ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೂ 6 ತಿಂಗಳು ಕೊರೊನಾವೈರಸ್ ಲಸಿಕೆ ಸಿಗುವುದಿಲ್ಲ: WHO

|
Google Oneindia Kannada News

ನವದೆಹಲಿ, ಜುಲೈ.23: ಕೊರೊನಾವೈರಸ್ ಸೋಂಕು ನಿವಾರಣೆಗೆ ಅಗತ್ಯವಿರುವ ಔಷಧಿ ಪತ್ತೆಗೆ ಜಗತ್ತಿನಾದ್ಯಂತ ಸಂಶೋಧನಾ ಪ್ರಕ್ರಿಯೆಗಳು ಅತ್ಯಂತ ವೇಗವಾಗಿ ನಡೆಯುತ್ತಿವೆ. ವೈದ್ಯಕೀಯ ಪ್ರಯೋಗ ಮತ್ತು ಮನುಷ್ಯರ ಮೇಲೆಯೂ ಲಸಿಕೆಗಳ ಪ್ರಯೋಗಳನ್ನು ನಡೆಸಲಾಗುತ್ತಿದೆ.

Recommended Video

Corona Vaccine ತಯಾರಿಸುವಲ್ಲಿ ಯಾವ ದೇಶ ಯಾವ ಹಂತದಲ್ಲಿದೆ ? | Oneindia Kannada

ವಿಶ್ವದಾದ್ಯಂತ ಸಂಶೋಧನಾ ಸಂಸ್ಥೆಗಳು ಮತ್ತು ಸಾಂಕ್ರಾಮಿಕ ರೋಗತಜ್ಞರು, ವಿಜ್ಞಾನಿಗಳು ನಡೆಸುತ್ತಿರುವ ಸಂಶೋಧನೆಗಳು ಯಶಸ್ವಿಯಾದರೂ ಕೂಡಾ 2021ರವರೆಗೂ ಕೊರೊನಾವೈರಸ್ ಸೋಂಕಿಗೆ ಯಾವುದೇ ಲಸಿಕೆ ಅಥವಾ ಔಷಧಿ ಸಿಗುವುದು ಕಷ್ಟಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಪುನರುಚ್ಛರಿಸಿದೆ.

ಸುಳ್ಳುಸುಳ್ಳು: 2020ರಲ್ಲಿ ಕೊವಿಡ್-19 ಔಷಧಿ ಸಿಗುತ್ತೆ ಎನ್ನುವುದೇ ಸುಳ್ಳು!ಸುಳ್ಳುಸುಳ್ಳು: 2020ರಲ್ಲಿ ಕೊವಿಡ್-19 ಔಷಧಿ ಸಿಗುತ್ತೆ ಎನ್ನುವುದೇ ಸುಳ್ಳು!

ನ್ಯಾಯಯುತವಾಗಿ ಲಸಿಕೆ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ಆದರೆ ಇದರ ನಡುವೆ ಕೊರೊನಾವೈರಸ್ ಹರಡುವುದನ್ನು ನಿಗ್ರಹಿಸುವುದು ಸವಾಲಿನ ಕೆಲಸವಾಗಿದೆ. ಏಕೆಂದರೆ ಪ್ರತಿನಿತ್ಯ ಸೋಂಕಿತ ಪ್ರಕರಣಗಳ ಸಂಖ್ಯೆಯು ದಾಖಲೆಯ ಮಟ್ಟದಲ್ಲಿ ಏರಿಕೆಯಾಗುತ್ತಿವೆ ಎಂದು WHO ತುರ್ತು ಕಾರ್ಯಕ್ರಮಗಳ ಮುಖ್ಯಸ್ಥರಾದ ಮೈಕ್ ರಿಯಾನ್ ತಿಳಿಸಿದ್ದಾರೆ.

ವ್ಯಾಕ್ಸಿನ್ ಗಳ ಪ್ರಯೋಗ 3ನೇ ಹಂತದಲ್ಲಿದೆ

ವ್ಯಾಕ್ಸಿನ್ ಗಳ ಪ್ರಯೋಗ 3ನೇ ಹಂತದಲ್ಲಿದೆ

ಜಗತ್ತಿನಾದ್ಯಂತ ಕೊರೊನಾವೈರಸ್ ಲಸಿಕೆ ಸಂಶೋಧನಾ ಕಾರ್ಯವು ಶರವೇಗದಲ್ಲಿ ಸಾಗುತ್ತಿವೆ. ಈಗಾಗಲೇ ಸಾಕಷ್ಟು ವ್ಯಾಕ್ಸಿನ್ ಗಳನ್ನು ಬಳಸಿಕೊಂಡು ಮೂರನೇ ಹಂತದ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಈ ಪೈಕಿ ಯಾವುದೇ ಒಂದು ವ್ಯಾಕ್ಸಿನ್ ಕೂಡಾ ವಿಫಲವಾಗಿಲ್ಲ. ಈ ಬೆಳವಣಿಗೆಯು ಹೊಸ ಆಶಾಭಾವನೆಯನ್ನು ಹುಟ್ಟು ಹಾಕಿದೆ. ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಔಷಧಿಯ ಸಂಶೋಧನೆಯು ಅಗತ್ಯವಾಗಿದೆ ಎಂದು ಮೈಕ್ ರಿಯಾನ್ ತಿಳಿಸಿದ್ದಾರೆ.

