Donald Trump: ಡೊನಾಲ್ಡ್ ಟ್ರಂಪ್ ವಿರುದ್ಧ ರೊಚ್ಚಿಗೆದ್ದ ಚೀನಾ, ಶೇ. 245ರ ತೆರಿಗೆಗೆ ತಿರುಗೇಟು!
ಅಮೆರಿಕ & ಚೀನಾ ನಡುವಿನ ತೆರಿಗೆ ಮಹಾಯುದ್ಧ ಮತ್ತೊಂದು ಹಂತ ತಲುಪಿ, ಜಾಗತಿಕ ಮಟ್ಟದಲ್ಲಿ ಕೂಡ ಸದ್ದು ಮಾಡುತ್ತಿದೆ. ಡೊನಾಲ್ಡ್ ಟ್ರಂಪ್ ಮನಸ್ಸಿಗೆ ಬಂದಂತೆ ಟ್ಯಾಕ್ಸ್‌ನ ಹಾಕಿ ನಿಯಮ ಮೀರಿದ್ದಾರೆ ಎಂಬ ಆರೋಪ ಇದೆ. ಅದರಲ್ಲೂ ಚೀನಾ ವಿಚಾರದಲ್ಲಿ ಇದೇ ಡೊನಾಲ್ಡ್ ಟ್ರಂಪ್ ಭಾರಿ ದೊಡ್ಡ ಪ್ರಮಾಣದ ತೆರಿಗೆ ಹಾಕುತ್ತಾ, ನೇರವಾಗಿ ಟ್ಯಾಕ್ಸ್ ವಾರ್ ನಡೆಸುತ್ತಿದ್ದಾರೆ ಎಂಬ ಆರೋಪವನ್ನ ಚೀನಾ ಮಾಡುತ್ತಿದೆ. ಇಂತಹ ಸಮಯದಲ್ಲೇ ಮತ್ತೆ ಚೀನಾ ರಿಯಾಕ್ಷನ್ ಕೊಟ್ಟು, ಟ್ರಂಪ್ ವಿರುದ್ಧ ತೊಡೆತಟ್ಟಿದೆ.
ಟ್ರಂಪ್ ಅಧಿಕಾರಕ್ಕೆ ಬಂದಾಗಲೆಲ್ಲಾ ಏನಾದರೂ ಒಂದು ಕಿರಿಕ್ ಗ್ಯಾರಂಟಿ, ಅನ್ನೋ ಭಾರಿ ಗಂಭೀರ ಆರೋಪ ಇದೆ. 2016ರ ಸಮಯದಲ್ಲಿ ಮೊದಲ ಬಾರಿ ಅಧ್ಯಕ್ಷರಾಗಿದ್ದಾಗ ವೇಳೆಯೂ ಡೊನಾಲ್ಡ್ ಟ್ರಂಪ್ ಇದೇ ರೀತಿಯಾಗಿ ಕಿರಿಕ್ ಮಾಡಿಕೊಂಡು ದೊಡ್ಡ ಸದ್ದು ಮಾಡಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ತಮ್ಮ ಬುಡಕ್ಕೆ ತಾವೇ ಬೆಂಕಿ ಇಟ್ಟುಕೊಂಡ ರೀತಿ ಕಾಣುತ್ತಿದೆ. ಯಾಕಂದ್ರೆ ಅಮೆರಿಕ ಜೊತೆಗೆ ಉತ್ತಮವಾಗಿ ವ್ಯಾಪಾರ & ವಹಿವಾಟು ನಡೆಸುತ್ತಿದ್ದ ದೇಶಗಳ ವಿರುದ್ಧ ಭಾರಿ ತೆರಿಗೆ ಹೇರಿಕೆ ಮಾಡುವ ಘೋಷಣೆ ಹೊರಡಿಸಿ ಟ್ರಂಪ್ ತಲ್ಲಣ ಎಬ್ಬಿಸಿ ಗಮನ ಸೆಳೆದಿದ್ದಾರೆ. ಇದೇ ಸಮಯದಲ್ಲಿ ಚೀನಾ ಕೂಡ ಸೇಡಿಗೆ ಸೇಡು ಎಂದು ತೊಡೆಯನ್ನ ತಟ್ಟಿದೆ.

ಡೊನಾಲ್ಡ್ ಟ್ರಂಪ್‌ಗೆ ಚೀನಾ ಶಾಕ್?
