ವೃದ್ಧೆಯ ಕಣ್ಣಿನ ನರವನ್ನೇ ಕತ್ತರಿಸಿದ್ದರು, ಪಕ್ಕೆಲುಬುಗಳನ್ನು ಮುರಿಯಲಾಗಿತ್ತು

ದುಬೈ, ಜೂನ್ 20: ಮಗ-ಸೊಸೆ ಸೇರಿಕೊಂಡು ವೃದ್ಧ ತಾಯಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಘಟನೆ ದುಬೈನಲ್ಲಿ ನಡೆದಿದ್ದು, ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ವೃದ್ಧೆ ಸಾಯುವ ಸಂದರ್ಭದಲ್ಲಿ ಕಣ್ಣುಗುಡ್ಡೆಗಳು ಹೊರ ಬಂದಿದ್ದವು, ಪಕ್ಕೆಲುಬುಗಳು ಮುರಿದಿದ್ದವು, ಕೇವಲ 29 ಕೆಜಿ ತೂಕವಿದ್ದರು ಎಂದು ತಿಳಿದುಬಂದಿದೆ. ದಂಪತಿ ನಿತ್ಯವೂ ಆಕೆಗೆ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು. ಈ ಕುರಿತು ಅದೇ ಅಪಾರ್ಟ್‌ಮೆಂಟ್ ನಿವಾಸಿಯೊಬ್ಬರು ಎಲ್ಲವನ್ನೂ ವಿವರಸಿದಿದ್ದು ಹೀಗೆ.

ಅಪಾರ್ಟ್‌ಮೆಂಟ್‌ನಲ್ಲಿ ಅವರ ಮನೆಯನ್ನೇ ದಾಟಿ ನಮ್ಮ ಮನೆಗೆ ಹೋಗಬೇಕು, ಆ ಸಂದರ್ಭದಲ್ಲಿ ಸೊಸೆ ಕೈಯಲ್ಲಿ ತನ್ನ ಮಗುವನ್ನು ಎತ್ತಿಕೊಂಡು ''ಎಲ್ಲಿಂದಲೋ ಇಲ್ಲಿಗೆ ಬಂದು ಬಿಡ್ತಾರೆ, ನಾನು ಕೆಲಸದಿಂದ ಹೋಗಿ ಬರುವವರೆಗೂ ಮಗುವನ್ನು ಸರಿಯಾಗಿ ನೋಡಿಕೊಳ್ಳೇಕೆ ಆಗೋದಿಲ್ಲ, ಮಗಳಿಗೆ ದಿನೇ ದಿನೇ ಆರೋಗ್ಯ ಹದಗೆಡುತ್ತಿದೆ'' ಎಂದು ಆಕೆ ರೇಗಾಡುತ್ತಿದ್ದಳು.

couple tortured elder woman cut her eyes and ribs broken

ಮೂರು ದಿನಗಳ ನಂತರ ಮನೆಯ ಬಾಗಿಲು ತೆರದಿತ್ತು ವೃದ್ಧೆ ನೆಲದ ಮೇಲೆ ಬಿದ್ದಿರುವುದು ಕಾಣಿಸಿತ್ತು, ಅವರ ಬೆನ್ನುಮೂಳೆ ಮುರಿದಿತ್ತು ಮೈ, ಕೈ ತುಂಬೆಲ್ಲಾ ಸುಟ್ಟ ಗಾಯದ ಗುರುತುಗಳಿದ್ದವು. ಅವರಿಗೆ ಎದ್ದುನಿಲ್ಲಲೂ ಶಕ್ತಿ ಇರಲಿಲ್ಲ. ತಕ್ಷಣ ಆಂಬುಲೆನ್ಸ್ ಕರೆಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರುಕೆಲಸವೇ ಗಂಟೆಗಳಲ್ಲಿ ಮೃತಪಟ್ಟಿದ್ದರು.

ಅವರ ಕೈಕಾಲುಗಳಲ್ಲಿ ಶಕ್ತಿಯೇ ಇರಲಿಲ್ಲ, ಆ ಮೂರು ದಿನಗಳಲ್ಲಿ ಅವರಿಗೆ ಸಾಕಷ್ಟು ಹಿಂಸೆ ನೀಡಿದ್ದರು. ಅವರ ದೇಹದ ಶೇ.10ರಷ್ಟು ಭಾಗದಲ್ಲಿ ಸುಟ್ಟ ಗಾಯಗಳಿದ್ದವು. ಆಸ್ಪತ್ರೆ ದಾಖಲೆ ಪ್ರಕಾರ ಮಹಿಳೆ 2018ರ ಅಕ್ಟೋಬರ್ 31ರಂದು ಮೃತಪಟ್ಟಿದ್ದಾರೆ. ಜುಲೈ 3ಕ್ಕೆ ತೀರ್ಪು ಮುಂದೂಡಲಾಗಿದ್ದು ಅಲ್ಲಿಯವರೆಗೂ ದಂಪತಿಯನ್ನು ಪೊಲೀಸರ ಕಸ್ಟಡಿಯಲ್ಲಿ ಇರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+