ಲಸಿಕೆ ಉತ್ಪಾದನೆ ಪ್ರಮಾಣ ಹೆಚ್ಚಿಸಲು WHO ಕ್ರಮ

ಲಸಿಕೆ ಉತ್ಪಾದನೆ ಪ್ರಮಾಣ ಹೆಚ್ಚಿಸಲು WHO ಕ್ರಮ

ಕೊರೊನಾವೈರಸ್ ವಿರುದ್ಧ ಹೋರಾಡುವುದಕ್ಕೆ ಅಗತ್ಯ ಎನಿಸಿರುವ ಸಂಭಾವ್ಯ ಲಸಿಕೆಗಳಿಗೆ ಅನುಮತಿ ನೀಡುವುದು ಮತ್ತು ಅನುಮತಿಯನ್ನು ವಿಸ್ತರಿಸುವುದರ ಜೊತೆಗೆ ಲಸಿಕೆಯ ಉತ್ಪಾದನಾ ಸಾಮರ್ಥ್ಯದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ ಎಂದು ಮೈಕ್ ರಿಯಾನ್ ಹೇಳಿದ್ದಾರೆ.

ನ್ಯಾಯಯುತವಾದ ಲಸಿಕೆಯ ಹಂಚಿಕೆಗೆ WHO ಆದ್ಯತೆ

ನ್ಯಾಯಯುತವಾದ ಲಸಿಕೆಯ ಹಂಚಿಕೆಗೆ WHO ಆದ್ಯತೆ

ಕೊರೊನಾವೈರಸ್ ಸೋಂಕು ಜಾಗತಿಕ ಮಟ್ಟದಲ್ಲಿ ಹರಡಿರುವುದರಿಂದ ಸಾರ್ವಜನಿಕವಾಗಿ ನ್ಯಾಯಯುತ ಹಂಚಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯು ಆದ್ಯತೆ ನೀಡುತ್ತದೆ. ಈಗಾಗಲೇ ಯುನೈಟೆಡ್ ನೇಷನ್ಸ್ ಆಫ್ ಅಮೆರಿಕಾದ ಸರ್ಕಾರವು ಪಿ-ಫಿಜರ್ ಇಂಕ್ ಮತ್ತು ಜರ್ಮನ್ ಬಯೋಟಿಕ್ ಸಂಸ್ಥೆಯು ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಮೇಲೆ ಲಕ್ಷ್ಯ ವಹಿಸಿದೆ. 100 ಬಿಲಿಯನ್ ಡೋಸ್ ಔಷಧಿಯನ್ನು ಖರೀದಿಸುವುದಕ್ಕೆ 1.9 ಬಿಲಿಯನ್ ಡಾಲರ್ ನೀಡಲು ಅಮೆರಿಕಾ ಸಿದ್ಧವಾಗಿದೆ. ಆದರೆ ಕೊವಿಡ್-19 ಲಸಿಕೆ ಕೇವಲ ಶ್ರೀಮಂತರಿಗೆ ಸೇರುವಂತದ್ದು ಅಲ್ಲ. ಈ ಲಸಿಕೆ ಬಡವರನ್ನೂ ತಲುಪಬೇಕು. ಆ ನಿಟ್ಟಿನಲ್ಲಿ WHO ಲಕ್ಷ್ಯ ವಹಿಸಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮೈಕ್ ರಿಯಾನ್ ತಿಳಿಸಿದ್ದಾರೆ.

ಮಕ್ಕಳನ್ನು ಪುನಃ ಶಾಲೆಗೆ ಎಂದು ಕಳುಹಿಸುವುದು?

ಮಕ್ಕಳನ್ನು ಪುನಃ ಶಾಲೆಗೆ ಎಂದು ಕಳುಹಿಸುವುದು?

ಕೊರೊನಾವೈರಸ್ ಸೋಂಕು ವಿಶ್ವದ ಸಮುದಾಯದಲ್ಲಿ ಹರಡುತ್ತಿರುವ ಹಿನ್ನೆಲೆ ಮಕ್ಕಳು ಮನೆಗಳಿಂದ ಹೊರಗೆ ಬರುವುದೇ ಅಪಾಯ ಎನ್ನುವಂತಾ ವಾತಾವರವಿದೆ. ಶಾಲೆಗಳನ್ನು ಪುನಃ ಆರಂಭಿಸಬೇಕು. ಮಕ್ಕಳನ್ನು ಶಾಲೆಗಳತ್ತ ಕರೆ ತರಬೇಕಿದ್ದಲ್ಲಿ ಮೊದಲು ಸಮುದಾಯಕ್ಕೆ ಹರಡಿದ ಕೊರೊನಾವೈರಸ್ ಸೋಂಕಿಗೆ ಕಡಿವಾಣ ಹಾಕಬೇಕು. ಲಸಿಕೆ ಕಂಡು ಹಿಡಿಯುವುದಕ್ಕೂ ಮೊದಲು ಈ ಕಾರ್ಯವು ಸಾಧ್ಯವಾಗುತ್ತದೆ ಎಂದು ಎನಿಸುವುದಿಲ್ಲ. ಹೀಗಾಗಿ ತುರ್ತಾಗಿ ಲಸಿಕೆ ಪತ್ತೆ ಮಾಡುವ ಅಗತ್ಯವೇನೋ ಎದುರಾಗಿದೆ. ಆದರೆ ವಾಸ್ತವಿಕವಾಗಿ ಕೊರೊನಾವೈರಸ್ ಸೋಂಕಿನ ಲಸಿಕೆಯು ಮಾರುಕಟ್ಟೆಯಲ್ಲಿ ಲಭ್ಯಾವಾಗಬೇಕಿದ್ದಲ್ಲಿ 2021ರವರೆಗೂ ಕಾಯಲೇಬೇಕು ಎಂದು ಮೈಕ್ ರಿಯಾನ್ ಸ್ಪಷ್ಟವಾಗಿ ಹೇಳಿದ್ದಾರೆ.

English summary
Coronavirus Vaccine Will Not Ready To Use Before 2021: World Health Organization.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X