ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಈ ವಸ್ತುಗಳ ಮೇಲೆ 28 ದಿನಗಳ ಕಾಲ ಇರಬಲ್ಲದು

|
Google Oneindia Kannada News

ಬ್ರಿಸ್‌ಬ್ರೇನ್, ಅಕ್ಟೋಬರ್ 12:ಆಸ್ಟ್ರೇಲಿಯಾದ ರಾಷ್ಟ್ರೀಯ ವಿಜ್ಞಾನ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ, ಕೊವಿಡ್ 19ಗೆ ಕಾರಣವಾಗುವ ಕೊರೊನಾ ಸೋಂಕು 28 ದಿನಗಳ ಕಾಲ ಕೆಲವು ವಸ್ತುಗಳ ಮೇಲೆ ಇರಬಲ್ಲದು ಎಂದು ಸಾಬೀತಾಗಿದೆ.

ಬ್ಯಾಂಕ್‌ನೋಟುಗಳು ಹಾಗೂ ಫೋನ್‌ಗಳ ಮೇಲೆ ತಂಪಾದ ಪ್ರದೇಶದಲ್ಲಿ 28 ದಿನಗಳ ಕಾಲ ಇರಬಲ್ಲದು ಎಂಬುದು ತಿಳಿದುಬಂದಿದೆ.

ಸಿಎಸ್‌ಐಆರ್‌ಒ ರೋಗ ಸನ್ನದ್ಧತೆ ಕೇಂದ್ರದ ಸಂಶೋಧಕರು ಮೂರು ತಾಪಮಾನದಲ್ಲಿ ಕೊರೊನಾ ಸೋಂಕು ದೀರ್ಘ ಅವಧಿಯವರೆಗೆ ಬದುಕುಳಿಯುವ ಸಾಧ್ಯತೆಯನ್ನು ಕಂಡುಕೊಂಡಿದ್ದಾರೆ.

ಭಾರತದಲ್ಲಿ ಮತ್ತೆ 66,732 ಕೊರೊನಾ ಸೋಂಕಿತರು ಪತ್ತೆ ಭಾರತದಲ್ಲಿ ಮತ್ತೆ 66,732 ಕೊರೊನಾ ಸೋಂಕಿತರು ಪತ್ತೆ

ಕತ್ತಲೆ ಹಾಗೂ ತಂಪಿನ ವಾತಾವರಣದಲ್ಲಿ ಕೊರೊನಾ ಸೋಂಕು ಹೆಚ್ಚು ಹೊತ್ತು ಜೀವಿಸುತ್ತದೆ. ಹಾಗೆಯೇ ಹವಾಮಾನ ಬಿಸಿಯಾಗುತ್ತಿದ್ದಂತೆ ವೈರಸ್ ಬದುಕುಳಿಯುವಿಕೆ ಪ್ರಮಾಣ ಕೂಡ ಕಡಿಮೆಯಾಗುತ್ತದೆ.

20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಬದುಕಬಲ್ಲದು

20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಬದುಕಬಲ್ಲದು

20 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ಸಾರ್ಸ್ ಕೋವ್2 ಮೊಬೈಲ್ ಫೋನ್ ಸ್ಕ್ರೀನ್‌ನಲ್ಲಿ 28 ದಿನ ಬದುಕಬಲ್ಲದು. ಗ್ಲಾಸ್‌, ಸ್ಟೀಲ್, ಪ್ಲಾಸ್ಟಿಕ್ ಬ್ಯಾಂಕ್‌ನೋಟುಗಳಲ್ಲಿ ಹೆಚ್ಚು ದಿನ ಇರಬಲ್ಲದು.

30 ಡಿಗ್ರಿ ಸೆಲ್ಸಿಯಸ್‌ನಲ್ಲಿ ವೈರಸ್ ಜೀವಿತಾವಧಿ ಕ್ಷೀಣ

30 ಡಿಗ್ರಿ ಸೆಲ್ಸಿಯಸ್‌ನಲ್ಲಿ ವೈರಸ್ ಜೀವಿತಾವಧಿ ಕ್ಷೀಣ

ವಾತಾವರಣ 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶಕ್ಕೆ ತಿರುಗಿದರೆ ಕೊರೊನಾ ವೈರಸ್ ಜೀವಿತಾವಧಿ ಕ್ಷೀಣವಾಗುತ್ತಾ ಬರುತ್ತದೆ. 40 ಡಿಗ್ರಿ ಉಷ್ಣಾಂಶದಲ್ಲಿ 24 ಗಂಟೆಗಳ ಕಾಲ ವೈರಸ್ ಇರಬಲ್ಲದು.

