ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಕೊರೊನಾ ವೈರಸ್‌ನಿಂದ ಮೃತಪಟ್ಟವರ ಸಂಖ್ಯೆ 1,650ಕ್ಕೆ ಏರಿಕೆ

|
Google Oneindia Kannada News

Recommended Video

Corona Virus kills more people than any other virus | Oneindia kannada

ವುಹಾನ್, ಫೆಬ್ರವರಿ 15: ಚೀನಾದಲ್ಲಿ ಕೊರೊನಾ ವೈರಸ್‌(ಕೋವಿಡ್ 19)ನಿಂದ ಮೃತಪಟ್ಟವರ ಸಂಖ್ಯೆ 1,650ಕ್ಕೇರಿದೆ. ಇಡೀ ದೇಶಾದ್ಯಂತ 143 ಹೊಸ ಪ್ರಕರಣಗಳು ದಾಖಲಾಗಿವೆ.

ಹ್ಯೂಬೆನಲ್ಲಿ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ, ಮತ್ತಷ್ಟು ಪ್ರಕರಣಗಳು ದೃಢಪಟ್ಟಿವೆ. ಚೀನಾದಲ್ಲಿ ಸುಮಾರು 67535 ಮಂದಿ ಕೊರೊನಾ ಪೀಡಿತರಾಗಿದ್ದಾರೆ.

ಹ್ಯೂಬೆ ಒಂದರಲ್ಲೇ 2420 ಹೊಸ ಪ್ರಕರಣಗಳು ದಾಖಲಾಗಿದ್ದು, 139 ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

corona

ಹಾಂಕ್‌ಕಾಂಗ್‌ನಲ್ಲಿ ಎರಡು ದಶಕದ ಹಿಂದೆ ಸಾರ್ಸ್ ಎನ್ನುವ ಮಹಾಮಾರಿ ಬಂದಿತ್ತು. ಅಲ್ಲಿಯ ಜನತೇ ಇದೇ ರೀತಿ ತೊಂದರೆ ಅನುಭವಿಸಿದ್ದರು. ಹಾಂಕ್‌ಗಾಂಗ್‌ನಲ್ಲಿ 2002-2003ರಲ್ಲಿ 774 ಮಂದಿ ಮೃತಪಟ್ಟಿದ್ದರು. ಇಡೀ ವಿಶ್ವದಲ್ಲಿ 120 ಮಂದಿ ಈ ರೋಗಕ್ಕೆ ತುತ್ತಾಗಿದ್ದರು.

Coronavirus: ಚೀನಾದಲ್ಲಿ ಚಿಕಿತ್ಸೆ ನೀಡಿದ 1700 ವೈದ್ಯರಿಗೇ ಸೋಂಕುCoronavirus: ಚೀನಾದಲ್ಲಿ ಚಿಕಿತ್ಸೆ ನೀಡಿದ 1700 ವೈದ್ಯರಿಗೇ ಸೋಂಕು

ಚೀನಾದ ಅಧ್ಯಕ್ಷ ಜಿನ್ಪಿಂಗ್ ನಿತ್ಯದ ಡಾಟಾವನ್ನು ಪರಿಶೀಲಿಸುತ್ತಿದ್ದಾರೆ, ವೈರಸ್ ಟ್ರೇಸಿಂಗ್, ಚಿಕಿತ್ಸೆ, ಔಷಧಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಮಾತ್ರೆ ನೀಡುವುದು ಅಥವಾ ಇನ್ನಿತರೆ ಕೆಲಸಗಳಿಗೆ ರೋಬೋಟ್ ಬಳಕೆ ಮಾಡಲಾಗುತ್ತಿದೆ.

ಚೀನಾದಲ್ಲಿ ಕೊರೊನಾ ವೈರಸ್ ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೇ ಸೋಂಕು ತಗಲುತ್ತಿರುವುದು ಮತ್ತಷ್ಟು ಆತಂಕವನ್ನು ಹುಟ್ಟಿಸುತ್ತಿದೆ.

ಮೊದಲ ಬಾರಿಗೆ ಏಳು ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯ ಇದಾಗಲೇ ಮೃತಪಟ್ಟಿದ್ದಾರೆ.
ಇದರ ಬೆನ್ನಲ್ಲೇ ಆರು ಮಂದಿ ವೈದ್ಯರು ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದು, ಇದೀಗ 1700 ವೈದ್ಯರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಮತ್ತಷ್ಟು ಭಯವನ್ನು ಹುಟ್ಟು ಹಾಕಿದೆ.

ಹುಬೈನಲ್ಲಿ ಅತಿಹೆಚ್ಚು ಮಂದಿಗೆ ಕೊರೊನಾ ವೈರಸ್ ಪತ್ತೆಯಾಗಿದ್ದು ಕಳೆದ ಬುಧವಾರ ಒಂದೇ ದಿನದಲ್ಲಿ 242 ಮಂದಿ ಇದೊಂದು ನಗರದಲ್ಲಿ ಮಾರಕ ಸೋಂಕಿನಿಂದ ಪ್ರಾಣ ಬಿಟ್ಟಿದ್ದರು.

ಹುಬೈ ನಗರದಲ್ಲಿ ವಾಸಿಸುವ 15 ಸಾವಿರ ಮಂದಿಗೆ ಸೋಂಕು ತಗಲಿರುವ ಬಗ್ಗೆ ಸ್ಪಷ್ಟವಾಗಿದ್ದು, ನಗರದ ಎಲ್ಲ ನಿವಾಸಿಗಳಿಗೆ ಗೃಹಬಂಧನದಲ್ಲಿ ಇರುವಂತೆ ಸರ್ಕಾರವೇ ಖಡಕ್ ಸೂಚನೆ ನೀಡಿದೆ.

English summary
The death count in China’s novel coronavirus outbreak has climbed to 1,631 with 143 new fatalities reported from all over the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X