ಪಾಕಿಸ್ತಾನಿ ಕಾರ್ಮಿಕನನ್ನು ಉರಿಯುತ್ತಿದ್ದ ಕುಲುಮೆಗೆ ದೂಡಿದ ಚೀನಿ ಸೂಪರ್ ವೈಸರ್
ಲಾಹೋರ್, ಮೇ 22: ಪಾಕಿಸ್ತಾನಿ ಕಾರ್ಮಿಕನೊಬ್ಬನನ್ನು ಉರಿಯುತ್ತಿದ್ದ ಕುಲುಮೆಗೆ ದೂಡಿದ ಆರೋಪದಲ್ಲಿ ಚೀನಾದ ವ್ಯಕ್ತಿಯೊಬ್ಬನನ್ನು ಪಾಕಿಸ್ತಾನದಲ್ಲಿ ಬುಧವಾರ ಬಂಧಿಸಲಾಗಿದೆ. ಪಂಜಾಬ್ ಪ್ರಾಂತ್ಯದಲ್ಲಿ ಈ ಘಟನೆ ವರದಿ ಆಗಿದ್ದು, ಸಹ ಕೆಲಸಗಾರರು ತಮ್ಮ ಪ್ರತಿಭಟನೆ ದಾಖಲಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಸೂಚನೆಯನ್ನು ಸರಿಯಾಗಿ ಪಾಲಿಸಲಿಲ್ಲ ಎಂದು ಸಿಟ್ಟಿಗೆದ್ದ ಚೀನಾ ಮೂಲದ ಮೇಲ್ವಿಚಾರಕನು ಕಾರ್ಮಿಕನನ್ನು ಉರಿಯುತ್ತಿದ್ದ ಕುಲುಮೆಗೆ ನೂಕಿದ್ದಾನೆ. ತೀವ್ರವಾಗಿ ಗಾಯಗೊಂಡ ಕಾರ್ಮಿಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಾಕಿಸ್ತಾನಿ ಪೊಲೀಸರು ಆರೋಪಿಯನ್ನು ಬಂಧಿಸಿ, ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಕಾನೂನು ಪ್ರಕಾರವೇ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಪೊಲೀಸ್ ಅಧಿಕಾರಿ ಅಜರ್ ಇಕ್ರಂ ತಿಳಿಸಿದ್ದಾರೆ. ಕಾರ್ಮಿಕನ ಜತೆಗೆ ಹೀಗೆ ನಡೆದುಕೊಂಡಿದ್ದರಿಂದ ಸಿಟ್ಟಿಗೆದ್ದ ಇತರ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ಚೀನಿಯರು ಪಾಕಿಸ್ತಾನಿ ಹುಡುಗಿಯರನ್ನು ಮದುವೆಯಾಗಿ, ಚೀನಾಕ್ಕೆ ಕರೆದೊಯ್ದು ವೇಶ್ಯಾವಾಟಿಕೆ ಜಾಲಕ್ಕೆ ದೂಡುತ್ತಿದ್ದರು ಹಾಗೂ ಕಾನೂನುಬಾಹಿರ ಅಂಗಾಗ ಮಾರಾಟಕ್ಕೆ ಬಳಸುತ್ತಿದ್ದರು ಎಂಬ ಅಂಶವನ್ನು ಇತ್ತೀಚೆಗೆ ಪಾಕ್ ಪೊಲೀಸರು ಬಹಿರಂಗಗೊಳಿಸಿದ್ದರು.












Click it and Unblock the Notifications