ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ ವೇಳೆಗೆ ಚೀನಾದ ಕೊರೊನಾ ಲಸಿಕೆ ಲಭ್ಯ

|
Google Oneindia Kannada News

ಬೀಜಿಂಗ್, ಸೆಪ್ಟೆಂಬರ್ 15: ನವೆಂಬರ್ ವೇಳೆಗೆ ಚೀನಾದ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚೀನಾವು ಅಭಿವೃದ್ಧಿಪಡಿಸುತ್ತಿರುವ ಕೊರೊನಾ ವೈರಸ್ ಲಸಿಕೆಯು ನವೆಂಬರ್‌ಗಿಂತ ಮೊದಲೇ ಸಾರ್ವಜನಿಕರ ಬಳಕೆಗೆ ಸಿದ್ಧವಾಗಬಹುದು ಎಂದು ಚೀನಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನೊಂದೆಡೆ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಸರ್ಕಾರದ ನಿಯಂತ್ರಣದಲ್ಲಿರುವ ಲ್ಯಾಬಿನಿಂದಲೇ ಜಾಗತಿಕ ಸಾಂಕ್ರಾಮಿಕ ವೈರಸ್ ಕೊವಿಡ್ 19 ಉತ್ಪತ್ತಿಯಾಗಿದ್ದು, ಅಲ್ಲಿಂದಲೇ ಎಲ್ಲೆಡೆ ಪ್ರಸಾರವಾಗಿದೆ ಎಂದು ಸಂಶೋಧಕಿ ಡಾ. ಲಿ ಮೆಂಗ್ ಯಾನ್ ಹೇಳಿದ್ದಾರೆ.

ಸತ್ಯ ಬಹಿರಂಗ: ವುಹಾನ್ ಲ್ಯಾಬಿನಿಂದಲೇ ಕೊವಿಡ್19 ಉತ್ಪತ್ತಿಸತ್ಯ ಬಹಿರಂಗ: ವುಹಾನ್ ಲ್ಯಾಬಿನಿಂದಲೇ ಕೊವಿಡ್19 ಉತ್ಪತ್ತಿ

ವುಹಾನ್ ಲ್ಯಾಬಿನಲ್ಲೇ ಕೊರೊನಾವೈರಸ್ ಸೃಷ್ಟಿಸಲಾಗಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ, ಇದು ಬಾವಲಿ, ಪಶು, ಪಕ್ಷಿ, ಸಸ್ತನಿಯಿಂದ ಉತ್ಪಾದನೆ ಹಾಗೂ ಹರಡುವಂಥ ವೈರಸ್ ಅಲ್ಲವೇ ಅಲ್ಲ, ಇದನ್ನು ಪ್ರಯೋಗಾಲಯದಲ್ಲೇ ಸೃಷ್ಟಿ ಮಾಡಲಾಗಿದೆ.

ಈ ಬಗ್ಗೆ ಇರುವ ಸಾಕ್ಷಿ, ಪುರಾವೆಗಳನ್ನು ಮುಂದಿಟ್ಟುಕೊಂಡು ಮುಂದಿನ ವಿಜ್ಞಾನ ಸರಣಿ ಲೇಖನವನ್ನು ಸಾರ್ವಜನಿಕರ ಮುಂದಿಡುತ್ತೇನೆ ಎಂದು ವೈರೊಲೊಜಿಸ್ಟ್ ಮಾಹಿತಿ ನೀಡಿದ್ದಾರೆ. ಹೀಗಾಗಿ ಚೀನಾದ ಮೇಲೆ ಹಲವು ದೇಶಗಳು ನಂಬಿಕೆ ಕಳೆದುಕೊಳ್ಳುವ ಸಾಧ್ಯತೆಯೂ ಕೂಡ ಇದೆ.