ಚಳಿಗಾಲದಲ್ಲಿ ಕೊರೊನಾ ಸೋಂಕಿನ ತೀವ್ರತೆ ಹೆಚ್ಚು

ಚಳಿಗಾಲದಲ್ಲಿ ಕೊರೊನಾ ಸೋಂಕಿನ ತೀವ್ರತೆ ಹೆಚ್ಚು

ಚಳಿಗಾಲದಲ್ಲಿ ಕೊರೊನಾ ಸೋಂಕಿನ ತೀವ್ರತೆ ಹೆಚ್ಚಿರುತ್ತದೆ. ಸುಮಾರು 14 ದಿನಗಳ ಕಾಲ ಹತ್ತಿಯನ್ನು ವೈರಸ್ ಇರಬಹುದು. ಅತಿ ಹೆಚ್ಚು ಉಷ್ಣಾಂಶದಲ್ಲಿ 16 ಗಂಟೆಗಳ ಕಾಲ ಇರಲಿದೆ. ಆಸ್ಟ್ರೇಲಿಯಾದ ಟ್ರೆವರ್ ಡ್ರೂ ಅಧ್ಯಯನದಲ್ಲಿ ವೈರಸ್‌ನ ಮಾದರಿಯನ್ನು ವಿವಿಧ ವಸ್ತುಗಳ ಮೇಲೆ ಪರೀಕ್ಷಿಸಲಾಗುತ್ತಿತ್ತು.ಅತ್ಯಂತ ಸೂಕ್ಷ್ಮ ವಿಧಾನವನ್ನು ಬಳಸಿಕೊಂಡು ಜೀವಕೋಶಕ್ಕೆ ಸೋಂಕು ತಗುಲುವ ಕುರುಹನ್ನು ಕಂಡು ಹಿಡಿಯಲಾಗಿತ್ತು.

Recommended Video

ಮನೆ ಮುಂದೆ ಗಾಂಜಾ ಗಿಡ, ಖತರ್ನಾಕ್ ಕಳ್ಳರು | Oneindia Kannada
ಮನುಷ್ಯರಿಂದ ಮನುಷ್ಯರಿಗೆ ಹರಡುವ ಸೋಂಕು ಪರಿಣಾಮಕಾರಿ

ಮನುಷ್ಯರಿಂದ ಮನುಷ್ಯರಿಗೆ ಹರಡುವ ಸೋಂಕು ಪರಿಣಾಮಕಾರಿ

ವಸ್ತುಗಳಿಂದ ಸೋಂಕುನ ಹರಡುವುದಕ್ಕಿಂತ ನೇರವಾಗಿ ಮನುಷ್ಯರಿಂದಲೇ ಸೋಂಕು ಹರಡುವಿಕೆ ಹೆಚ್ಚು ಪರಿಣಾಮಕಾರಿ. ಮೊದಲು ಗಾಳಿಯಿಂದ ಕೊರೊನಾ ಸೋಂಕು ಹರಡುತ್ತದೆ ಎಂದು ಹೇಳಲಾಗಿತ್ತು. ಆದರೆ ಇದೀಗ ವಸ್ತುಗಳ ಮೇಲೆ ಕುಳಿತುಕೊಳ್ಳುವ ಹಾಗೂ ದೀರ್ಘಕಾಲದವರೆಗೆ ವಸ್ತುಗಳ ಮೇಲೆ ಇರುವ ವೈರಸ್‌ನಿಂದ ಸೋಂಕು ಹರಡುತ್ತದೆ ಎಂಬುದು ತಿಳಿದುಬಂದಿದೆ.

English summary
The coronavirus that causes Covid-19 can survive on items such as banknotes and phones for up to 28 days in cool, dark conditions, according to a study by Australia's national science agency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X