China Covid Death: ಒಂದೇ ತಿಂಗಳಲ್ಲಿ ಸಾವಿರಾರು ಮಂದಿ ಸಾವು, ಚೀನಾ ಸರ್ಕಾರದ ವರದಿಯಲ್ಲಿ ಏನಿದೆ?

ಬೆಂಗಳೂರು, ಜನವರಿ 15: ಜಗತ್ತಿಗಿನಲ್ಲಿ ಕೊರೊನಾ ಹಬ್ಬಲು ಕಾರಣವಾದ ದೇಶ ಎನ್ನಲಾಗುವ ಡ್ರ್ಯಾಗನ್ ರಾಷ್ಟ್ರ ಮಹತ್ವದ ಮಾಹಿತಿಯೊಂದನ್ನು ಬಹಿರಂಗ ಪಡಿಸುವಮೂಲಕ ಇತರ ಅಚ್ಚರಿ ಮೂಡಿಸಿದೆ.

ಹೌದು, ಚೀನಾ ದೇಶದ ವಿರುದ್ಧ ಸಾಕಷ್ಟು ಟೀಕೆ, ಆಕ್ರೋಶ ಕೇಳಿ ಬಂದ ಬೆನ್ನಲ್ಲೆ ಇದೀಗ ಆದೇಶದಲ್ಲಿ ಒಂದೇ ತಿಂಗಳಲ್ಲಿ 60,000 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಅಂಶವನ್ನು ಸ್ವತಃ ಚೀನಾ ಸರ್ಕಾರ ಪ್ರಕಟಿಸಿದೆ. ಕೋವಿಡ್‌ ಸಂಬಂಧಿತ ಸಾವು-ನೋವುಗಳ ಅಂಕಿ-ಅಂಶಗಳ ಕುರಿತಾಗಿ ಜಾಗತಿಕ ಟೀಕೆಗೆ ಚೀನಾ ಗುರಿಯಾಗಿತ್ತು. ಇದೇ ಮೊದಲ ಬಾರಿಗೆ ದೇಶದ ಕೋವಿಡ್‌ ಸಾವುಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಿದೆ.

ಕೋವಿಡ್‌ನಿಂದಾಗಿ ಒಂದು ತಿಂಗಳಲ್ಲಿ ಚೀನಾದಾದ್ಯಂತ ಸುಮಾರು 60,000 ಮಂದಿ ಜೀವ ಬಿಟ್ಟಿದ್ದಾರೆ. ಇದನ್ನು ಸ್ವತಃ ಚೀನಾ ದೇಶವೇ ಒಪ್ಪಿಕೊಂಡು ಬಹಿರಂಗ ಪಡಿಸಿದೆ. ಕೋವಿಡ್ ಪ್ರಕರಣಗಳು ಮತ್ತು ಸಾವುಗಳ ಅಂಕಿ ಅಂಶಗಳ ವಿಚಾರದಲ್ಲಿ ಚೀನಾ ಸರ್ಕಾರ ಪಾರದರ್ಶಕವಾಗಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಇದಕ್ಕಾಗಿ ಜಾಗತಿಕವಾಗಿ ಅನೇಕ ದೇಶಗಳು ಚೀನಾ ನೀತಿ ವಿರುದ್ಧ ಕಿಡಿ ಕಾರಿದ್ದವು.

China Govt Has Released Covid 19 Death Data, 60,000 People Death In 1 Month Due To Corona

ಈ ಹಿಂದಿನ ವರ್ಷ 2022ರ ಡಿಸೆಂಬರ್‌ನಲ್ಲಿ ಮೂರು ವರ್ಷಗಳಿಂದ ನಡೆಯುತ್ತಿರುವ ಶೂನ್ಯ ಕೋವಿಡ್ ನೀತಿಯನ್ನು ಚೀನಾ ಹಿಂಪಡೆಯಿತು. ಇದಕ್ಕೆ ನವೆಂಬರ್‌ನಲ್ಲಿ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದೇ ಕಾರಣ ಎನ್ನಲಾಗಿದೆ. ಇದಾದ ಬಳಿಕ

ಚೀನಾದಲ್ಲಿ 3.7 ಬಿಲಿಯನ್ ಕೋವಿಡ್ ಪ್ರಕರಣಗಳು ಒಂದೇ ದಿನ ಪತ್ತೆಯಾಗಿದ್ದು, ವಿಶ್ವ ದಾಖಲೆ ಆಗಿದೆ ಎಂದು ಬ್ಲೂಮ್‌ಬರ್ಗ್ (Bloomberg) ಮಾಧ್ಯಮ ಸಂಸ್ಥೆ ವರದಿ ಮಾಡಿತ್ತು.

China Govt Has Released Covid 19 Death Data, 60,000 People Death In 1 Month Due To Corona

ಡಿಸೆಂಬರ್ 8ರಿಂದ ಜನವರಿ 12ರವರೆಗೆ ಚೀನಾದಲ್ಲಿ ಒಟ್ಟು 59,938 ಕೋವಿಡ್ ಸೋಂಕಿನಿಂದ ಜನರು ಸಾವಿಗೀಡಾಗಿದ್ದಾರೆ. ಈ ಪೈಕಿ 5,503 ಜನರು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. ಈ ನಡುವೆ, ಡಿಸೆಂಬರ್‌ನಲ್ಲಿ ಕೋವಿಡ್ ಪ್ರಕರಣಗಳು ಗರಿಷ್ಠ ಮಟ್ಟ ತಲುಪಿತ್ತು. ಸದ್ಯ ಕೊರೊನಾ ಚೀನಾದಲ್ಲಿ ಹಂತ ಹಂತವಾಗಿ ಕಡಿಮೆಯಾಗುತ್ತದೆ ಎಂದು ಚೀನಾ ಸರ್ಕಾರಿ ಹೇಳಿಕೊಂಡಿದೆ.

ಚೀನಾದಲ್ಲಿ ಕೋವಿಡ್ ಸ್ಫೋಟಗೊಂಡ 2020ರ ಅಂದಿನಿಂದ ಇಲ್ಲಿಯವರೆಗೆ ಕೇವಲ 5,000 ಜನರು ಸಾವನ್ನಪ್ಪಿದ್ದಾರೆ ಎಂದು ಚೀನಾ ಹೇಳಿದೆ ಎಂದು ಅಸೋಸಿಯೇಟೆಡ್ ಪ್ರೆಸ್ (AP) ವರದಿ ಮಾಡಿತ್ತು. ಚೀನಾದ ಕೋವಿಡ್ ಸಾವಿನ ಸಂಖ್ಯೆ 10 ಲಕ್ಷವನ್ನು ಮೀರುತ್ತದೆ ಎಂದು ಜಾಗತಿಕ ವೈದ್ಯಕೀಯ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ.

ಡ್ರ್ಯಾಗನ್ ದೇಶದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಹಬ್ಬದ ಸೀಸನ್ ಆರಂಭವಾಗಲಿದೆ. ಅಲ್ಲಿ ಸಾಲು ಸಾಲಾಗಿ ಹಬ್ಬಗಳನ್ನು ಆರಿಸಲಾಗುತ್ತದೆ. ಈ ವೇಳೆ ಜನರು ಚೀನಾದಾದ್ಯಂತ ಪ್ರವಾಸ ಮಾಡುತ್ತಾರೆ. ಅದು ಈವರ್ಷವು ಮುಂದುವಿಯಲಿದೆ. ಈ ಕಾರಣದಿಂದ ಕೋವಿಡ್ ಪ್ರಕರಣಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಹಾಗೂ ಆತಂಕ ಎರಡು ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+