ಶಾಕಿಂಗ್: ನೀರಿನಲ್ಲಾಯಿತು, ಈಗ ಗಾಳಿಯಲ್ಲೂ ಕೊರೊನಾ ವೈರಸ್ ಪತ್ತೆ

ಮಿಲಾನ್, ಏಪ್ರಿಲ್ 27: ಇಟೆಲಿಯ ಬೊಲೊಗ್ನಾ ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ, ಕೊರೊನಾ ವೈರಾಣು ವಾಯು ಮಾಲಿನ್ಯದಲ್ಲೂ ಇರುತ್ತದೆ ಎನ್ನುವ ಅಂಶ ಬೆಳಕಿಗೆ ಬಂದಿದೆ.

"ವಾಯುಮಾಲಿನ್ಯದ ಕಣಗಳ ಮೇಲೆ ಕೊರೊನಾ ವೈರಸ್ ಪತ್ತೆಯಾಗಿದೆ, ಇದು ಸೋಂಕಿತರ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆಯೇ ಎನ್ನುವುದು ಹೆಚ್ಚಿನ ಅಧ್ಯಯನದ ಮೂಲಕ ತಿಳಿಯಬೇಕಿದೆ" ಎಂದು ವಿವಿಯ ವಿಜ್ಞಾನಿಗಳು ಹೇಳಿದ್ದಾರೆ.

ಈಗ ನಡೆಯುತ್ತಿರುವ ಅಧ್ಯಯನವು ಪ್ರಾಥಮಿಕ ಹಂತದಲ್ಲಿದ್ದು, ವಾಯುಮಾಲಿನ್ಯದ ಕಣಗಳ ಮೇಲೆ ವೈರಸ್ ಎಷ್ಟು ಹೊತ್ತು ಇರುತ್ತದೆ ಮತ್ತು ಇದು ರೋಗವನ್ನು ಉಂಟುಮಾಡುವಷ್ಟು ಪ್ರಮಾಣದಲ್ಲಿರುತ್ತದೋ ಎನ್ನುವುದು ಇನ್ನೂ ತಿಳಿಯಬೇಕಷ್ಟೇ.

Coronavirus Has Been Detected In Air Pollution By Scientists Of Italy

ಇಟೆಲಿಯನ್ ವಿಜ್ಞಾನಿಗಳು ಬರ್ಗಾಮೋ ಪ್ರಾಂತ್ಯದ ಕೈಗಾರಿಕಾ ಪ್ರದೇಶದ ವಾಯುಮಾಲಿನ್ಯದ ಮಾದರಿಯನ್ನು ಸಂಗ್ರಹಿಸಿ, ಖಾಸಗಿ ಪ್ರಯೋಗಾಲಯದಲ್ಲಿ ಕುರುಡು ಪರೀಕ್ಷೆಯನ್ನು ನಡೆಸಿದಾಗ, ವೈರಾಣು ಇರುವ ಅಂಶ ಪತ್ತೆಯಾಗಿದೆ.

ಈ ಅಂಶವನ್ನು ಪತ್ತೆಹಚ್ಚಿರುವ ಇಟಲಿಯ ಬೊಲೊಗ್ನಾ ವಿಶ್ವವಿದ್ಯಾಲಯದ ವಿಜ್ಞಾನಿಗಳ ಪ್ರಕಾರ, "ವಾಯು ಮಾಲಿನ್ಯದಿಂದ ವೈರಸ್ ವ್ಯಾಪಕವಾಗಿ ಹರಡುತ್ತದೆಯೇ ಎನ್ನುವುದು ಅಧ್ಯಯನದ ಮುಂದಿನ ಭಾಗದಲ್ಲಿ ತಿಳಿಯಬಹುದು".

ಕೆಲವು ದಿನಗಳ ಹಿಂದೆ, ಪ್ಯಾರಿಸ್ ನಲ್ಲಿ ಸಂಸ್ಕರಿತ ನೀರನಲ್ಲಿ ಕೊರೊನಾ ವೈರಾಣು ಕಂಡುಬಂದಿದ್ದು ಸಂಶೋಧನೆಯ ಅಧ್ಯಯನವೊಂದರಲ್ಲಿ ಹೇಳಲಾಗಿತ್ತು. ಆದರೆ, ಗಾಳಿ ಮತ್ತು ನೀರಿನಲ್ಲಿ ಕೂರೊನಾ ವೈರಾಣು ಹರಡುವ ಸಾಧ್ಯತೆಯಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+