ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೃಷ್ಠಿಸಿದ ಚೀನಾದ 'ಡೆಡ್ಲಿ ಮಾರ್ಕೆಟ್' ಮತ್ತೆ ಆರಂಭ

|
Google Oneindia Kannada News

ದೆಹಲಿ, ಏಪ್ರಿಲ್ 1: ಚೀನಾ ದೇಶದಲ್ಲಿ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಲಾಕ್‌ಡೌನ್‌ ವ್ಯವಸ್ಥೆಯಿಂದಲೂ ಚೀನಾ ನಿಧಾನವಾಗಿ ಹೊರಬರುತ್ತಿದೆ. ಅಷ್ಟು ಬೇಗ ಚೀನಾದಲ್ಲಿ ಪ್ರಾಣಿ ಮಾರುಕಟ್ಟೆಗಳು ಮತ್ತೆ ಆರಂಭವಾಗಿದೆ.

Recommended Video

ದಾವಣಗೆರೆಯಲ್ಲಿ ಬೀದಿಗಿಳಿದು ಅಂಗಡಿ ಬಂದ್ ಮಾಡಿಸಿದ ಜಿಲ್ಲಾಧಿಕಾರಿಗಳು | Quarantine | Davanagere | Police

ಬಾವುಲಿಗಳು, ಬೆಕ್ಕುಗಳು, ನಾಯಿಗಳು ಹಾಗೂ ಇನ್ನಿತರ ಪ್ರಾಣಿಗಳನ್ನು ಈ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಅಂದ್ಹಾಗೆ, ಕೊರೊನಾ ವೈರಸ್‌ ಹುಟ್ಟಿಕೊಂಡಿದ್ದು ಚೀನಾದಲ್ಲಿ. ಚೀನಾದ ವುಹಾನ್‌ ನಗರದಲ್ಲಿ ಕೊರೊನಾ ಮೊದಲು ಕಾಣಿಸಿಕೊಂಡಿತ್ತು.

ಕೊರೊನಾ ಇಲ್ಲವೆಂದು ವೈದ್ಯರು ಹೇಳಿದರೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಕೊರೊನಾ ಇಲ್ಲವೆಂದು ವೈದ್ಯರು ಹೇಳಿದರೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಪ್ರಾಣಿಗಳಿಂದಲೇ ಈ ಕೊರೊನಾ ವೈರಸ್‌ ಹುಟ್ಟಿಕೊಂಡಿದ್ದು, ಬಾವುಲಿಯೇ ಪ್ರಮುಖ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದ್ರೆ, ಚೀನಾದಲ್ಲಿ ಅಷ್ಟು ಬೇಗ ಪ್ರಾಣಿಗಳ ಮಾರುಕಟ್ಟೆ ಮತ್ತೆ ಆರಂಭಿಸಿರುವುದು ನಿಜಕ್ಕೂ ಅಚ್ಚರಿ ತಂದಿದೆ.

China Deadly Wet Market Start Work Again

ಹುಬೈ ಪ್ರಾಂತ್ಯದ 55 ವರ್ಷದ ವ್ಯಕ್ತಿಯಲ್ಲಿ ಮೊದಲು ಕೊರೊನಾ ಕಾಣಿಸಿಕೊಂಡಿತ್ತು ಎಂದು ಹಲವು ವರದಿಗಳು ಉಲ್ಲೇಖ ಮಾಡಿವೆ. ಇಂತಹ ಆತಂಕ ಹಾಗೂ ಭಯಾನಕ ವಿಷಯ ಗೊತ್ತಿದ್ದರೂ ಚೀನಾದಲ್ಲಿ ವೆಟ್ ಮಾರುಕಟ್ಟೆಗೆ ಚೀನಾ ಚಾಲನೆ ಕೊಟ್ಟಿದ್ದು ಏಕೆ ಎಂದು ಜಗತ್ತಿನ ಇತರೆ ರಾಷ್ಟ್ರಗಳು ತಲೆಕೆಡಿಸಿಕೊಂಡಿದೆ.

ಸದ್ಯ, ವೆಟ್ ಮಾರ್ಕೆಟ್‌ಗಳು ಕಾವಲುಗಾರರ ಕಣ್ಗಾವಲಿನಲ್ಲಿ ನಡೆಯುತ್ತಿದೆ. ಯಾರಿಗೂ ಇಲ್ಲಿನ ಪ್ರಸ್ತುತ ದೃಶ್ಯಗಳನ್ನು ಫೋಟೋ ಕ್ಲಿಕ್ ಮಾಡಲು ಅವಕಾಶ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ.

ಇನ್ಫೋಸಿಸ್ ಫೌಂಡೇಷನ್‍ನಿಂದ 100 ಹಾಸಿಗೆಗಳ ಕ್ವಾರಂಟೈನ್ ಸೌಲಭ್ಯಇನ್ಫೋಸಿಸ್ ಫೌಂಡೇಷನ್‍ನಿಂದ 100 ಹಾಸಿಗೆಗಳ ಕ್ವಾರಂಟೈನ್ ಸೌಲಭ್ಯ

ಇದುವರೆಗೂ ಚೀನಾದಲ್ಲಿ 81,554 ಕೊರೊನಾ ಸೋಂಕಿತರು ಪತ್ತೆಯಾಗಿದೆ. 3,312 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಚೀನಾ ಬಿಟ್ಟರೆ ಇಟಲಿಯಲ್ಲಿ ಅತಿ ಹೆಚ್ಚು ಸಾವು ಕಂಡಿದೆ. 12,428 ಜನರು ಇಟಲಿಯಲ್ಲಿ ಮೃತಪಟ್ಟಿದ್ದಾರೆ. ಭಾರತದಲ್ಲೂ 1700ಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

English summary
China's Deadly Wet Market is back, start selling bats, cats, and pangolins amid COVID19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X