ಚೀನಾದಲ್ಲಿ ಮುಖವಾಡ ಹೊತ್ತು ಹೊಸ ಲಕ್ಷಣಗಳೊಂದಿಗೆ ಬಂದ ಕೊರೊನಾವೈರಸ್

ಬೀಜಿಂಗ್, ಮೇ 21: ವಿಶ್ವದಾದ್ಯಂತ ಲಕ್ಷಾಂತರ ಮಂದಿ ಸಾವಿಗೆ ಕಾರಣವಾಗಿದ್ದ ಮಾರಣಾಂತಿಕ ಕೊರೊನಾವೈರಸ್ ಇದೀಗ ಹೊಸ ಮುಖವಾಡ ಹೊತ್ತು ಬೇರೆ ಲಕ್ಷಣಗಳೊಂದಿಗೆ ಬಂದಿದೆ.

Recommended Video

      ಕೊರೊನಾ ನಡುವೆ ಕ್ರಿಕೆಟ್ ಆಡಲು ಶ್ರೀಲಂಕಾಕ್ಕೆ ಟೀಂ ಇಂಡಿಯಾ ಪ್ರವಾಸ ?? | Oneindia Kannada

      ಚೀನಾದ ಈಶಾನ್ಯ ಪ್ರದೇಶದ ರೋಗಿಗಳಲ್ಲಿ ಕೊರೊನಾ ವೈರಸ್ ಹೊಸ ರೂಪ ತಾಳಿರುವುದು ಗೋಚರವಾಗಿದೆ.ಕೊರೊನಾ ವೈರಸ್ 2019ರ ಡಿಸೆಂಬರ್‌ನಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಒಟ್ಟು 3 ಲಕ್ಷಕ್ಕೂ ಹೆಚ್ಚು ಮಂದಿಯ ಪ್ರಾಣವನ್ನು ಕಸಿದಿದೆ.

      ಚೀನಾದಲ್ಲಿ ಕೊರೊನಾವೈರಸ್ ಹಾವಳಿ ಕಡಿಮೆಯಾದರೂ ವಿಶ್ವದಾದ್ಯಂತ ಸುಮಾರು 190ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ರುದ್ರನರ್ತನ ಇನ್ನೂ ಮುಂದುವರೆದಿದೆ. ಅಮೆರಿಕದಲ್ಲಿ 90 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

      ಬಹು ಅಂಗಾಂಗಗಳ ಮೇಲೆ ಪರಿಣಾಮ

      ಬಹು ಅಂಗಾಂಗಗಳ ಮೇಲೆ ಪರಿಣಾಮ

      ಈಶಾನ್ಯ ಚೀನಾದ ರೋಗಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಹು ಅಂಗಾಂಗಗಳ ಮೇಲೆ ಪರಿಣಾಮ ಬೀರುತ್ತಿದೆ. ಈ ಮೊದಲು ಕೇವಲ ಶ್ವಾಸಕೋಶಗಳಿಗೆ ಹಾನಿಯಾಗಿರುವುದನ್ನು ಎಲ್ಲರೂ ಗಮನಿಸಿದ್ದಾರೆ. ಇದೀಗ ಹೊಸ ರೂಪಕ್ಕೂ ರಷ್ಯಾಗೂ ಸಂಬಂಧವಿದೆ ಎಂದು ನಂಬಲಾಗಿದೆ. ಯುರೋಪಿನಲ್ಲಿ ಕೊರೊನಾವೈರಸ್ ಹೆಚ್ಚು ಪರಿಣಾಮವನ್ನು ಬೀರಿತ್ತು. ಯುರೋಪಿನ ಅನುವಂಶಿಕ ಅನುಕ್ರಮವು ಈಶಾನ್ಯ ಚೀನಾದ ಅನುಕ್ರಮಕ್ಕೆ ಹೊಂದಾಣಿಕೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

