ಭಾರತದಲ್ಲಿರುವ ಚೀನಿಯರು ದೇಶಕ್ಕೆ ಮರಳಬಹುದು ಎಂದ ಚೀನಾ

ನವದೆಹಲಿ, ಮೇ 26: ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಭಾರತದಲ್ಲಿರುವ ಚೀನಿಯರು ದೇಶಕ್ಕೆ ಮರಳಬಹುದು ಎಂದು ಚೀನಾ ಹೇಳಿದೆ.

Recommended Video

      ಕೊರೋನಾ ಬಂದ್ರೆ ಪುರುಷರಲ್ಲಿ ಸಂತಾನೋತ್ಪತ್ತಿ ಶಕ್ತಿ ನಿಷ್ಕ್ರಿಯ!! | Corona Virus Effects Male Fertility

      ಚೀನಾ ರಾಯಭಾರಿ ಕಚೇರಿಯಿಂದ ಒಂದು ಸಂದೇಶ ರವಾನೆಯಾಗಿದ್ದು, ಯಾರು ದೇಶಕ್ಕೆ ಮರಳಲು ಇಚ್ಛಿಸುತ್ತಾರೋ ಅವರು ಬರಬಹುದು. ತಮ್ಮ ಖರ್ಚಿನಲ್ಲಿ ತಾವು ಬರಬೇಕು, ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಲಾಗುವುದು ಎಂದಿದೆ.

      ಭಾರತದಲ್ಲಿ ವ್ಯಾಸಂಗ ಮಾಡುತ್ತಿರುವವರು, ಬಿಜಿನೆಸ್ ಟ್ರಿಪ್‌ಗೆಂದು ಬಂದವರು, ಪ್ರವಾಸಿಗರು ಸಂಕಷ್ಟದಲ್ಲಿದ್ದಾರೆ ಅವರನ್ನು ಕರೆದೊಯ್ಯಲು ವಿಮಾನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

      China To Repatriate Its Citizens From India

      ಚೀನಾಕ್ಕೆ ಮರಳುವವರಿಗಾಗಿ ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ಯಾರಿಗೆ ಕೊರೊನಾದ ಒಂದೂ ಗುಣಲಕ್ಷಣಗಳಿಲ್ಲವೋ ಅಂತವರು ಮಾತ್ರ ದೇಶಕ್ಕೆ ಮರಳಬಹುದಾಗಿದೆ. ಶೀತ, ಕೆಮ್ಮು, ಕಫ ಇಂತಹ ಯಾವುದೇ ಲಕ್ಷಣಗಳಿದ್ದರೂ ವಿಮಾನ ಹತ್ತಲು ಅವಕಾಶವಿಲ್ಲ.

      ಭಾರತದಲ್ಲಿ 24 ಗಂಟೆಗಳಲ್ಲಿ 6977 ಹೊಸ ಕೊರೊನಾವೈರಸ್ ಪ್ರಕರಣಗಳು ದಾಖಲಾಗಿವೆ. ಒಟ್ಟು 1.38 ಲಕ್ಷ ಸೋಂಕಿತರಿದ್ದಾರೆ. 4 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಒಂದೇ ದಿನದಲ್ಲಿ 154 ಮಂದಿ ಸಾವನ್ನಪ್ಪಿದ್ದಾರೆ.

      ದೇಶದಲ್ಲಿ ಇದೀಗ ಲಾಕ್‌ಡೌನ್ ಸಡಿಲ ಮಾಡಿದ್ದು, ವಾಹನಗಳು ಸಂಚರಿಸುತ್ತಿವೆ. ಕೊರೊನಾವೈರಸ್ ಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್ ನಗರದಲ್ಲಿ. ಅಲ್ಲಿಂದ 190 ದೇಶಗಳಿಗೆ ಹರಡಿತು. 54 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 3.4 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+