ಓಮಿಕ್ರಾನ್ ಹೆಚ್ಚಳ: ಚೀನಾದಲ್ಲಿ ನಿರ್ಬಂಧ ಇನ್ನಷ್ಟು ಬಿಗಿ
ಬೀಜಿಂಗ್, ಜನವರಿ 10: ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ಗೆ ಕೆಲವೇ ವಾರಗಳ ಮುಂಚೆಯೇ ಚೀನಾದ ಪ್ರಮುಖ ನಗರಗಳಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ವಿಶ್ವದಲ್ಲೇ ಮೊದಲು ಕೊರೊನಾವೈರಸ್ ಕಾಣಿಸಿಕೊಂಡ ಚೀನಾದ ಪ್ರಮುಖ ನಗರದಲ್ಲಿ ಕೊರೊನಾ ವೈರಸ್ ರೂಪಾಂತರ ಓಮಿಕ್ರಾನ್ ಪ್ರಕರಣಗಳು ಅಧಿಕವಾಗಿ ಪತ್ತೆಯಾಗುತ್ತಿರುವ ಹಿನ್ನೆಲೆ ಅಧಿಕಾರಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.
ಚೀನಾವು ಜಿರೋ ಕೋವಿಡ್ ಪ್ರಕರಣ ದಾಖಲು ಮಾಡುವತ್ತ ಚಿತ್ತ ನೆಟ್ಟಿದೆ. ಆದರೆ ಈ ನಡುವೆ ವೇಗವಾಗಿ ಹರಡುತ್ತಿರುವ ಕೋವಿಡ್ ರೂಪಾಂತರವು ಚೀನಾದ ಶೂನ್ಯ ಕೋವಿಡ್ ಕಾರ್ಯತಂತ್ರಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಅಧಿಕಾರಿಗಳು ಈಗಾಗಲೇ ಹಲವಾರು ಪ್ರದೇಶಗಳಲ್ಲಿ ಕೋವಿಡ್ ಹೆಚ್ಚಳವಾದ ಹಿನ್ನೆಲೆ ಆ ನಗರಗಳಲ್ಲಿ ನಿರ್ಬಂಧವನ್ನು ಬಿಗಿ ಮಾಡಿದ್ದಾರೆ. ಕ್ಸಿಯಾನ್ ಸೇರಿದಂತೆ 13 ಮಿಲಿಯನ್ ನಗರ ನಿವಾಸಿಗಳು ಇರುವ ನಗರಗಳು ಮೂರನೇ ಲಾಕ್‌ಡೌನ್‌ನಲ್ಲಿ ಇದೆ.
ಉತ್ತರದ ನಗರವಾದ ಟಿಯಾಂಜಿನ್‌ನಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆ ಟಿಯಾಂಜಿನ್‌ನಿಂದ ಸುಮಾರು 400 ಕಿಲೋಮೀಟರ್ (250 ಮೈಲುಗಳು) ದೂರದಲ್ಲಿರುವ ಅನ್ಯಾಂಗ್ ನಗರದಲ್ಲಿ ಸೋಮವಾರ ಎರಡು ಓಮಿಕ್ರಾನ್ ಪ್ರರಕಣಗಳು ದಾಖಲು ಆಗಿದೆ. ಈ ಹಿನ್ನೆಲೆಯಿಂದಾಗಿ, "ಜನರು ಯಾವುದೇ ತೀರಾ ಅಗತ್ಯವಿಲ್ಲದೆ ಟಿಯಾಂಜಿನ್‌ನಿಂದ ಹೊರಹೋಗಬಾರದು," ಎಂದು ನಗರ ಅಧಿಕಾರಿಗಳು ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಟಿಯಾಂಜಿನ್‌ನಲ್ಲಿ ನಿರ್ಬಂಧ ಹೆಚ್ಚಳ
ಟಿಯಾಂಜಿನ್‌ನಿಂದ ಬೇರೆ ಕಡೆಗೆ ಹೋಗಬೇಕಾದರೆ ಅಧಿಕೃತ ಅನುಮತಿಯನ್ನು ಪಡೆಯಬೇಕು ಮತ್ತು ಅವರು ಟಿಯಾಂಜಿನ್‌ನಿಂಂದ ಹೊರ ಹೋಗುವ 48 ಗಂಟೆಗಳ ಒಳಗೆ ಕೋವಿಡ್ ಪರೀಕ್ಷೆಗೆ ಒಳಗಾಗಿ ನೆಗೆಟಿವ್ ವರದಿಯನ್ನು ಹೊಂದಿರಬೇಕು ಎಂದು ಕೂಡಾ ಅಧಿಕಾರಿಗಳು ಹೇಳಿದ್ದಾರೆ. ಶಾಲೆಗಳು ಮತ್ತು ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳನ್ನು ಮುಚ್ಚಲಾಗಿದೆ. ಟಿಯಾಂಜಿನ್‌ನಿಂದ ಬೀಜಿಂಗ್‌ಗೆ ರೈಲುಗಳನ್ನು ರದ್ದುಗೊಳಿಸಲಾಗಿದೆ. ರಾಜಧಾನಿ ಪ್ರವೇಶಿಸುವ ವಾಹನಗಳನ್ನು ತಪಾಸಣೆ ಮಾಡಲು ತಪಾಸಣಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಟಿಯಾಂಜಿನ್-ಬೀಜಿಂಗ್‌ನಿಂದ ಕೇವಲ 150 ಕಿಲೋಮೀಟರ್ ಇರುವ ಹಿನ್ನೆಲೆಯಿಂದಾಗಿ ಈಗಾಗಲೇ ಎಲ್ಲಾ 14 ಮಿಲಿಯನ್ ನಿವಾಸಿಗಳ ಪರೀಕ್ಷೆಗೆ ಆದೇಶಿಸಿದೆ.
