• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ರಿಟನ್‌ನಿಂದ ಕೊವಿಡ್ 19 ಲಸಿಕೆ ಡೇಟಾವನ್ನು ಕದ್ದಿಲ್ಲ ಎಂದ ರಷ್ಯಾ

|

ರಷ್ಯಾ ಹ್ಯಾಕರ್‌ಗಳು ಬ್ರಿಟನ್ನಿನ ಕೊವಿಡ್ 19 ಲಸಿಕೆ ಡೇಟಾವನ್ನು ಕದಿಯಲು ಯತ್ನಿಸುತ್ತಿದ್ದಾರೆ ಎಂದು ಬ್ರಿಟನ್ ಮಾಡಿರುವ ಆರೋಪವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಯುಕೆ ಸಚಿವರು ತಿಳಿಸಿದ್ದಾರೆ.

   Twitter Hackers ಮಾಡಿದ್ದೇನು , ಕದ್ದಿದ್ದೆಷ್ಟು ? | Oneindia Kannada

   ಭದ್ರತಾ ಸಚಿವ ಜೇಮ್ಸ್‌ ಬ್ರೋಕನ್ ಶೈರ್ ಈ ಕುರಿತು ಮಾತನಾಡಿದ್ದು, ರಷ್ಯಾದ ಹ್ಯಾಕರ್‌ಗಳು ವಿಶ್ವದಾದ್ಯಂತ ಔಷಧೀಯ ಸಂಸ್ಥೆಗಳಿಂದ ಕೊವಿಡ್ ಲಸಿಕೆ ಮತ್ತು ಚಿಕಿತ್ಸಾ ವಿಧಾನಗಳನ್ನು ಕದಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಬ್ರಿಟನ್‌ನ ರಾಷ್ಟ್ರೀಯ ಸೈಬರ್ ಭದ್ರತಾ ಕೇಂದ್ರ ಗುರುವಾರ ಹೇಳಿತ್ತು.

   ಆಗಸ್ಟ್‌ 15ಕ್ಕೆ ಭಾರತಕ್ಕೆ ದೊರೆಯಲಿದೆ ರಷ್ಯಾದ ಕೊರೊನಾ ಲಸಿಕೆ

   ಈ ಆರೋಪವನ್ನು ರಷ್ಯಾ ತಿರಸ್ಕರಿಸಿದೆ. ನಾವು ಯಾವುದೇ ಡೇಟಾವನ್ನು ಕದ್ದಿಲ್ಲ, ಕದಿಯುವ ಪ್ರಯತ್ನವನ್ನೂ ಮಾಡಿಲ್ಲ. ನಮ್ಮ ದೇಶಕ್ಕೆ ತೊಂದರೆ ಕೊಡಲು ಬ್ರಿಟನ್ ಪ್ರಯತ್ನಿಸುತ್ತಿದೆ, ಬ್ರಿಟನ್ ಆರೋಪಕ್ಕೆ ಯಾವುದೇ ಬಲವಾದ ಸಾಕ್ಷ್ಯಗಳಿಲ್ಲ ಎಂದಿದ್ದಾರೆ. ಆಗಸ್ಟ್ 15ರ ವೇಳೆಗೆ ರಷ್ಯಾದ ಕೊರೊನಾ ಲಸಿಕೆ ಭಾರತಕ್ಕೆ ದೊರೆಯಲಿದೆ.ದೇಶಿಯ ಕೊರೊನಾ ಲಸಿಕೆ ಕೊವಾಕ್ಸಿನ್​ ಕೂಡ ಆಗಸ್ಟ್​ 15ಕ್ಕೆ ಸಿದ್ಧವಾಗಲಿದೆ ಎಂದೇ ಬಿಂಬಿಸಲಾಗಿತ್ತು.

   ಆದರೆ, ಮೊದಲ ಹಂತದ ಕ್ಲಿನಿಕಲ್​ ಟ್ರಯಲ್​ ಈಗ ಆರಂಭವಾಗಿದೆ. ಹೀಗಾಗಿ ಸಿದ್ಧಗೊಳ್ಳಲು ಇನ್ನೂ ಕನಿಷ್ಠ ಮೂರು ತಿಂಗಳಾದರೂ ಬೇಕು. ನಂತರ ಎರಡನೇ ಹಂತ ಶುರುವಾಗಬೇಕಿದೆ. ನಿರೀಕ್ಷೆಗೂ ಮುನ್ನವೇ ಲಸಿಕೆ ಸಜ್ಜಾಗುತ್ತಿದೆ. ಸೆಪ್ಟೆಂಬರ್​ ಅಥವಾ ವರ್ಷಾಂತ್ಯಕ್ಕೆ ಲಭ್ಯವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆ ತಜ್ಞರಂತೂ ಮುಂದಿನ ವರ್ಷದ ಆರಂಭಕ್ಕೆ ಸಿದ್ಧವಾಗಬಹುದೆಂದು ಅಂದಾಜಿಸಿದ್ದರು.

   ಅಮೆರಿಕದ ಮಾಡೆರ್ನಾ ಹಾಗೂ ಬ್ರಿಟನ್ನಿನ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯಗಳ ಲಸಿಕೆಗಳು ಎರಡನೇ ಹಾಗೂ ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​ ನಡೆಸುತ್ತಿವೆ. ಈ ಪ್ರಕ್ರಿಯೆಗಳು ಮುಗಿಯಲು ಕೆಲ ತಿಂಗಳುಗಳು ಬೇಕು ಎನ್ನುವುದು ಕಂಪನಿಗಳ ವಾದವಾಗಿದೆ.

   English summary
   Attempts by Russian-backed hackers to steal COVID-19 vaccine research from Britain are "completely unacceptable" but have not done any damage, security minister James Brokenshire said on Friday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X