ಚೀನಾ ಹಾಗೂ ಅಮೆರಿಕ ನಡುವೆ ದೊಡ್ಡ ಶತ್ರುತ್ವ ಇದ್ದು, ಅಮೆರಿಕ & ಚೀನಾದ ನಡುವೆ ಆಗಾಗ ತೆರಿಗೆ ಯುದ್ಧವು ನಡೆಯುತ್ತಲೇ ಬಂದಿದೆ. ಈ ಹಿಂದೆಯೂ, ಡೊನಾಲ್ಡ್ ಟ್ರಂಪ್ ಚೀನಾ ಜೊತೆ ತೆರಿಗೆ ಕಿರಿಕ್ ಮಾಡಿದ್ದರು. ಈಗ ಮತ್ತೊಮ್ಮೆ ಅದೇ ರೀತಿಯ ಫೈಟಿಂಗ್ ಶುರುವಾಗಿದ್ದು, ಚೀನಾ ಕೂಡ ಅಮೆರಿಕಗೆ ತಿರುಗೇಟು ನೀಡುವ ರೀತಿಯಲ್ಲಿ ಟ್ಯಾಕ್ಸ್ ಹಾಕುತ್ತಿದೆ. ಇದೆಲ್ಲವನ್ನ ನೋಡಿ ಮತ್ತಷ್ಟು ರೊಚ್ಚಿಗೆದ್ದಿರುವ ಡೊನಾಲ್ಡ್ ಟ್ರಂಪ್, ಬರೋಬ್ಬರಿ ಶೇಕಡಾ 245 ರಷ್ಟು ಗರಿಷ್ಠ ತೆರಿಗೆ ಹೇರಿಕೆ ಮಾಡುವ ಘೋಷಣೆ ಮಾಡಿದ್ದರು. ಅದಕ್ಕೆಲ್ಲಾ ಇದೀಗ ಉತ್ತರ ನೀಡಿದೆ ಚೀನಾ.
ಚೀನಾ ತೆರಿಗೆ ತಂತ್ರ ಏನು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿಕೆ ಮಾಡಿರುವ ಹೊಸ ತೆರಿಗೆ ನೀತಿ ಬಗ್ಗೆ ಚರ್ಚೆ ಮಾಡಲು ಜಾಗತಿಕವಾಗಿ 75ಕ್ಕೂ ಹೆಚ್ಚು ದೇಶಗಳನ್ನು ಚೀನಾ ಒಗ್ಗೂಡಿಸುತ್ತಿದೆ. ಪರಿಣಾಮ, ಡೊನಾಲ್ಡ್ ಟ್ರಂಪ್‌ಗೆ ಪಿತ್ತ ಇನ್ನಷ್ಟು ನೆತ್ತಿಗೇರಿದೆ. ಇಂತಹ ಸಮಯದಲ್ಲೇ, ಚೀನಾ ವಿರುದ್ಧ ಬರೋಬ್ಬರಿ ಶೇಕಡಾ 245 ರಷ್ಟು ಗರಿಷ್ಠ ತೆರಿಗೆ ಹೇರಿಕೆ ಮಾಡುವ ಘೋಷಣೆ ಮಾಡಿದ್ದಾರೆ ಟ್ರಂಪ್. ಇದೇ ವಿಚಾರವಾಗಿ ಚೀನಾ ಪ್ರತಿಕ್ರಿಯೆ ನೀಡಿದ್ದು, ಹೊಸ ವ್ಯಾಪಾರ ಒಪ್ಪಂದಗಳ ಬಗ್ಗೆ ಚರ್ಚಿಸಲು 75ಕ್ಕೂ ಹೆಚ್ಚು ದೇಶಗಳು ಸಿದ್ಧವಾಗಿವೆ. ಹೀಗಾಗಿಯೇ ಪ್ರತಿಕಾರದ ಸುಂಕವನ್ನ ಕುರಿತು ನಾವು ಚರ್ಚೆ ಮಾಡಿ ಕ್ರಮ ಕೈಗೊಳ್ಳಲಿದ್ದೇವೆ. ಇಂತಹ ವರ್ತನೆಗಳು ಸಹಿಸಲಾಗದು ಎಂದಿದೆ ಚೀನಾ.












Click it and Unblock the Notifications