China Plane Crash: ಚೀನಾ ವಿಮಾನ ಪತನ: ಇನ್ನೂ ಸಿಕ್ಕಿಲ್ಲ ಬದುಕುಳಿದವರ ಸುಳಿವು
ಬೀಜಿಂಗ್, ಮಾರ್ಚ್ 22: ಸುಮಾರು 132 ಜನರಿದ್ದ ಚೀನಾದ ವಿಮಾನವು ದಕ್ಷಿಣ ಗುವಾಂಗ್ಕ್ಸಿ ಪ್ರಾಂತ್ಯದಲ್ಲಿ ಸೋಮವಾರ ಪತನಗೊಂಡಿದೆ. ಕುನ್ಮಿಂಗ್‌ನಿಂದ ಗುವಾಂಗ್‌ಝೌಗೆ ಹಾರಿದ ಚೀನಾ ಈಸ್ಟರ್ನ್ ಏರ್‌ಲೈನ್ಸ್‌ನ ಬೋಯಿಂಗ್ 737 ವಿಮಾನವು ವುಝೌ ನಗರದ ಬಳಿಯ ಟೆಂಗ್‌ಕ್ಸಿಯಾನ್ ಕೌಂಟಿಯಲ್ಲಿ ಪತನಗೊಂಡಿದೆ ಎಂದು ಚೀನಾದ ನಾಗರಿಕ ವಿಮಾನಯಾನ ಆಡಳಿತವು ಹೇಳಿಕೆಯಲ್ಲಿ ತಿಳಿಸಿದೆ. ಪ್ರಸ್ತುತ ರಕ್ಷಣಾ ಕಾರ್ಯಚರಣೆ ನಡೆಯುತ್ತಿದ್ದರೂ ಇನ್ನೂ ಕೂಡಾ ಬದುಕುಳಿದವರ ಬಗ್ಗೆ ಯಾವುದೇ ಸುಳಿವು ದೊರಕ್ಕಿಲ್ಲ.
ರಕ್ಷಕರ ತಂಡಗಳು ದೂರದ ಪರ್ವತ ಪ್ರದೇಶದ ಗುವಾಂಗ್ಕ್ಸಿ ಜುವಾಂಗ್ ಸ್ವಾಯತ್ತ ಪ್ರದೇಶದ ಅರಣ್ಯ ಪ್ರದೇಶಗಳಲ್ಲಿ ರಕ್ಷಣೆ ಕಾರ್ಯಚರಣೆ, ಹುಡುಕಾಟದಲ್ಲಿ ತೊಡಗಿದ್ದಾರೆ. ಆದರೆ ಈವರೆಗೂ ಬದುಕುಳಿದವರ ಯಾವುದೇ ಸುಳಿವು ಕೂಡಾ ಪತ್ತೆಯಾಗಿಲ್ಲ. ಈ ನಡುವೆ ಎಲ್ಲಾ ಜನರು ಸಾವನ್ನಪ್ಪಿರಬಹುದು ಎಂಬ ಬಗ್ಗೆ ಸುದ್ದಿಯಾಗುತ್ತಿದೆ.
ಸೋಮವಾರ ಮಧ್ಯಾಹ್ನ, 133 ಜನರೊಂದಿಗೆ ಚೀನಾದ ವಿಮಾನವು ದಕ್ಷಿಣ ಪ್ರಾಂತ್ಯದ ಗುವಾಂಗ್ಸಿಯಲ್ಲಿ ಪತನಗೊಂಡಿದೆ ಎಂದು ಸರ್ಕಾರಿ ಮಾಧ್ಯಮವು ಮೊದಲು ವರದಿ ಮಾಡಿದೆ. ಈ ವಿಮಾನ ದುರಂತದಿಂದಾಗಿ ಪರ್ವತದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕುನ್ಮಿಂಗ್‌ನಿಂದ ಗುವಾಂಗ್‌ಝೌಗೆ ಚೀನಾ ಪೂರ್ವ ವಿಮಾನವು ಮಧ್ಯಾಹ್ನ 1:11 ಕ್ಕೆ ಹೊರಟಿತು. ಮಧ್ಯಾಹ್ನ 3:05ಕ್ಕೆ ಲ್ಯಾಂಡ್ ಆಗಬೇಕಿತ್ತು ಎಂದು ಡೇಟಾ ತೋರಿಸಿದೆ. ಸ್ಥಳೀಯ ಪೊಲೀಸರಿಗೆ ಮೊದಲು 2:30 ರ ಸುಮಾರಿಗೆ ಅಪಘಾತದ ಬಗ್ಗೆ ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ. ಈ ವಿಮಾನದಲ್ಲಿರುವ 132 ಜನರ ಪೈಕಿ 23 ಪ್ರಯಾಣಿಕರು ಮತ್ತು ಒಂಬತ್ತು ಸಿಬ್ಬಂದಿಗಳು ಆಗಿದ್ದಾರೆ.

ಈ ವಿಮಾನ ದುರಂತ ನಡೆದದ್ದು ಹೇಗೆ?
