ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಸೇನಾ ಮುಖ್ಯಸ್ಥನ ಸೇವಾವಧಿ ವಿಸ್ತರಣೆ ಸ್ವಾಗತಿಸಿದ ಚೀನಾ

|
Google Oneindia Kannada News

ಬೀಜಿಂಗ್, ಆಗಸ್ಟ್ 21:ಪಾಕ್ ಸೇನಾ ಮುಖ್ಯಸ್ಥನ ಸೇವಾವಧಿ 3 ವರ್ಷಗಳಿಗೆ ವಿಸ್ತರಣೆ ಮಾಡಿರುವ ಕ್ರಮವನ್ನು ಚೀನಾ ಸ್ವಾಗತಿಸಿದೆ.

ಪಾಕಿಸ್ತಾನ ಸೇನೆಯ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಚೀನಾ ಸರ್ಕಾರದ ಹಳೆಯ ಸ್ನೇಹಿತ. 58 ವರ್ಷದ ಬಾಜ್ವಾ 2016ರಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಶ್ ಅವರ ಅವಧಿಯಲ್ಲಿ ಸೇನೆಗೆ ಮುಖ್ಯಸ್ಥನಾಗಿ ನೇಮಕಗೊಂಡಿದ್ದರು.

ಪಾಕ್ ಸೇನಾ ಮುಖ್ಯಸ್ಥನ ಸೇವಾವಧಿ 3 ವರ್ಷ ವಿಸ್ತರಣೆ ಪಾಕ್ ಸೇನಾ ಮುಖ್ಯಸ್ಥನ ಸೇವಾವಧಿ 3 ವರ್ಷ ವಿಸ್ತರಣೆ

ಬಾಜ್ವ ರಾವಲ್‌ಪಿಂಡಿ ಕಮಾಂಡರ್‌ ಆಗಿದ್ದರು. ಪಾಕಿಸ್ತಾನ ಸೇನೆಯ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವ ಗೆ ಉಗ್ರ ಸಂಘಟನೆಯೊಂದಿಗೆ ನಿಕಟ ಸಂಪರ್ಕವಿದೆ ಎಂಬ ಅಘಾತಕಾರಿ ಅಂಶವನ್ನು ಪಾಕಿಸ್ತಾನದ ದೈನಿಕ ವರದಿ ಮಾಡಿತ್ತು.

China Welcomed The extension Of Pakistan Army Chief Term

ಹಫೀಝ್ ಸಯೀದ್'ನ ಉಗ್ರ ಸಂಘಟನೆಯಾದ ಜಮಾತುದ್ದಾವಾ ಸಂಘಟನೆ ಜತೆ ಬಾಜ್ವಾಗೆ ನಿಕಟ ಸಂಪರ್ಕವಿದೆ ಎಂದು ಪಾಕಿಸ್ತಾನದ ಪ್ರಮುಖ ದೈನಿಕವೊಂದು ವರದಿ ಮಾಡಿತ್ತು.

ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡಲಾಗಿದ್ದ ವಿಧಿ 370 ರದ್ದುಗೊಳಿಸಿದ್ದು, ಹಾಗೆಯೇ ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ. ಪಾಕಿಸ್ತಾನ ಹಾಗೂ ಭಾರತದ ನಡುವೆ ಸಂಬಂಧ ದುರ್ಬಲಗೊಂಡಿರುವ ಬೆನ್ನಲ್ಲೇ ಇಮ್ರಾನ್ ಖಾನ್ ಈ ರೀತಿಯ ತೀರ್ಮಾನ ತೆಗೆದುಕೊಂಡಿದ್ದಾರೆ.

English summary
China Welcomed The extension Of Pakistan Army Chief Qamar Javed Bajva's Term for 3 more years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X