ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನುಷ್ಯನ ಚರ್ಮದ ಮೇಲೆ ಕೊರೊನಾ ಸೋಂಕು ಎಷ್ಟು ಗಂಟೆ ಇರಬಲ್ಲದು?

|
Google Oneindia Kannada News

ನವದೆಹಲಿ, ಅಕ್ಟೋಬರ್ 09: ಕೊರೊನಾ ಸೋಂಕು ಮನುಷ್ಯನ ಚರ್ಮದ ಮೇಲೆ ಸುಮಾರು 9 ಗಂಟೆಗಳ ಕಾಲ ಇರಲಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಕೊವಿಡ್-19 ಗೆ ಕಾರಣವಾಗುವ SARS-CoV-2ವೈರಸ್, ಮನುಷ್ಯನ ಚರ್ಮದ ಮೇಲೆ 9 ಗಂಟೆಗಳ ಕಾಲ ಇರಬಲ್ಲದು, ಫ್ಲೂ ವೈರಸ್ ಗಳಿಗಿಂತ ಅಧಿಕ ಗಂಟೆಗಳವರೆಗೂ ಇರಬಲ್ಲದು ಎಂದು ಅಧ್ಯಯನ ತಿಳಿಸಿದೆ.

ಮುಖ್ಯಮಂತ್ರಿಗಳ ಭೇಟಿಗೆ ಕೋವಿಡ್ ಪರೀಕ್ಷೆ ಕಡ್ಡಾಯಮುಖ್ಯಮಂತ್ರಿಗಳ ಭೇಟಿಗೆ ಕೋವಿಡ್ ಪರೀಕ್ಷೆ ಕಡ್ಡಾಯ

ಸಾಂಕ್ರಾಮಿಕ ರೋಗಗಳ ಕ್ಲಿನಿಕಲ್ ಜರ್ನಲ್ ನಲ್ಲಿ ಅಧ್ಯಯನ ಪ್ರಕಟಗೊಂಡಿದ್ದು, ಕೈಗಳನ್ನು ಸ್ವಚ್ಚಗೊಳಿಸುವ ಮೂಲಕ ಎರಡು ವೈರಸ್ ಗಳನ್ನು ವೇಗವಾಗಿ ನಿಷ್ಕ್ರೀಯಗೊಳಿಸಬಹುದು ಎಂಬುದು ಕಂಡುಬಂದಿದೆ.

ಸೋಂಕು ಎಷ್ಟು ಹೊತ್ತು ಜೀವಿಸಬಹುದು

ಸೋಂಕು ಎಷ್ಟು ಹೊತ್ತು ಜೀವಿಸಬಹುದು

ಕೊರೊನಾ ಸೋಂಕು ಪ್ಲಾಸ್ಟಿಕ್, ಸ್ಟೈನ್‌ಲಸ್ ಸ್ಟೀಲ್ ನಲ್ಲಿ 72 ಗಂಟೆಗಳ ಕಾಲ ಬದುಕಿರುತ್ತದೆ. ಕಾರ್ಡ್‌ಬೋರ್ಡ್‌ ಮೇಲೆ 24 ಗಂಟೆ, ಕಾಪರ್ ಮೇಲೆ 4 ತಾಸು ಜೀವಿತವಾಗಿರುತ್ತದೆ. 15 ಸೆಕೆಂಡುಗಳ ಕಾಲ ಕೈ ತೊಳೆಯಲೇಬೇಕು, ಕೊರೊನಾ ವೈರಸ್‌ನ್ನು ಬಹುಬೇಗ ನಿಷ್ಕ್ರಿಯಗೊಳಿಸಬಹುದು.

ಇನ್‌ಫ್ಲೂಯೆಂಜಾ ಎ ವೈರಸ್ 2 ಗಂಟೆ ಇರಬಲ್ಲದು

ಇನ್‌ಫ್ಲೂಯೆಂಜಾ ಎ ವೈರಸ್ 2 ಗಂಟೆ ಇರಬಲ್ಲದು

ಇದಕ್ಕೆ ವಿರುದ್ಧವಾಗಿ ಇನ್ ಪ್ಲೂಯೆಂಜಾ ಎ ವೈರಸ್ ಮನುಷ್ಯನ ಚರ್ಮದ ಮೇಲೆ ಸುಮಾರು ಎರಡು ಗಂಟೆಗಳ ಕಾಲ ಇರಲಿದೆ ಎಂದು ಜಪಾನ್ ನ ಕ್ಯೋಟೋ ಫ್ರಿಪೆಕ್ಟರಲ್ ಯೂನಿರ್ವಸಿಟಿ ಆಫ್ ಮೆಡಿಸನ್ ಸಂಶೋಧಕರು ಹೇಳಿದ್ದಾರೆ.

ಪದೇ ಪದೇ ಕೈ ತೊಳೆಯುವುದು ಉತ್ತಮ

ಪದೇ ಪದೇ ಕೈ ತೊಳೆಯುವುದು ಉತ್ತಮ

ಕೊವಿಡ್-19 ಹರಡುವುದನ್ನು ತಡೆಗಟ್ಟಲು ಕೈ ತೊಳೆಯುವ ಅಥವಾ ಸ್ಯಾನಿಟೈಸರ್ ಬಳಸುವ ಮಹತ್ವವನ್ನು ಈ ಸಂಶೋಧನೆಯು ಒತ್ತಿಹೇಳುತ್ತದೆ.

ಎಲ್ಲಿ ವೈರಸ್ ಬೇಗ ನಿಷ್ಕ್ರಿಯಗೊಳ್ಳುತ್ತವೆ

ಎಲ್ಲಿ ವೈರಸ್ ಬೇಗ ನಿಷ್ಕ್ರಿಯಗೊಳ್ಳುತ್ತವೆ

ಸ್ಟೇನ್‌ಲೆಸ್ ಸ್ಟೀಲ್, ಗಾಜುಗಳು ಮತ್ತು ಪ್ಲಾಸ್ಟಿಕ್‌ನಂತಹ ಇತರ ವಸ್ತುಗಳ ಮೇಲ್ಮೈಗಳಿಗಿಂತ ಚರ್ಮದ ಮೇಲ್ಮೈಗಳಲ್ಲಿ ಸಾರ್ಸ್- ಕೋವ್-2 ಮತ್ತು ಐಎವಿ ವೈರಸ್ ನ್ನು ಹೆಚ್ಚು ವೇಗವಾಗಿ ನಿಷ್ಕ್ರಿಯಗೊಳಿಸಬಹುದು ಎಂಬುದನ್ನು ಅಧ್ಯಯನ ಕಂಡುಹಿಡಿದಿದೆ.

English summary
SARS-CoV-2, the virus that causes COVID-19, remained viable on samples of human skin for about 9 hours, according to the study. In contrast, a strain of the influenza A virus (IAV) remained viable on human skin for about 2 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X