ಅಧಿಕೃತ ಮಾಧ್ಯಮಗಳ ಪ್ರಕಾರ, ವಿಮಾನವು ಪರ್ವತ ಪ್ರದೇಶದ ಮೇಲೆ ಇಳಿದು ಪತನವಾಗಿದೆ. ಸ್ಥಳೀಯರು ತಮ್ಮ ಫೋನ್‌ಗಳಲ್ಲಿ ಚಿತ್ರೀಕರಿಸಿದ ದೃಶ್ಯಾವಳಿಗಳು ಮಾಡಿದ್ದಾರೆ. ಅಪಘಾತದ ಪ್ರದೇಶವಾದ ಬೃಹತ್ ಪರ್ವತದಲ್ಲಿ ಈಗ ಬೆಂಕಿ ಆವರಿಸಿದೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಫ್‌ಎ) ಟ್ವಿಟ್ಟರ್ ಮೂಲಕ ತನಿಖೆಯ ಪ್ರಯತ್ನಗಳಲ್ಲಿ ಸಹಾಯ ಮಾಡಲು ಸಿದ್ಧ ಎಂದು ಹೇಳಿದೆ.
ಚೀನಾದಲ್ಲಿ ನಡೆದಿರುವ ವಿಮಾನ ಪತನಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆತಂಕ ವ್ಯಕ್ತಪಡಿಸಿದ್ದು, ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ವಿಮಾನ ಪತನಗೊಂಡಿರುವ ಸ್ಥಳಕ್ಕೆ ತುರ್ತು ರಕ್ಷಣಾ ಸಿಬ್ಬಂದಿಯು ತೆರಳಿದ್ದು, ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಚೀನಾದ ವಿಮಾನಯಾನ ಸಂಸ್ಥೆಯು ತಿಳಿಸಿದೆ.
ಇದು 6 ವರ್ಷ ಹಳೆಯ ಬೋಯಿಂಗ್ 737-800 ಎನ್‌ಜಿ ವಿಮಾನವಾಗಿದ್ದು, ಒಟ್ಟು 132 ಮಂದಿ ಪ್ರಯಾಣಿಸುತ್ತಿದ್ದರು. ಅದರಲ್ಲಿ 123 ಪ್ರಯಾಣಿಕರಾಗಿದ್ದರೆ, 9 ಸಿಬ್ಬಂದಿ ಆಗಿದ್ದರು. ಚೀನಾದಲ್ಲಿ ನಡೆದಿರುವ ವಿಮಾನ ಪತನಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆತಂಕ ವ್ಯಕ್ತಪಡಿಸಿದ್ದು, ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಎಂದು ವರದಿ ಆಗಿದೆ.
ಪರ್ವತನದಲ್ಲಿನ ಬೆಂಕಿಯ ಕಾರಣದಿಂದಾಗಿ ಚೀನಾದ ಗುವಾಂಗ್ಕ್ಸಿ ಪ್ರದೇಶದ ವುಝೌ ನಗರದ ಸಮೀಪವಿರುವ ಗ್ರಾಮೀಣ ಭಾಗದಲ್ಲಿ ವಿಮಾನ ಪತನಗೊಂಡಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿದೆ. ಚೀನಾದಲ್ಲಿ ಪತನಗೊಂಡಿರುವ ವಿಮಾನವು ಹಳೆ ತಲೆಮಾರಿನದ್ದಾಗಿದೆ. ಇದು ಹೊಸ ತಲೆಮಾರಿನ ಬೋಯಿಂಗ್ ಮ್ಯಾಕ್ಸ್ ಜೆಟ್ ಆಗಿರಲಿಲ್ಲ. ಈ ಹಿಂದಿನ ನಡೆದ ವಿಮಾನ ಅಪಘಾತಗಳಲ್ಲಿ ಇಂಥದ್ದೇ ಮಾದರಿಯ ವಿಮಾನಗಳಿದ್ದವು. ಇಂಡೋನೇಷ್ಯಾ ಮತ್ತು ಇಥಿಯೋಪಿಯಾದಲ್ಲಿ ಸಂಭವಿಸಿದ ಮಾರಣಾಂತಿಕ ಅಪಘಾತಗಳಿಗೆ ಇದೇ ಹಳೆ ಮಾದರಿ ವಿಮಾನಗಳು ಕಾರಣವಾಗಿದ್ದವು ಎಂದು ವರದಿ ಉಲ್ಲೇಖ ಮಾಡಿದೆ.
ಕಳೆದೊಂದು ದಶಕದಲ್ಲಿ ಇಡೀ ಜಗತ್ತಿನಲ್ಲಿಯೇ ವಿಮಾನಯಾನ ಉದ್ಯಮದ ಸುರಕ್ಷತೆಯಲ್ಲಿ ಚೀನಾ ಅತ್ಯುತ್ತಮ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ವಿಮಾನಯಾನ ಸುರಕ್ಷತೆ ನೆಟ್‌ವರ್ಕ್ ಪ್ರಕಾರ, ಚೀನಾದ ಕೊನೆಯ ಮಾರಣಾಂತಿಕ ಜೆಟ್ ಅಪಘಾತವು 2010 ರಲ್ಲಿ ಸಂಭವಿಸಿತ್ತು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications