ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಕೊರೊನಾ ಲಸಿಕೆಯ ಸುರಕ್ಷತೆಯ ಕುರಿತು ಹೆಚ್ಚಿದ ಆತಂಕ

|
Google Oneindia Kannada News

ಬೀಜಿಂಗ್, ನವೆಂಬರ್ 02: ಚೀನಾದಿಂದಲೇ ಕೊರೊನಾವೈರಸ್ ಹುಟ್ಟು ಆರಂಭವಾಗಿದ್ದು, ಇದೀಗ ಚೀನಾ ಲಸಿಕೆಯ ಸುರಕ್ಷತೆಯ ಕುರಿತು ಹಲವು ಅನುಮಾನಗಳು ಎದ್ದಿವೆ.

ಚೀನಾದ ಕೊರೊನಾ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಮುಂದುವರೆದಿದ್ದು, ಲಸಿಕೆಯ ಸುರಕ್ಷತೆ ಕುರಿತಂತೆ ಪಶ್ಚಿಮಾತ್ಯ ರಾಷ್ಟ್ರಗಳು ಅನುಮಾನ ವ್ಯಕ್ತಪಡಿಸಿವೆ.

 ಈ ಸಂಭಾವ್ಯ ಲಸಿಕೆಯಿಂದ ಕೊರೊನಾ ಸೋಂಕಿತರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳ ಈ ಸಂಭಾವ್ಯ ಲಸಿಕೆಯಿಂದ ಕೊರೊನಾ ಸೋಂಕಿತರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳ

ಜಾಗತಿಕವಾಗಿ ಚೀನಾದ ಕೊರೊನಾ ವೈರಸ್ ಲಸಿಕೆಗಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗಿದೆ. ಈ ನಡುವೆ, ಜಗತ್ತಿನಾದ್ಯಂತ ಸಂಶೋಧಕರು ಅಭೂತಪೂರ್ವ ವೇಗದಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಲಕ್ಷಾಂತರ ಜನರ ಸಾವಿಗೆ ಕಾರಣವಾಗಿರುವ ಕೊವಿಡ್ 19ನ್ನು ಅಂತ್ಯಗಾಣಿಸುವ ಅಗತ್ಯವಿದೆ.

China’s Race To Find Covid Vaccine First Raises Safety Questions

ಈಗಾಗಲೇ ಚೀನಾದಲ್ಲಿ ಕೆಲ ಲಸಿಕೆಗಳನ್ನು ತುರ್ತು ಬಳಕೆಗೆ ವಿತರಣೆ ಮಾಡಲಾಗಿದೆ. ಆದರೆ ಲಸಿಕೆಯಪರಿಣಾಮಗಳ ಬಗ್ಗೆ ಚೀನಾ ಮಾಹಿತಿ ನೀಡದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ವಿವಿಧ ರಾಷ್ಟ್ರಗಳು ಹೇಳಿವೆ.

ಈಗಾಗಲೇ ಬ್ರಿಟನ್‌ನ ಆಸ್ಟ್ರಾಜೆನಕಾ ಹಾಗೂ ಅಮೆರಿಕದ ಜಾನ್ಸನ್ ಆಂಡ್ ಜಾನ್ಸನ್ ಕಂಪನಿಯ ಲಸಿಕೆಗಳು ಪ್ರಯೋಗದಲ್ಲಿ ಸಮಸ್ಯೆ ಉಂಟಾಗಿ ತಾತ್ಕಾಲಿಕವಾಗಿ ಪ್ರಯೋಗ ನಿಲ್ಲಿಸಿತ್ತು. ಆದರೆ ಚೀನಾ ಲಸಿಕೆಗಳಲ್ಲಿ ಸಮಸ್ಯೆ ಉಂಟಾಗಿರುವ ಬಗ್ಗೆ ಇದುವರೆಗೂ ವರದಿಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ.

English summary
Chinese companies have made a seemingly unstoppable push to the front of the race for a coronavirus vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X