• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದ ನೂತನ ಉಪಗ್ರಹ ಶಿಯಾನ್ 11 ಉಡಾವಣೆ ಪ್ರಯೋಗ ಯಶಸ್ವಿ

|
Google Oneindia Kannada News

ಬೀಜಿಂಗ್, ನವೆಂಬರ್ 25: ಚೀನಾದ ನೂತನ ಉಪಗ್ರಹ ಶಿಯಾನ್ 11 ಉಡಾವಣೆ ಪ್ರಯೋಗ ಯಶಸ್ವಿಯಾಗಿದೆ.

ಶಿಜಿಯಾನ್ ಎಂಬ ಚೀನಾದ ಉಪಗ್ರಹಗಳ ಮತ್ತೊಂದು ಸರಣಿಯನ್ನು ತಂತ್ರಜ್ಞಾನ ಪರಿಶೀಲನೆಗಾಗಿ ಬಳಸಲಾಗುತ್ತದೆ. ಇತ್ತೀಚಿನ ಶಿಜಿಯಾನ್ ಉಪಗ್ರಹ, ಶಿಜಿಯಾನ್ -21 ಅನ್ನು ಅಕ್ಟೋಬರ್‌ನಲ್ಲಿ ಉಡಾವಣೆ ಮಾಡಲಾಗಿತ್ತು. ಆದರೆ, ಹಿಂದಿನ ಶಿಯಾನ್ ಉಪಗ್ರಹ, ಶಿಯಾನ್ -10, ಯೋಜಿತ ಕಕ್ಷೆಗೆ ಯಶಸ್ವಿಯಾಗಿ ಉಡಾವಣೆಯಾದ ನಂತರ ಉದ್ದೇಶಿಸಿದಂತೆ ಕೆಲಸ ಮಾಡಲಿಲ್ಲ.

ಚೀನಾದ ಜೆಲಿನ್-1 ಗಾಫೆನ್ 02 ಸಿ ಉಪಗ್ರಹ ಕಕ್ಷೆ ತಲುಪುವಲ್ಲಿ ವಿಫಲಚೀನಾದ ಜೆಲಿನ್-1 ಗಾಫೆನ್ 02 ಸಿ ಉಪಗ್ರಹ ಕಕ್ಷೆ ತಲುಪುವಲ್ಲಿ ವಿಫಲ

ಬಾಹ್ಯಾಕಾಶಕ್ಕೆ ಕಳುಹಿಸುವ ಹೊಸ ಉಪಗ್ರಹದ ಪ್ರಯೋಗವನ್ನು ಚೀನಾ ಯಶಸ್ವಿಯಾಗಿ ಪೂರೈಸಿದೆ ಎಂದು ಆ ದೇಶದ ಅಧಿಕೃತ ಮಾಧ್ಯಮಗಳು ವರದಿ ಮಾಡಿವೆ.

Shiyan-11 satellite - ಮಂಗೋಲಿಯಾದ ಗೋಬಿ ಮರುಭೂಮಿಯಲ್ಲಿರುವ ಜಿಯುಕ್ವಾನ್‌ ಉಪಗ್ರಹ ಉಡಾವಣೆ ಕೇಂದ್ರದಲ್ಲಿ ಕುಯಿಝೌ-1ಎ ಉಪಗ್ರಹ ಉಡಾವಣೆ ವಾಹಕದ ಮೂಲಕ ಶಿಯಾನ್‌-11 ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ.

Quaizhou-1Aಅನ್ನು ವೇಗ, ಸಣ್ಣ ಗಾತ್ರದ ರಾಕೆಟ್ ಸರಣಿ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಚೀನಾ ಏರೋಸ್ಪೇಸ್ ಸೈನ್ಸ್ ಮತ್ತು ಇಂಡಸ್ಟ್ರಿ ಕಾರ್ಪೊರೇಷನ್ ವಿನ್ಯಾಸಗೊಳಿಸಿದೆ ಎಂದು ಹೇಳಾಗಿದೆ.

ಉಪಗ್ರಹವು ಅದರ ಪೂರ್ವನಿರ್ಧರಿತ ಕಕ್ಷೆ ಪ್ರವೇಶಿಸಿದೆ ಎಂದು ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್ (ಸಿಜಿಟಿಎನ್) ವರದಿ ಮಾಡಿದೆ. ಶಿಯಾನ್-11 ಅನ್ನು ಪರೀಕ್ಷೆಗಾಗಿ ನಿರ್ಮಿಸಲಾಗಿದೆ. ಆದರೆ, ಉಪಗ್ರಹದ ಇತ್ತೀಚಿನ ಕಾರ್ಯಾಚರಣೆಯ ಉದ್ದೇಶವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ ಎಂದು ಹೇಳಿದೆ.

ಪರೀಕ್ಷೆ ಉದ್ದೇಶಕ್ಕಾಗಿ ಈ ಉಪಗ್ರಹವನ್ನು ಅಭಿವೃದ್ಧಿಪಡಿಸಲಾಗಿದೆ ಎಂದಷ್ಟೇ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಇದೇ ಸರಣಿಯ ಶಿಯಾನ್ 10 ಉಪಗ್ರಹವನ್ನು ಕೆಲ ದಿನಗಳ ಹಿಂದೆ ಉಡಾವಣೆ ಮಾಡಲಾಗಿತ್ತು. ಯಶಸ್ವಿಯಾಗಿ ನಿರ್ದಿಷ್ಟ ಕಕ್ಷೆಗೆ ಸೇರಿಸಲಾಗಿದ್ದರೂ ತನ್ನ ನಿಗದಿತ ಕಾರ್ಯ ಮಾಡುವಲ್ಲಿ ವಿಫಲವಾಗಿತ್ತು.

ಶಿಯಾನ್ 11 ಎಂಬ ಉಪಗ್ರಹವನ್ನು ಹೊತ್ತ ಕುವಾಯಿಜೌ 1ಎ ರಾಕೆಟ್ ನಭಕ್ಕೆ ಚಿಮ್ಮಿ, ಪೂರ್ವ ನಿರ್ಧರಿತ ಭೂಕಕ್ಷೆಯಲ್ಲಿ ಅದನ್ನು ಸೇರಿಸಿತು. ಮಂಗೋಲಿಯಾದ ಗೋಬಿ ಮರುಭೂಮಿಯಲ್ಲಿರುವ ಜಿಯುಕ್ವಾನ್ ಉಪಗ್ರಹ ಉಡಾವಣೆ ಕೇಂದ್ರದಲ್ಲಿ ಈ ಕಾರ್ಯ ನೆರವೇರಿತು ಎಂದು ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್ ವರದಿ ಮಾಡಿದೆ.

English summary
China on Thursday successfully launched a new satellite into space for testing, the official media reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X