Breaking: ತೈವಾನ್ ಸಮೀಪ ಮಿಲಿಟರಿ ಅಭ್ಯಾಸ ಆರಂಭಿಸಿದ ಚೀನಾ
ತೈಪೆ,ಆ.04: ಯುನೈಟೆಡ್ ಸ್ಟೇಟ್ಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮಂಗಳವಾರ ತೈಪೆಗೆ ಬಂದಿದ್ದ ಬೆನ್ನಲ್ಲೇ ಚೀನಾ ತೈವಾನ್ ಸುತ್ತಲೂ ಮಿಲಿಟರಿ ಅಭ್ಯಾಸ ಆರಂಭಸಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಚೀನೀ ಸೇನೆಯು ಗುರುವಾರ ಮಧ್ಯಾಹ್ನ (0400 GMT) ತೈವಾನ್ ಸುತ್ತಮುತ್ತಲಿನ ಸಮುದ್ರದಲ್ಲಿ ಲೈವ್-ಫೈರ್ ಅಭ್ಯಾಸ ಪ್ರಾರಂಭಿಸಿತು ಎಂದು ರಾಜ್ಯದ ಮಾಧ್ಯಮ ತಿಳಿಸಿದೆ.
"ಇಂದು ಮಧ್ಯಾಹ್ನ 12:00 ರ ರಿಂದ ಬೆಳಗ್ಗೆ 12:00 ರವರೆಗೆ, ಪೀಪಲ್ಸ್ ಲಿಬರೇಶನ್ ಆರ್ಮಿಯ ಪ್ರಮುಖ ಮಿಲಿಟರಿ ವಿಮಾನಗಳ ಅಭ್ಯಾಸ ನಡೆಯುತ್ತಿದೆ" ಎಂದು ತೈವಾನ್‌ನ ನಕ್ಷೆಯನ್ನು ಒಳಗೊಂಡಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
ತನ್ನ ಸೇನಾ ಪಡೆಗಳು ದ್ವೀಪದ ಸುತ್ತಮುತ್ತಲಿನ ನೀರಿನಲ್ಲಿ ನಡೆಯುತ್ತಿರುವ ಅಭೂತಪೂರ್ವ ಚೀನೀ ಮಿಲಿಟರಿ ವಿಮಾನಗಳ ಅಭ್ಯಾಸವನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ ಮತ್ತು ಸಂಘರ್ಷಕ್ಕೆ ಸಿದ್ಧವಾಗಿದೆ" ಎಂದು ತೈವಾನ್ ತಿಳಿಸಿದೆ.

"ರಾಷ್ಟ್ರೀಯ ರಕ್ಷಣಾ ಸಚಿವಾಲಯವು ಯುದ್ಧವನ್ನು ಮಾಡದೆ ಯುದ್ಧಕ್ಕೆ ತಯಾರಾಗುವ ತತ್ವವನ್ನು ಎತ್ತಿಹಿಡಿಯುತ್ತದೆ. ಇದು ಸಂಘರ್ಷವನ್ನು ಹೆಚ್ಚಿಸುವುದಿಲ್ಲ ಮತ್ತು ವಿವಾದಗಳನ್ನು ಉಂಟುಮಾಡುವುದಿಲ್ಲ" ಎಂದು ತೈಪೆಯ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಯುನೈಟೆಡ್ ಸ್ಟೇಟ್ಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮಂಗಳವಾರ ತೈಪೆಗೆ ಬಂದಿಳಿದ ಸ್ವಲ್ಪ ಸಮಯದಲ್ಲಿ ಚೀನಾ ತೈವಾನ್ ಮೇಲೆ ವಕ್ರದೃಷ್ಟಿ ಬೀರಿದೆ. ಚೀನಾದ 21 ಮಿಲಿಟರಿ ವಿಮಾನಗಳು ತೈವಾನ್‌ನ ವಾಯು ರಕ್ಷಣಾ ಗುರುತಿನ ವಲಯದ (ADIZ) ನೈಋತ್ಯ ಭಾಗದಲ್ಲಿ ಹಾರಿವೆ ಎಂಬುದನ್ನು ತೈವಾನ್‌ನ ರಾಷ್ಟ್ರೀಯ ರಕ್ಷಣಾ ಸಚಿವಾಲಯವು ಬುಧವಾರ ದೃಢಪಡಿಸಿತ್ತು.
ಚೀನಾ ಬೆದರಿಕೆಯ ಹಿನ್ನೆಲೆ ಇಂಡೋ-ಪೆಸಿಫಿಕ್ ಪ್ರದೇಶದ ಕಾಂಗ್ರೆಸ್ ನಿಯೋಗದ ಪ್ರವಾಸದ ಭಾಗವಾಗಿ ಪೆಲೋಸಿ ಮಂಗಳವಾರ ತೈವಾನ್‌ಗೆ ಭೇಟಿ ನೀಡಿದರು. ಆಕೆಯ ವಿಮಾನ ತೈಪೆಯಲ್ಲಿ ಇಳಿದ ಕೆಲವೇ ನಿಮಿಷಗಳಲ್ಲಿ, ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ತೈವಾನ್ ಸುತ್ತಮುತ್ತಲಿನ ನೀರಿನಲ್ಲಿ ಆರು ಲೈವ್-ಫೈರ್ ಮಿಲಿಟರಿ ಡ್ರಿಲ್‌ಗಳನ್ನು ನಡೆಸುವುದಾಗಿ ಘೋಷಿಸಿತು, ಇದು ಗುರುವಾರದಿಂದ ಭಾನುವಾರದವರೆಗೆ ನಡೆಯಲಿದೆ ಎಂದು ಹೇಳಿತು.












Click it and Unblock the Notifications