• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ನಿರ್ಲಕ್ಷಿಸಿದ್ದಕ್ಕೆ ಈಗೇನಾಯ್ತು ನೋಡಿ ಟ್ರಂಪ್: ಚೀನಾ ಅಪಹಾಸ್ಯ

|

ಬೀಜಿಂಗ್, ಅಕ್ಟೋಬರ್ 05: ಕೊರೊನಾ ಸೋಂಕನ್ನು ಗಂಭೀರವಾಗಿ ಪರಿಗಣಿಸದೆ ಇದ್ದಿದ್ದಕ್ಕೆ ಈಗ ನಿಮ್ಮ ಪರಿಸ್ಥಿತಿ ಏನಾಗಿದೆ ನೋಡಿ ಎಂದು ಚೀನಾ ಅಪಹಾಸ್ಯ ಮಾಡಿದೆ.

ಚೀನಾದ ಲ್ಯಾಬ್‌ನಿಂದಲೇ ಕೊರೊನಾ ಸೋಂಕು ಹರಡಿದ್ದು ಎಂದು ಆರೋಪಿಸುತ್ತಾ ಸೋಂಕನ್ನು ನಿರ್ಲಕ್ಷಿಸಿದ್ದಕ್ಕೆ ಈಗ ಅವರೇ ಚಿಕಿತ್ಸೆ ಪಡೆಯುವಂತಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿಗೆ ಕೊರೊನಾ ಸೋಂಕು

ಇದೀಗ ಡೊನಾಲ್ಡ್ ಟ್ರಂಪ್ ಅವರ ಆಪ್ತ ಸಹಾಯಕರಿಗೆ ಬಂದಂತಹ ಸೋಂಕು ಡೊನಾಲ್ಡ್ ಟ್ರಂಪ್ ಅವರಿಗೂ ತಗುಲಿದೆ. ಅವರು ಮಿಲಿಟರಿ ಮೆಡಿಕಲ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 ಟ್ರಂಪ್ ಗುಣವಾಗಲಿ ಎಂದು ಕ್ಸಿ ಜಿನ್‌ಪಿಂಗ್ ಹಾರೈಕೆ

ಟ್ರಂಪ್ ಗುಣವಾಗಲಿ ಎಂದು ಕ್ಸಿ ಜಿನ್‌ಪಿಂಗ್ ಹಾರೈಕೆ

ಟ್ರಂಪ್ ದಂಪತಿ ಕೊರೊನಾ ಸೋಂಕಿನಿಂದ ಶೀಘ್ರ ಗುಣಮುಖರಾಗಲಿ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾರೈಸಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

 ವಿದೇಶಾಂಗ ಸಚಿವಾಲಯದ ವಕ್ತಾರ ಹವಾ ಚುನೈಂಗ್ ಟ್ವೀಟ್

ವಿದೇಶಾಂಗ ಸಚಿವಾಲಯದ ವಕ್ತಾರ ಹವಾ ಚುನೈಂಗ್ ಟ್ವೀಟ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕೊರೊನಾ ಸೋಂಕು ತಗುಲಿದೆ ಎನ್ನುವ ಸುದ್ದಿ ಕೇಳಿ ಆತಂಕವಾಯಿತು, ಆಷ್ಟು ಬೇಗ ಅವರು ಗುಣಮುಖರಾಗಲಿ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಹವಾ ಚುನೈಂಗ್ ಟ್ವೀಟ್ ಮಾಡಿದ್ದಾರೆ.

 ಟ್ರಂಪ್ ಸೋಂಕು ರಾಷ್ಟ್ರೀಯ ದಿನದ ಉಡುಗೊರೆ

ಟ್ರಂಪ್ ಸೋಂಕು ರಾಷ್ಟ್ರೀಯ ದಿನದ ಉಡುಗೊರೆ

ಚೀನಾದ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ರಂಪ್‌ಗೆ ಸೋಂಕು ಹರಡಿರುವುದನ್ನು ಅಪಹಾಸ್ಯ ಮಾಡಿದ್ದು, ಅದನ್ನು ರಾಷ್ಟ್ರೀಯ ದಿನದ ಉಡುಗೊರೆ ಎಂದು ಕರೆದಿದ್ದಾರೆ.

 ಟ್ರಂಪ್ ಏನೆಂದು ಆರೋಪಿಸಿದ್ದರು

ಟ್ರಂಪ್ ಏನೆಂದು ಆರೋಪಿಸಿದ್ದರು

ಕೊರೊನಾ ಸೋಂಕು ಚೀನಾದ ಲ್ಯಾಬ್‌ನಿಂದಲೇ ಹುಟ್ಟಿಕೊಂಡಿದ್ದು ಎಂದು ಹೇಳಿ ಆರೋಪ ಮಾಡುವುದರ ಜತೆಗೆ ಇದೇ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಅನುದಾನವನ್ನು ಕೂಡ ನಿಲ್ಲಿಸಿದ್ದರು. ಹಾಗೆಯೇ ಮಾಸ್ಕ್ ಧರಿಸುವುದರ ಕುರಿತು ಕೂಡ ವಿವಾದ ಸೃಷ್ಟಿಸಿಕೊಂಡಿದ್ದರು.

English summary
President Donald Trump has spent much of this year blaming China for the coronavirus, while Beijing mocked him for not taking the pandemic seriously enough.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X