Get Updates
Get notified of breaking news, exclusive insights, and must-see stories!

China Military Drill: ಚೀನಾದಿಂದ ಗಡಿಯಲ್ಲಿ ಮಿಲಿಟರಿ ಕವಾಯತ್ತು: ಭಾರತ ಹೈ- ಅಲರ್ಟ್!

ಭಾರತ - ಚೀನಾ ಸಂಬಂಧ ಸುಧಾರಿಸುತ್ತಿದೆ ಎನ್ನುವಾಗಲೇ ಚೀನಾ ತನ್ನ ಬಾಲ ಬಿಚ್ಚಿದೆ. ಕಳೆದ ಕೆಲವೇ ತಿಂಗಳುಗಳ ಮುಂಚೆಯಷ್ಟೇ ಪೂರ್ವ ಲಡಾಕ್ ಗಡಿ ಬಿಕ್ಕಟ್ಟು ಮುಗಿದು ಎರಡು ದೇಶಗಳು ತಮ್ಮ ಸೇನೆಯನ್ನು ಹಿಂದಿರುಗಿಸಿಕೊಳ್ಳುವುದಾಗಿ ಹೇಳಿತ್ತು. ಈ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿತ್ತು. ಆದರೆ, ಇದೀಗ ಚೀನಾ ತನ್ನ ಎತ್ತರದ ಪ್ರಸ್ಥಭೂಮಿಯಲ್ಲಿ ಮಿಲಿಟರಿ ತರಬೇತಿ (ಕವಾಯತ್ತು) ನಡೆಸಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಭಾರತೀಯ ಸೇನಾ ದಿನಾಚರಣೆಗೆ ಎರಡು ದಿನಗಳು ಬಾಕಿ ಉಳಿದಿರುವಾಗಲೇ ಈ ಬೆಳವಣಿಗೆ ನಡೆದಿದ್ದು. ಸಂಕಷ್ಟದ ಸಂದರ್ಭಗಳಲ್ಲಿ ಚೀನಾದ ಮಿಲಿಟರಿ ಪಡೆ ಎಷ್ಟು ಸನ್ನದ್ಧವಾಗಿದೆ ಎನ್ನುವುದನ್ನು ಇದು ತೋರಿಸುವ ಪ್ರಯತ್ನ ಎಂದು ಹೇಳಲಾಗುತ್ತಿದೆ.

ಭಾರತ - ಚೀನಾದ ಗಡಿ ಭಾಗದಲ್ಲಿ ಕಳೆದ 4 ವರ್ಷಗಳಿಂದ ಉದ್ವಿಗ್ನ ಪರಿಸ್ಥಿತಿ ಇತ್ತು. ಈಚೆಗಷ್ಟೇ ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ಚುರುಕು ಪಡೆದುಕೊಂಡಿತ್ತು. ಇನ್ನೇನು ಎರಡೂ ದೇಶಗಳ ನಡುವೆ ಎಲ್ಲವೂ ಸರಿ ಹೋಗುತ್ತಿದೆ ಎನ್ನುವಾಗಲೇ ಚೀನ ತನ್ನ ಹಳೇ ಚಾಳಿಯನ್ನು ಪ್ರದರ್ಶಿಸಿದೆ. 2024ರ ಅಕ್ಟೋಬರ್‌ನಲ್ಲಿ ಎರಡೂ ದೇಶಗಳ ನಡುವೆ ಮಹತ್ವದ ಚರ್ಚೆ ಆಗಿತ್ತು. ಭಾರತ ಹಾಗೂ ಚೀನಾ ಗಡಿ ಗಸ್ತು ಒಪ್ಪಂದಕ್ಕೆ ಮುಂದಾಗಿದ್ದವು. ಈ ಮೂಲಕ ಭಾರತ ಹಾಗೂ ಚೀನಾ ಎರಡೂ ದೇಶಗಳು ದೇಶದ ಗಡಿ ಭಾಗದ ವಾಸ್ತವ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಕಡಿಮೆ ಸೈನಿಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ಶಾಂತಿ ಕಾಪಾಡಿಕೊಂಡಿದೆ. ಭಾರತವು ಗಡಿ ಗಸ್ತು ಒಪ್ಪಂದವನ್ನು ಚಾಚು ತಪ್ಪದೆ ಪಾಲನೆ ಮಾಡುತ್ತಿದೆ.