ಚೀನಾದಲ್ಲಿ 4 ಲಸಿಕೆಗಳು ಅಂತಿಮ ಹಂತದಲ್ಲಿವೆ

ಚೀನಾದಲ್ಲಿ 4 ಲಸಿಕೆಗಳು ಅಂತಿಮ ಹಂತದಲ್ಲಿವೆ

ಚೀನಾದಲ್ಲಿ 4 ಲಸಿಕೆಗಳು ಅಂತಿಮ ಹಂತಲ್ಲಿವೆ. ಎಲ್ಲವೂ ಅಂತಿಮ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿವೆ. ಜುಲೈನಲ್ಲಿ ಆರಂಭಿಸಲಾದ ತುರ್ತು ಬಳಕೆ ಕಾರ್ಯಕ್ರಮದಡಿ ಕನಿಷ್ಠ ಮೂರು ಅಗತ್ಯ ಕಾರ್ಮಿಕರಿಗೆ ಈಗಾಗಲೇ ನೀಡಲಾಗಿದೆ.

ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಸುಗಮ

ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಸುಗಮ

ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳು ಸುಗಮವಾಗಿ ನಡೆಯುತ್ತಿವೆ. ಲಸಿಕೆಗಳು ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಏಪ್ರಿಲ್‌ನಲ್ಲಿ ಪ್ರಾಯೋಗಿಕ ಲಸಿಕೆ ತೆಗೆದುಕೊಂಡ ನಂತರ ಇತ್ತೀಚಿನ ದಿನಗಳಲ್ಲಿ ಯಾವುದೇ ಅಡ್ಡಪರಿಣಾಮಗಳನ್ನು ಅನುಭವಿಸಿಲ್ಲ. ಆದರೆ ಅವರು ಯಾವ ಲಸಿಕೆಯನ್ನು ಬಳಕೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿಸಿಲ್ಲ.

ಜೂನ್‌ನಲ್ಲಿಯೇ ಅನುಮತಿ ದೊರೆತಿತ್ತು

ಜೂನ್‌ನಲ್ಲಿಯೇ ಅನುಮತಿ ದೊರೆತಿತ್ತು

ಚೀನಾ ನ್ಯಾಷನಲ್ ಫಾರ್ಮಾಸುಟಿಕಲ್ ಮತ್ತು ಯುಎಸ್ ಕ್ಯಾನ್ಸಿನೋ ಬಯೋಲಾಜಿಕ್ಸ್ ಅಭಿವೃದ್ಧಿಪಡಿಸುತ್ತಿರುವ ಈ ಲಸಿಕೆಗೆ ಜೂನ್‌ನಲ್ಲಿಯೇ ಚೀನಾದ ಮಿಲಿಟರಿ ಅನುಮೋದನೆ ನೀಡಿತ್ತು.

Recommended Video

DK Shivakumar ಹಾಗು Randeep Surjewala ಅವರಿಂದ ಬದಲಾಗಿದೆಯೇ ಕಾಂಗ್ರೆಸ್ ಹವಾ | Oneindia Kannada
ನವೆಂಬರ್‌ನಲ್ಲಿ ಲಸಿಕೆ ಬಳಕೆಗೆ ಸಿದ್ಧ

ನವೆಂಬರ್‌ನಲ್ಲಿ ಲಸಿಕೆ ಬಳಕೆಗೆ ಸಿದ್ಧ

ಮೂರನೇ ಹಂತದ ಪ್ರಯೋಗಗಳು ಮುಗಿದ ಬಳಿಕ ಈ ವರ್ಷದ ಅಂತ್ಯದ ವೇಳೆಗೆ ಅದರ ಲಸಿಕೆ ಸಾರ್ವಜನಿಕ ಬಳಕೆಗೆ ಸಿದ್ಧವಾಗಬಹುದು ಎಂದು ಸಿನೋಫಾರ್ಮ್ ಹೇಳಿದೆ. ಕೊರೊನಾ ಸೋಂಕು 925000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ವೈರಸ್ ವಿರುದ್ಧ ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ.

English summary
Coronavirus vaccines being developed in China may be ready for use by the general public as early as November, an official with the China Centre for Disease Control and Prevention (CDC) said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X