ಭಾರತದ ವಿರುದ್ಧ ಚೀನಾದ ಕುತಂತ್ರ, ಕಾಶ್ಮೀರ ಕುರಿತು ಪಾಕ್‌ಗೆ ಬೆಂಬಲ

ಪಾಕಿಸ್ತಾನ ಹಾಗೂ ಚೀನಾ ಯಾವುದಾದರೂ ಒಂದು ರೀತಿಯಲ್ಲಿ ಭಾರತವನ್ನು ಕೆಣಕುತ್ತಲೇ ಇರುತ್ತವೆ.
ಕಾಶ್ಮೀರವನ್ನು ತನ್ನದಾಗಿಸಿಕಿಕೊಳ್ಳುವ ಹಗಲುಗನಸು ಕಾಣುತ್ತಿರುವ ಪಾಕಿಸ್ತಾನಕ್ಕೆ ಚೀನಾವು ಬೆಂಬಲವನ್ನು ಸೂಚಿಸಿದೆ. ಎರಡೂ ದೇಶಗಳು ಕಾಶ್ಮೀರ ವಿಚಾರವಾಗಿ ಒಂದಾಗಿ ಕತ್ತು ಮಸೆಯುತ್ತಿವೆ.

60ಬಿಲಿಯನ್ ಡಾಲರ್ ಸಿಪಿಇಸಿ ಹೂಡಿಕೆ ಕಾರ್ಯಕ್ರಮದಲ್ಲಿ ಚೀನಾ, ಪಾಕಿಸ್ತಾನದೊಂದಿಗೆ ನಿಕಟ ಸಹಕಾರದ ವಾಗ್ದಾನ ನೀಡಿದೆ. ಕಾಶ್ಮೀರ ಸಮಸ್ಯೆಯನ್ನು ಸರಿಯಾಗಿ ಮತ್ತು ಶಾಂತಿಯುತವಾಗಿ ಪರಿಹರಿಸಲು ಕರೆ ನೀಡಿದೆ. ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಬಹುದಾದ ಯಾವುದೇ ಏಕಪಕ್ಷೀಯ ಕ್ರಮಗಳನ್ನು ವಿರೋಧಿಸುತ್ತದೆ ಎಂದು ಅದು ಹೇಳಿದೆ.

ಚೀನಾಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭೇಟಿ ನೀಡಿದ್ದಾರೆ, ನಾಲ್ಕು ದಿನಗಳ ಚೀನಾ ಪ್ರವಾಸ ಕೈಗೊಂಡಿರುವ ಇಮ್ರಾನ್, ಮಕಾಡೆ ಮಲಗಿರುವ ತಮ್ಮ ದೇಶದ ಆರ್ಥಿಕತೆಯ ಚೇತರಿಕೆಗೆ ಚೀನಾದ ಸಹಾಯಕ್ಕೆ ಕೈವೊಡ್ಡಿ ನಿಂತಿದೆ.

China, Pakistan Hit Out At Unilateral Kashmir Moves

ಈ ಕುರಿತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜತೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾತುಕತೆ ನಡೆಸಿದ್ದಾರೆ. ಇದರ ಜತೆಗೆ ಚೀನಾ-ಪಾಕ್ ಎಕನಾಮಿಕ್ ಕಾರಿಡಾರ್‌ನ ಎರಡನೇ ಹಂತಕ್ಕೆ ಚಾಲನೆ ನೀಡುವ ಒಪ್ಪಂದಕ್ಕೂ ರಾಷ್ಟ್ರಗಳು ಸಹಿ ಹಾಕಿವೆ.

ಪಾಕಿಸ್ತಾನ ಮತ್ತು ಚೀನಾದ ಹಿಂದಿನ ಜಂಟಿಹೇಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಉಲ್ಲೇಖಗಳನ್ನು ಭಾರತ ಬಲವಾಗಿ ತಿರಸ್ಕರಿಸಿತ್ತು. ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಖ್‌ ತನ್ನ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಮತ್ತು ಮುಂದೆಯೂ ಇರುತ್ತದೆ ಎಂದು ಪ್ರತಿಪಾದಿಸಿತ್ತು.

ಒಟ್ಟಾರೆ ಕಾಶ್ಮೀರ ವಿಚಾರವನ್ನೇ ಇಟ್ಟುಕೊಂಡು ತನ್ನ ಬೆಳೆ ಬೇಯಿಸಿಕೊಳ್ಳಲುಚೀನಾ ಹುನ್ನಾರ ನಡೆಸುತ್ತಿದೆ, ಹೇಗಾದರೂ ಮಾಡಿ ಹಣ ಕೊಟ್ಟರೆ ಸಾಕು ಎಂದು ಪಾಕಿಸ್ತಾನ ಡ್ರ್ಯಾಗನ್ ದೇಶದ ಹಿಂದೆ ಅಲೆಯುತ್ತಿದೆ.

ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿರುವ ಚೀನಾ ಇದೀಗ ಮತ್ತೆ ತನ್ನ ಹಳೆ ವರಸೆಯನ್ನು ಮುಂದುವರೆಸಿದೆ. ಕಾಶ್ಮೀರ ವಿಚಾರದಲ್ಲಿ ಮತ್ತೆ ಮೂಗು ತೂರಿಸಿದೆ.

ಇನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ , ತಮ್ಮ ದೇಶದ ಖಜಾನೆಯಲ್ಲಿ ಬಿಡಿಗಾಸು ಇಲ್ಲದಿದ್ದರೂ ಭಾರತದ ಬಗ್ಗೆ ಚೀನಾದ ಅಧ್ಯಕ್ಷರ ಮುಂದೆ ಕೆಲವು ದೂರುಗಳನ್ನು ಹೇಳಿದ್ದಾರೆ ಎನ್ನಲಾಗಿದೆ.

Recommended Video

      Rohit Sharma ಪ್ರಕಾರ ತಂಡದವರ ಈ ಒಂದರ ಕಡೆ ಗಮನ ಹರಿಸಬೇಕು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+