ್ತು ಆಂಬ್ಯುಲೆನ್ಸ್‌ಗಳಿಗೆ ಕರೆಗಳು ಹೆಚ್ಚಾಗುತ್ತಿವೆ. ನಗರದ ಅಂತ್ಯಕ್ರಿಯೆಯ ಕೇಂದ್ರಗಳು ಹೆಚ್ಚಿನ ಶವಸಂಸ್ಕಾರಗಳೊಂದಿಗೆ ಒತ್ತಡದಲ್ಲಿವೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿ ತಿಳಿಸಿದೆ. ಕೋವಿಡ್ ಪ್ರಕರಣಗಳನ್ನು ನಿರ್ವಹಿಸುವ ಬೀಜಿಂಗ್ ಡೊಂಗ್‌ಜಿಯಾವೊ ಫ್ಯೂನರಲ್ ಹೋಮ್‌ನಲ್ಲಿ, ದುಃಖಿತ ಸಂಬಂಧಿಕರು ಕುಟುಂಬ ಸದಸ್ಯರನ್ನು ಅಂತ್ಯಸಂಸ್ಕಾರ ಮಾಡಲು ದಿನಗಳಿಂದ ಕಾಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.

"ಬೀಜಿಂಗ್‌ನಲ್ಲಿ ತಡೆರಹಿತ ಅಂತ್ಯಕ್ರಿಯೆ ನಡೆದಿದೆ. ಶವಗಾರಗಳು ಓವರ್‌ಲೋಡ್ ಆಗಿವೆ. ಹೆಚ್ಚಿನ ಶವಗಾರಗಳ ಅಗತ್ಯವಿದೆ. 24/7 ಅಂತ್ಯಕ್ರಿಯೆಗಳು ನಿರಂತರವಾಗಿ ನಡೆಯುತ್ತಿವೆ. 2000 ಶವಗಳು ಶವಸಂಸ್ಕಾರಕ್ಕೆ ಕಾಯುತ್ತಿವೆ" ಎಂದು ಎರಿಕ್ ಫೀಗಲ್-ಡಿಂಗ್ ತನ್ನ ಟ್ವಿಟ್ಟರ್ ಥ್ರೆಡ್ನಲ್ಲಿ ಹೇಳಿದ್ದಾರೆ.

Covid alert again in China: Death toll likely to rise - Hospitals full

ಮೂರು ಮಾರಣಾಂತಿಕ ಕೋವಿಡ್ ಅಲೆಗಳು-

ಚೀನಾದ ಪ್ರಮುಖ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಜನವರಿ ಮತ್ತು ಫೆಬ್ರವರಿಯಲ್ಲಿ ಸಾಂಕ್ರಾಮಿಕ ರೋಗ ಉತ್ತುಂಗಕ್ಕೇರುತ್ತದೆ ಎಂದು ಹೇಳುತ್ತಾರೆ, ಆದಾಗ್ಯೂ ಕೋವಿಡ್ ಸೋಂಕುಗಳ ಸಂಖ್ಯೆ ಇದೀಗ ಹೆಚ್ಚಾಗುತ್ತಲೇ ಇದೆ. ಸಾಂಕ್ರಾಮಿಕ ರೋಗಶಾಸ್ತ್ರಜ್ಞ ವು ಜುನ್ಯು ಜನವರಿ ಮಧ್ಯದವರೆಗೆ ಸೋಂಕು ಹೆಚ್ಚಾಗುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ, ಆದರೆ ಎರಡನೇ ಅಲೆ ಜನವರಿ 21 ರಂದು ಪ್ರಾರಂಭವಾಗುತ್ತದೆ ಎಂದಿದ್ದಾರೆ. ರಜೆಯ ನಂತರ ಜನರು ಕೆಲಸಕ್ಕೆ ಮರಳುವುದರಿಂದ ಫೆಬ್ರವರಿ ಅಂತ್ಯದಿಂದ ಮಾರ್ಚ್ ಮಧ್ಯದವರೆಗೆ ಪ್ರಕರಣಗಳ ಮೂರನೇ ಅಲೆ ಉಲ್ಬಣಗೊಳ್ಳಲಿದೆ ಎಂದು ಡಾ ವು ಮಾಧ್ಯಮಗಳಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+