      ವಿಜ್ಞಾನಿಗಳಿಗೇ ಅರ್ಥವಾಗದ ಸಂಗತಿಗಳಿವೆ

      ವಿಜ್ಞಾನಿಗಳಿಗೇ ಅರ್ಥವಾಗದ ಸಂಗತಿಗಳಿವೆ

      ಕೊರೊನಾ ವೈರಸ್ ತನ್ನ ರೂಪ ಬದಲಾವಣೆ ಮಾಡಿರುವ ಬಗ್ಗೆ ವಿಜ್ಞಾನಿಗಳು ಈವರೆಗೆ ಸಂಪೂರ್ಣವಾಗಿ ಅರ್ಥಮಾಡಿಕೊಂಡಿಲ್ಲ. ಆದರೆ ಚೀನಾ ವೈದ್ಯರು ವುಹಾನ್‌ಗಿಂತ ಈಶಾನ್ಯ ಚೀನಾದ ರೋಗಿಗಳಲ್ಲಿ ರೂಪ ಬದಲಾವಣೆ ಲಕ್ಷಣಗಳು ಗೋಚರಿಸಿವೆ ಎಂದು ಹೇಳಿದ್ದಾರೆ.

      ರೋಗದ ಯಾವ ಲಕ್ಷಣವೂ ಗೋಚರಿಸುವುದಿಲ್ಲ

      ರೋಗದ ಯಾವ ಲಕ್ಷಣವೂ ಗೋಚರಿಸುವುದಿಲ್ಲ

      ದೀರ್ಘಕಾಲದ ವರೆಗೆ ರೋಗಿಗಳಲ್ಲಿ ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲ. ಶುಲನ್, ಜಿಲಿನ್ ಮತ್ತು ಶೆಂಗ್ಯಾಂಗ್ ಸುತ್ತ ಸೋಂಕು ಹರಡಿದ್ದು, ಕಳೆದ 2 ವಾರಗಳಿಂದ 46 ಪ್ರಕರಣಗಳು ಬೆಳಕಿಗೆ ಬಂದಿವೆ. ಎರಡು ಪ್ರಾಂತ್ಯಗಳಲ್ಲಿ ಸುಮಾರು 100 ಮಿಲಿಯನ್‌ಗೂ ಅಧಿಕ ಮಂದಿ ವಾಸವಿದ್ದು ಮತ್ತೊಮ್ಮೆ ಸೋಂಕು ತಡೆಗಟ್ಟಲು ಲಾಕ್‌ಡೌನ್ ಮರು ಸ್ಥಾಪನೆ ಮಾಡಲಾಗಿದೆ.

      ಒಂದರಿಂದ ಎರಡು ವಾರಗಳಲ್ಲಿ ಯಾವುದೇ ಲಕ್ಷಣಗಳಿಲ್ಲ

      ಒಂದರಿಂದ ಎರಡು ವಾರಗಳಲ್ಲಿ ಯಾವುದೇ ಲಕ್ಷಣಗಳಿಲ್ಲ

      ವುಹಾನ್‌ನಲ್ಲಿ ರೋಗ ಲಕ್ಷಣ ನಿರ್ಣಯಿಸಲು ಒಂದರಿಂದ ಎರಡು ವಾರಗಳು ತೆಗೆದುಕೊಳ್ಳುತ್ತಿತ್ತು. ಆದರೆ ಅದಕ್ಕಿಂತ ಹೆಚ್ಚಿನ ಕಾಲವನ್ನು ಈಶಾನ್ಯ ಚೀನಾದ ರೋಗಿಗಳಲ್ಲಿ ತೆಗೆದುಕೊಳ್ಳುತ್ತಿದೆ. ರೋಗ ನಿರ್ಣಯ ವಿಳಂಬದಿಂದಾಗಿ ರೋಗ ಹರಡುವುದನ್ನು ತಡೆಯಲು ತುಂಬಾ ಕಷ್ಟವಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+