China Conducts Drills Near LAC in Eastern Ladakh Indian Forces on Alert

ಪರಿಸ್ಥಿತಿ ಈ ರೀತಿ ಇರುವಾಗಲೇ ಚೀನಾ ಮಿಲಿಟರಿ ಪಡೆಯು ತರಬೇತಿಯನ್ನು ನಡೆಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯಾದ ಕ್ಸಿನ್‌ಜಿಯಾಂಗ್ ಮಿಲಿಟರಿ ಕಮಾಂಡ್‌ನ ರೆಜಿಮೆಂಟ್ ನೇತೃತ್ವದಲ್ಲಿ ಈ ಮಿಲಿಟರಿ ತರಬೇತಿ ಅಥವಾ ಯುದ್ಧ ಕವಾಯತು ನಡೆದಿದೆ ಎಂದು ವರದಿಯಾಗಿದೆ. ಈ ಯುದ್ಧ ತರಬೇತಿಯಲ್ಲಿ ಅತ್ಯಾಧುನಿಕ ಸಾಧನಗಳು, ಸೈನಿಕರು, ಮಾನವರ ರಹಿತ ಯುದ್ಧ ವಾಹನಗಳು ಹಾಗೂ ಅತ್ಯಾಧುನಿಕ ಮಿಲಿಟರಿ ತಂತ್ರಜ್ಞಾನ ಬಳಸಲಾಗಿದೆ ಎಂದು ಹೇಳಲಾಗಿದೆ.

ಭಾರತದಿಂದ ಹೈ ಅಲರ್ಟ್: ಚೀನಾ ತನ್ನ ಗಡಿಯಲ್ಲಿ ಮಿಲಿಟರಿ ಕವಾಯತ್ತು ನಡೆಸುತ್ತಿದ್ದಂತೆಯೇ ಭಾರತ ಹೈ ಅಲರ್ಟ್‌ ಆಗಿದೆ. ಚೀನಾ ತನ್ನ ಗಡಿ ಭಾಗದಲ್ಲಿ ನಡೆಸುತ್ತಿರುವ ಮಿಲಿಟರಿ ತರಬೇತಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಲಾಗಿದೆ. ಚೀನಾದ ಈ ಬೆಳವಣಿಗೆಯಿಂದ

China Conducts Drills Near LAC in Eastern Ladakh Indian Forces on Alert

ಭಾರತ ಲಡಾಖ್‌ನಲ್ಲಿ ಅಲರ್ಟ್ ಆಗಿದೆ. ಭಾರತೀಯ ಸೇನೆಯು ಚಳಿಗಾಲದ ಮಿಲಿಟರಿ ತರಬೇತಿಗಳನ್ನು ಆಗಾಗ ನಡೆಸುತ್ತಿದೆ. ಚೀನಾದ ಯಾವುದೇ ಸಂಭವನೀಯ ಆಕ್ರಮಣವನ್ನು ಎದುರಿಸಲು ಭಾರತವು ಸುಧಾರಿತ ಕಣ್ಗಾವಲು ವ್ಯವಸ್ಥೆಯನ್ನು ಮಾಡಿಕೊಂಡಿದೆ ಎಂದು ಹೇಳಲಾಗಿದೆ.

ಇನ್ನು ಚೀನಾ - ಭಾರತದ ನಡುವೆ ಹಲವು ಸುತ್ತಿನ ಸಭೆಗಳ ನಂತರವಷ್ಟೇ ಗಡಿ ಗಸ್ತು ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದದ ಪ್ರಕಾರ ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳಲು ಎರಡೂ ರಾಷ್ಟ್ರಗಳು ಬದ್ಧವಾಗಿರುವುದಾಗಿ ಹೇಳಿಕೊಂಡಿದ್ದವು. ಇದೀಗ ಚೀನಾ ಯಾವ ಕಾರಣಕ್ಕೆ ಮಿಲಿಟರಿ ತರಬೇತಿಯನ್ನು ನಡೆಸಿದೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಇನ್ನು ಈಚೆಗೆ ಬ್ರಹ್ಮಪುತ್ರ ನದಿ ಪಾತ್ರದಲ್ಲಿ ವಿಶ್ವದಲ್ಲೇ ಬೃಹತ್‌ ಅಣೆಕಟ್ಟು ನಿರ್ಮಾಣ ಮಾಡುವ ಪ್ರಸ್ತಾವನೆಯ ಬಗ್ಗೆ ಚರ್ಚೆ ಮಾಡಿದ್ದ ಚೀನಾ. ಏಕಕಾಲಕ್ಕೆ ಭಾರತ ಹಾಗೂ ಬಾಂಗ್ಲಾದೇಶಕ್ಕೆ ಶಾಕ್‌ ಕೊಟ್ಟಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+