ನಗರದಲ್ಲಿ ಸೋಮವಾರ ಇನ್ನೂ 21 ಪ್ರಕರಣಗಳು ವರದಿಯಾಗಿವೆ. ಆದರೆ ಇನ್ನೂ ರೂಪಾಂತರದ ಬಗ್ಗೆ ವರದಿ ಬಂದಿಲ್ಲ. ಟಿಯಾಂಜಿನ್ ಮುನ್ಸಿಪಲ್ ಹೆಲ್ತ್ ಕಮಿಷನ್‌ನ ನಿರ್ದೇಶಕ ಗು ಕ್ವಿಂಗ್ ವಾರಾಂತ್ಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ್ದು, "ಮುಖ್ಯವಾಗಿ ಒಂದೇ ನರ್ಸರಿ ಮತ್ತು ಶಾಲೆಗೆ ಹೋಗುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಲ್ಲಿ ಕೋವಿಡ್ ದೃಢಪಟ್ಟಿದೆ," ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಕೇವಲ ಮೂರು ಪ್ರಕರಣಗಳು ಪತ್ತೆಯಾಗಿದ್ದ, ಚೀನಾದ ನಗರದಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ. ಚೀನಾದ ನಗರವೊಂದರಲ್ಲಿ ಮತ್ತೆ ಲಕ್ಷಣ ರಹಿತ ಮೂರು ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಆ ನಗರವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಕೊರೊನಾ ಆರಂಭದಿಂದಲೂ ಝೀರೋ ಕೋವಿಡ್ ವಿಧಾನವನ್ನು ಚೀನಾ ಅನುಸರಿಸಿಕೊಂಡಿದೆ. ಆದ್ರೂ ಸಹ ಮಂಗಳವಾರ 175 ಹೊಸ ಕೊರೋನಾ ಪ್ರಕರಣಗಳು ಕಂಡುಬಂದಿವೆ. ಇತ್ತೀಚೆಗೆ ಪತ್ತೆಯಾಗುತ್ತಿರುವ ಕೊರೋನಾ ಕೇಸ್ ಗಳಿಂದ ಬೆಚ್ಚಿಬಿದ್ದಿರುವ ಚೀನಿ ಸರ್ಕಾರ, ಗಡಿಗಳನ್ನು ಮುಚ್ಚಿದೆ ಮತ್ತು ದೇಶದ ಹಲವು ಭಾಗಗಳಲ್ಲಿ ಲಾಕ್‌ಡೌನ್ ವಿಧಿಸಿದೆ. 1.3 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಶಾಂಕ್ಸಿ ನಗರವು ಸುಮಾರು ಎರಡು ವಾರಗಳ ಕಾಲ ಲಾಕ್‌ಡೌನ್‌ನಲ್ಲಿಡಲಾಗಿದೆ.
ಇನ್ನು ಚೀನಾದ ಜೀಆನ್ ನಗರಗಳಲ್ಲಿ ಕೊರೊನಾ ವೈರಸ್ ಸೋಂಕು ಮತ್ತೆ ಏರಿಕೆ ಆದ ಕಾರಣಕ್ಕೆ ಅಲ್ಲಿ ಲಾಕ್‌ಡೌನ್ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ಕಾರಣದಿಂದಾಗಿ ಅಲ್ಲಿನ ಅಧಿಕಾರಿಗಳಿಗೆಯೇ ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ವರದಿ ಆಗಿದೆ. ಚೀನಾದ ಪ್ರಮುಖ ನಗರವಾದ ಜೀಆನ್‌ನಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಆಗಿದೆ. ಈ ಹಿನ್ನೆಲೆಯಿಂದಾಗಿ ಅಧಿಕಾರಿಗಳಿಯೇ ಶಿಕ್ಷೆಯನ್ನು ವಿಧಿಸಲಾಗಿದೆ. ಚೀನಾದ ಜೀಆನ್ ನಗರಗಳಲ್ಲಿ ಶುಕ್ರವಾರ ಮತ್ತೆ 49 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣ ದಾಖಲು ಆಗಿದೆ. ಈ ಮೂಲದ ಈ ವಾರದಲ್ಲಿ ಈ ನಗರದಲ್ಲಿ ದಾಖಲಾದ ಒಟ್ಟು ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯನ್ನು 250 ಕ್ಕೆ ಏರಿಕೆ ಮಾಡಿದೆ. ಚೀನಾವು ಹಲವಾರು ಕಠಿಣ ಮಾರ್ಗಸೂಚಿಯನ್ನು ಹೊರಡಿಸಿದ್ದರೂ ಕೂಡಾ ಚೀನಾದ ಈ ನಗರದ ಅಧಿಕಾರಿಗಳು ಕೋವಿಡ್ ಹೆಚ್ಚಳವನ್ನು ತಡೆಗಟ್ಟುವಲ್ಲಿ ವಿಫಲವಾಗಿದ್ದಾರೆ. "ಕೋವಿಡ್ ಪರೀಕ್ಷೆಯು ಇಲ್ಲಿ ಸರಿಯಾದ ರೀತಿಯಲ್ಲಿ ನಡೆದಿಲ್ಲ, ಅದರಿಂದಾಗಿ ಈಗ ಒಮ್ಮೆಲೇ ಕೋವಿಡ್ ಹೆಚ್ಚಳವಾಗಿದೆ," ಎಂಬುವುದು ಪರಿಶೀಲನೆ ನಡೆಸಿದ ವೇಳೆ ತಿಳಿದು ಬಂದಿದೆ," ಎಂದು ಹೇಳಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications